ಪ್ರಭುದೇವ 2ನೇ ಮದುವೆಯನ್ನು ಖಚಿತ ಪಡಿಸಿದ ಸಹೋದರ; ಪತ್ನಿಯ ಹೆಸರು ಬಹಿರಂಗ
ನಟ, ನಿರ್ದೇಶಕ, ನತ್ಯ ಸಂಯೋಜಕ ಪ್ರಭುದೇವ 2ನೇ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮೊದಲ ಪತ್ನಿ ರಾಮಲತಾಗೆ ವಿಚ್ಛೇದನ ನೀಡಿದ ಬಳಿಕ ಒಂಟಿಯಾಗಿದ್ದ ಪ್ರಭುದೇವ ಲಾಕ್ ಡೌನ್ ಸಮಯದಲ್ಲಿ ರಹಸ್ಯವಾಗಿ 2ನೇ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಈ ಬಗ್ಗೆ ಈಗ ಪ್ರಭುದೇವ ಸಹೋದರ ರಾಜು ಸುಂದರಂ ಖಚಿತ ಪಡಿಸಿದ್ದಾರೆ ಎಂದು ಕೆಲವು ವೆಬ್ ಸೈಟ್ ಗಳು ವರದೆ ಮಾಡಿವೆ. ಪ್ರಭುದೇವ ಮುಂಬೈ ಮೂಲದ ಫಿಜಿಯೋಥೆರಪಿಸ್ಟ್ ಡಾ. ಹಿಮಾನಿ ಅವರನ್ನು ಮೇ ತಿಂಗಳಲ್ಲಿ ಮದುವೆಯಾಗಿದ್ದಾರೆ. ಈ ವಿಚಾರ ತುಂಬಾ ಸಂತಸ ತಂದಿದೆ ಎಂದು ರಾಜು ಸುಂದರಂ ಹೇಳಿದ್ದಾರೆ.
ಪ್ರಭುದೇವ ನೃತ್ಯ ಮಾಡುವಾಗ ಆಗಾಗ ಬೆನ್ನು ಮತ್ತು ಕಾಲು ನೋವಿನಿಂದ ಬಳಲುತ್ತಿದ್ದರಂತೆ. ಆಗ ಡಾ. ಹಿಮಾನಿ ಅವರ ಬಳಿ ಚಿಕಿತ್ಸೆಗೆ ಒಳಗಾಗಿದ್ದರಂತೆ. ಹೀಗೆ ಇಬ್ಬರು ಪರಿಚಯವಾಗಿದ್ದು, ಬಳಿಕ ಇಬ್ಬರ ನಡುವೆ ಪ್ರೀತಿ ಪ್ರಾರಂಭವಾಗಿ, ಮೇ ತಿಂಗಳಲ್ಲಿ ಇಬ್ಬರು ಚೆನ್ನೈನಲ್ಲಿ ಹಸೆಮಣೆ ಏರಿದ್ದಾರೆ. ಈ ಜೋಡಿ ಮಾರ್ಚ್ ನಲ್ಲೇ ಮದುವೆ ಆಗಬೇಕಿತ್ತಂತೆ ಆದರೆ ಲಾಕ್ ಡೌನ್ ನಿಂದ ಮೇ ತಿಂಗಳಲ್ಲಿ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಚೆನ್ನೈನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬದವರು ಮಾತ್ರ ಭಾಗಿಯಾಗಿದ್ದರು. ಇಬ್ಬರು ಕೆಲವು ತಿಂಗಳಿಂದ ಲೀವ್ ಇನ್ ರಿಲೇಶನ್ ಶಿಪ್ ನಲ್ಲಿದ್ದರು ಎಂದು ವರದಿಯಾಗಿದೆ.
ಅಂದಹಾಗೆ ಪ್ರಭುದೇವ 1995ರಲ್ಲಿ ರಾಮಲತಾ ಜೊತೆ ಮದುವೆಯಾಗಿದದ್ರು. ಮೊದಲ ಪತ್ನಿಗೆ ಮೂವರು ಮಕ್ಕಳು. ಅದರಲ್ಲಿ ಒಬ್ಬ ಮಗ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಆದರೆ, ದಾಂಪತ್ಯ ಕಲಹ ಹಿನ್ನೆಲೆ 2011ರಲ್ಲಿ ರಾಮಲತಾ ಅವರಿಂದ ಪ್ರಭುದೇವ ಡಿವೋರ್ಸ್ ಪಡೆದು ಇಬ್ಬರು ದೂರ ದೂರ ಆಗಿದ್ದಾರೆ.
ಬಳಿಕ ನಟಿ ನಯನತಾರಾ ಜೊತೆ ಡೇಟಿಂಗ್ ನಲ್ಲಿದ್ದರು. ಇಬ್ಬರು ಮದುವೆ ಆಗುತ್ತಾರೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು. ಆದರೆ ಇಬ್ಬರು ಬೇರೆ ಬೇರೆ ಆಗುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದರು. ಬಳಿಕ ಏಕಾಂಗಿಯಾಗಿ ಬದುಕುತ್ತಿದ್ದ ಪ್ರಭುದೇವ ಇದೀಗ ಹಿಮಾನಿ ಜೊತೆ ಸಪ್ತಪದಿ ತುಳಿದಿದ್ದಾರೆ.


Click it and Unblock the Notifications











