ಆಸ್ಪತ್ರೆಯಲ್ಲಿ ಹಾಸ್ಯನಟ: ವಿಡಿಯೋ ನೋಡಿ ಕಣ್ಣೀರಿಟ್ಟ ಅಭಿಮಾನಿಗಳು

ತಮಿಳಿನ ಜನಪ್ರಿಯ ಹಾಸ್ಯನಟ ಶ್ರೀನಿವಾಸನ್ ಆಸ್ಪತ್ರೆಗೆ ದಾಖಲಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ. ಹಲವು ವರ್ಷಗಳಿಂದ ತಮಿಳು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿಕೊಂಡಿರುವ ಶ್ರೀನಿವಾಸನ್, ಪವರ್‌ಸ್ಟಾರ್ ಎಂದು ತಮಿಳು ಚಿತ್ರರಂಗದಲ್ಲಿ ಜನಪ್ರಿಯರು.

ಕೆಲ ದಿನಗಳ ಹಿಂದೆ 'ಪಿಕಪ್ ಡ್ರಾಪ್' ಹೆಸರಿನ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದಾಗ ಶ್ರೀನಿವಾಸ್ ಹಠಾತ್ತನೆ ಪ್ರಜ್ಞೆ ತಪ್ಪಿ ಬಿದ್ದಿದ್ದರು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅವರ ರಕ್ತದೊತ್ತಡದಲ್ಲಿ ಭಾರಿ ಏರುಪೇರಾಗುತ್ತಿರುವುದು ಪರೀಕ್ಷೆಗಳಿಂದ ಗೊತ್ತಾಗಿತ್ತು, ಆಗನಿಂದಲೂ ಆಸ್ಪತ್ರೆಯಲ್ಲಿಯೇ ಇರುವ ಶ್ರೀನಿವಾಸನ್ ಸ್ಥಿತಿ ದಿನೇ-ದಿನೇ ಗಂಭೀರವಾಗುತ್ತಾ ಸಾಗಿದೆ.

ಆಸ್ಪತ್ರೆಯಲ್ಲಿರುವ ಶ್ರೀನಿವಾಸನ್ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಿನಿಮಾಗಳಲ್ಲಿ ಉತ್ಸಾಹದಿಂದ ಇರುತ್ತಿದ್ದ, ಎಲ್ಲರನ್ನೂ ನಗಿಸುತ್ತಿದ್ದ ಶ್ರೀನಿವಾಸನ್ ಆಸ್ಪತ್ರೆಯ ಬೆಡ್‌ ಮೇಲೆ ನೋವಿನಿಂದಾಗಿ ನರಳುತ್ತಿರುವ, ಸಹಾಯವಿಲ್ಲದೆ ಪಕ್ಕಕ್ಕೆ ಹೊರಳಲು ಆಗದ ಸ್ಥಿತಿಯಲ್ಲಿರುವ ದೃಶ್ಯಗಳನ್ನು ವಿಡಿಯೋ ಒಳಗೊಂಡಿದೆ.

Powerstar Srinivisan Is In Hospital, Fans Wished Speedy Recovery

ವಿಡಿಯೋದಲ್ಲಿ ಶ್ರೀನಿವಾಸನ್, ಬಹಳ ಕಷ್ಟಪಟ್ಟು ಫೋನಿನಲ್ಲಿ ತಮ್ಮ ಸಂಬಂಧಿಯೊಬ್ಬರೊಂದಿಗೆ ಮಾತನಾಡಲು ಯತ್ನಿಸುತ್ತಾರೆ, ಆದರೆ ಸುಸ್ತಾಗಿ ಪ್ರಜ್ಞಾಹೀನರಾಗಿಬಿಡುತ್ತಾರೆ. ಶ್ರೀನಿವಾಸನ್‌ರ ಈ ದುಃಸ್ಥಿತಿ ಕಂಡು ಅವರ ಅಭಿಮಾನಿಗಳು ಮರುಗಿದ್ದಾರೆ. ಶ್ರೀನಿವಾಸನ್‌ಗೆ ತಮಿಳು ಚಿತ್ರರಂಗ ಮತ್ತು ಸರ್ಕಾರ ಸೂಕ್ತ ನೆರವು ನೀಡಬೇಕು, ಅವರ ಆರೋಗ್ಯದ ವೆಚ್ಚ ಭರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಹಲವು ತಮಿಳು ಸಿನಿಮಾಗಳಲ್ಲಿ ನಟಿಸಿರುವ ಶ್ರೀನಿವಾಸನ್‌ಗೆ 2013ರಲ್ಲಿ ಬಿಡುಗಡೆ ಆದ 'ಕನ್ನ ಲಡ್ಡು ತಿನ್ನ ಆಸೆಯಾ' ಸಿನಿಮಾ ಜನಪ್ರಿಯತೆ ತಂದುಕೊಟ್ಟಿತು. ತಮಿಳಿನ ಹಲವು ಸ್ಟಾರ್ ಹೀರೋಗಳ ಜೊತೆಗೆ ನಟ ಪವರ್ ಸ್ಟಾರ್ ಶ್ರೀನಿವಾಸನ್ ನಟಿಸಿದ್ದಾರೆ. ತಾವೇ ಸಿನಿಮಾ ಒಂದನ್ನು ನಿರ್ಮಾಣ ಮಾಡಿ ನಾಯಕನಾಗಿಯೂ ನಟಿಸಿದ್ದಾರೆ ಶ್ರೀನಿವಾಸನ್.

More from Filmibeat

English summary
Tamil movie actor Power star Srinivasan admitted in hospital. his condition is critical. Video of Srinivasan getting viral on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X