For Quick Alerts
  ALLOW NOTIFICATIONS  
  For Daily Alerts

  'ನನ್ನ ಸಂಸಾರ ಹಾಳು ಮಾಡಿದ್ದೇ ನಯನತಾರಾ': ಕಿಡಿಕಾರಿದ ಪ್ರಭುದೇವ ಮಾಜಿ ಪತ್ನಿ

  |

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ನಯನತಾರಾ ಇತ್ತೀಚಿಗೆ ಸಂದರ್ಶವೊಂದರಲ್ಲಿ ಬ್ರೇಕ್ ಅಪ್ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದರು. "ನಂಬಿಕೆ ಇಲ್ಲದ ಕಡೆ ಪ್ರೀತಿ ಇರುವುದಿಲ್ಲ. ನಂಬಿಕೆ ಇಲ್ಲದವರ ಜೊತೆ ಇರುವುದಕ್ಕಿಂತ, ಒಬ್ಬರೇ ಇರುವುದು ಉತ್ತಮ" ಎಂದು ಮಾಜಿ ಪ್ರೇಮಿಯಿಂದ ದೂರವಾದ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು.

  ದರ್ಬಾರ್ ಟಿಕೆಟ್ ರೇಟ್ ತಮಿಳುನಾಡಿಗಿಂತ ಕರ್ನಾಟಕದಲ್ಲೇ ಜಾಸ್ತಿ | DARBAR | RAJNI KANTH | FILMIBEAT KANNADA

  ಇದರ ಬೆನ್ನಲ್ಲೆ ಈಗ ನಟ ಪ್ರಭುದೇವ ಮಾಜಿ ಪತ್ನಿ ರಾಮಲತಾ ನಯನತಾರಾ ವಿರುದ್ಧ ಸಿಡಿದೆದ್ದಿದ್ದಾರೆ. ನಟ ಪ್ರಭುದೇವ ಮತ್ತು ನಯನತಾರಾ ನಡುವಿನ ಪ್ರೀತಿ, ಪ್ರೇಮದ ವಿಚಾರ ಮುಗಿದು ವರ್ಷಗಳೆ ಆಗಿವೆ. ಆದರೀಗ ಮತ್ತೆ ಸದ್ದು ಮಾಡುತ್ತಿದೆ. ನಯನತಾರಾ ಮಾತನಾಡಿರುವ ಬೆನ್ನಲ್ಲೆ ರಾಮಲತಾ ಮಾತುಗಳು ವೈರಲ್ ಆಗುತ್ತಿದೆ. ಮುಂದೆ ಓದಿ..

  ಲವ್ ಬ್ರೇಕ್ ಅಪ್ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ನಯನತಾರಾಲವ್ ಬ್ರೇಕ್ ಅಪ್ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ನಯನತಾರಾ

  1995ರಲ್ಲಿ ಮದುವೆಯಾಗಿದ್ದ ಪ್ರಭುದೇವ ಮತ್ತು ರಾಮಲತಾ

  1995ರಲ್ಲಿ ಮದುವೆಯಾಗಿದ್ದ ಪ್ರಭುದೇವ ಮತ್ತು ರಾಮಲತಾ

  ರಾಮಲತಾ ಮತ್ತು ಪ್ರಭುದೇವ ಇಬ್ಬರು 1995ರಲ್ಲಿ ಹಸೆಮಣೆ ಏರಿದ್ದರು. ಈ ದಂಪತಿಗೆ ಮೂವರು ಮಕ್ಕಳು. ಆದರೆ ಒಬ್ಬ ಮಗ 2008ರಲ್ಲಿ ನಿಧನಹೊಂದಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮೊದಲ ಮಗನನ್ನು ವಿಚ್ಛೇದನಕ್ಕೂ ಮೊದಲೆ ಕಳೆದುಕೊಳ್ಳುತ್ತಾರೆ ಪ್ರಭುದೇವ ಮತ್ತು ನಯನತಾರಾ.

  2012ರಲ್ಲಿ ಪ್ರಭುದೇವ-ರಾಮಲತಾ ವಿಚ್ಛೇದನ

  2012ರಲ್ಲಿ ಪ್ರಭುದೇವ-ರಾಮಲತಾ ವಿಚ್ಛೇದನ

  ರಾಮಲತಾ ಮೂಲತಹ ಮುಸ್ಲಿಂ ಸಮೂದಾಯದವರು. ಪ್ರಭುದೇವಗಾಗಿ ಮುಸ್ಲಿಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರವಾಗಿ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ. 1995ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಪ್ರಭುದೇವ ಮತ್ತು ರಾಮಲತಾ, 2012ರಲ್ಲಿ ವಿಚ್ಛೇದನ ಪಡೆದು ದೂರ ದೂರ ಆಗುತ್ತಾರೆ. 15 ವರ್ಷದ ದಾಂಪತ್ಯ ಜೀವನಕ್ಕೆ ಎಳ್ಳು-ನೀರು ಬಿಟ್ಟು ಇಬ್ಬರು ಬೇರೆ ಬೇರೆ ಆಗುತ್ತಾರೆ.

  ನಯನತಾರಾನಿಂದ ನನ್ನ ಸಂಸಾರ ಹಾಳಾಯಿತು

  ನಯನತಾರಾನಿಂದ ನನ್ನ ಸಂಸಾರ ಹಾಳಾಯಿತು

  ನಯನತಾರಾ ಮತ್ತು ಪ್ರಭುದೇವ ಇಬ್ಬರು ಲೀವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದರು ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಯಾವಾಗ ನಯನತಾರಾ, ಪ್ರಭುದೇವ ಲೈಫ್ ಗೆ ಎಂಟ್ರಿ ಕೊಟ್ಟರೊ ಆಗಲೆ ಪ್ರಭುದೇವ ಪತ್ನಿ ರಾಮಲತಾಯಿಂದ ದೂರ ಆಗುತ್ತಾರೆ. ನಯನತಾರಾ ಬಂದ ಮೇಲೆ ನನ್ನ ಸಂಸಾರ ಹಾಳಾಯಿತು ಎನ್ನುವ ಸಿಟ್ಟು ರಾಮಲತಾ ಅವರಿಗೆ ಇನ್ನೂ ಕಮ್ಮಿ ಆಗಿಲ್ಲ.

  ನನ್ನ ಪತಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು

  ನನ್ನ ಪತಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು

  "ಪ್ರಭುದೇವ ನಿಷ್ಠಾವಂತ ಪತಿಯಾಗಿದ್ದರು. ನನ್ನನ್ನು 15 ವರ್ಷಗಳ ಕಾಲ ತುಂಬಾ ಚೆನ್ನಾಗಿಯೇ ನೋಡಿಕೊಂಡಿದ್ದರು. ನಮಗಾಗಿ ಮನೆ ಕೂಡ ಖರೀದಿ ಮಾಡಿದ್ದರು. ಆದರೆ ನಯನತಾರಾ ಬಂದಮೇಲೆ ಎಲ್ಲವೂ ಬದಲಾಯಿತು. ನಯನತಾರಾಳಿಂದ ಪ್ರಭುದೇವ ನಡುವಳಿಕೆ ನನಗೆ ಮಾತ್ರವಲ್ಲ, ಅವರ ಕುಟುಂಬದವರಿಗೂ ಶಾಕ್ ಆಯಿತು" ಎಂದು ಹೇಳಿದ್ದಾರೆ.

  ಆಕೆಯನ್ನು ಎಲ್ಲಾದರು ನೋಡಿದರೆ ಖಂಡಿತ ಹೊಡೆಯುತ್ತೇನೆ

  ಆಕೆಯನ್ನು ಎಲ್ಲಾದರು ನೋಡಿದರೆ ಖಂಡಿತ ಹೊಡೆಯುತ್ತೇನೆ

  "ಇಂತಹ ಮಹಿಳೆಯರಿಗೆ ಸರಿಯಾದ ಶಿಕ್ಷೆಯಾಗಬೇಕು. ಈ ವಿಚಾರವಾಗಿ ಕಾನೂನು ಹೋರಾಟ ಮಾಡುತ್ತಿದ್ದೇನೆ. ನನ್ನ ಪತಿ ಆಕೆಯ ಪ್ರೀತಿಯಲ್ಲಿ ಬಿದ್ದಿಲ್ಲ. ನನ್ನ ಪತಿಯನ್ನು ವಶೀಕರಣ ಮಾಡಿ ಒಲಿಸಿಕೊಂಡಿದ್ದಾರೆ. ನಯನತಾರಾಳನ್ನು ಎಲ್ಲಾದರು ನೋಡಿದರೆ ಖಂಡಿತ ಹೊಡೆಯುತ್ತೇನೆ. ಕೆಟ್ಟ ಮಹಿಳೆಯರಿಗೆ ಆಕೆ ಅತ್ಯುತ್ತಮ ಉದಾಹರಣೆ" ಎಂದು ಹೇಳಿದ್ದಾರೆ.

  ನಯನತಾರಾ ಮತ್ತು ಪ್ರಭುದೇವ ಪ್ರೀತಿಯೂ ಮುರಿದು ಬಿದ್ದಿದೆ

  ನಯನತಾರಾ ಮತ್ತು ಪ್ರಭುದೇವ ಪ್ರೀತಿಯೂ ಮುರಿದು ಬಿದ್ದಿದೆ

  ಪತ್ನಿಗೆ ವಿಚ್ಛೇದನ ನೀಡಿ ನಯನತಾರಾ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದ ಪ್ರಭುದೇವ ನಂತರ ನಯನತಾರಾಯಿಂದನೂ ದೂರ ಆಗುತ್ತಾರೆ. ಸುಮಾರು ನಾಲ್ಕು ವರ್ಷದ ಪ್ರೀತಿಯನ್ನು ಕಡಿದುಕೊಂಡು ನಯನತಾರಾ ಮತ್ತು ಪ್ರಭುದೇವ ಸದ್ಯ ಬೇರೆ ಬೇರೆಯಾಗಿದ್ದಾರೆ. ಪ್ರಭುದೇವ ಸದ್ಯ ಪತ್ನಿಯಿಂದ ದೂರವಾಗಿ, ಪ್ರೇಯಸಿಯೂ ಸಿಗದೆ ಏಕಾಂಗಿ ಜೀವನ ನಡೆಸುತ್ತಿದ್ದಾರೆ. ನಯನತಾರಾ ಸದ್ಯ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸುತ್ತಿದ್ದು, ಈ ವರ್ಷದ ಕೊನೆಯಲ್ಲಿ ಹಸೆಮಣೆ ಏರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

  English summary
  Actor Prabhudeva ex-wife Ramalatha grudge on Actress Nayanatara.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X