ಎರಡನೇ ಪತ್ನಿ ಪರಿಚಯ ಮಾಡಲು ಪ್ರೆಸ್‌ಮೀಟ್ ಮಾಡಲಿದ್ದಾರೆ ಪ್ರಭುದೇವ!
ನಟ-ನಿರ್ದೇಶಕ ಪ್ರಭುದೇವ ಎರಡನೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮುಂಬೈ ಮೂಲದ ಫಿಜಿಯೋಥೆರಪಿಸ್ಟ್ ಡಾ ಹಿಮಾನಿ ಜೊತೆ ಸಪ್ತಪದಿ ತುಳಿದಿದ್ದಾರೆ ಎಂದು ಹೇಳಲಾಗಿದೆ.
ಈ ಮದುವೆ ಬಗ್ಗೆ ಪ್ರಭುದೇವ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಪ್ರಭುದೇವ ಸಹೋದರ ರಾಜು ಸುಂದರಂ ಖಚಿತಪಡಿಸಿದ್ದರು. ಪ್ರಭುದೇವ ಮುಂಬೈ ಮೂಲದ ಡಾ ಹಿಮಾನಿ ಅವರನ್ನು ಮೇ ತಿಂಗಳಲ್ಲಿ ಮದುವೆಯಾಗಿದ್ದಾರೆ. ಈ ವಿಚಾರ ತುಂಬಾ ಸಂತಸ ತಂದಿದೆ ಎಂದು ರಾಜು ಸುಂದರಂ ಹೇಳಿದ್ದರು.
ಪ್ರಭುದೇವ ನೃತ್ಯ ಮಾಡುವಾಗ ಆಗಾಗ ಬೆನ್ನು ಮತ್ತು ಕಾಲು ನೋವಿನಿಂದ ಬಳಲುತ್ತಿದ್ದರಂತೆ. ಆಗ ಡಾ. ಹಿಮಾನಿ ಅವರ ಬಳಿ ಚಿಕಿತ್ಸೆಗೆ ಒಳಗಾಗಿದ್ದರಂತೆ. ಹೀಗೆ ಇಬ್ಬರು ಪರಿಚಯವಾಗಿದ್ದು, ಬಳಿಕ ಇಬ್ಬರ ನಡುವೆ ಪ್ರೀತಿ ಪ್ರಾರಂಭವಾಗಿ, ಮೇ ತಿಂಗಳಲ್ಲಿ ಇಬ್ಬರು ಚೆನ್ನೈನಲ್ಲಿ ಹಸೆಮಣೆ ಏರಿದ್ದಾರೆ. ಈ ಜೋಡಿ ಮಾರ್ಚ್ ನಲ್ಲೇ ಮದುವೆ ಆಗಬೇಕಿತ್ತಂತೆ ಆದರೆ ಲಾಕ್ ಡೌನ್ ನಿಂದ ಮೇ ತಿಂಗಳಲ್ಲಿ ಮದುವೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಸುಮಾರು ತಿಂಗಳ ಬಳಿಕ ಪ್ರಭುದೇವ ವಿವಾಹವಾಗಿರುವುದು ಬಹಿರಂಗವಾದ ಹಿನ್ನೆಲೆ ಅಧಿಕೃತವಾಗಿ ಪ್ರೆಸ್ ಮೀಟ್ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಸುದ್ದಿಗೋಷ್ಠಿ ನಡೆಸಿ ತಮ್ಮ ಎರಡನೇ ಪತ್ನಿಯನ್ನು ಪರಿಚಯ ಮಾಡಿಕೊಡಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
1995ರಲ್ಲಿ ರಾಮಲತಾ ಜೊತೆ ಮದುವೆ ಆಗಿದ್ದ ಪ್ರಭುದೇವ ಅವರಿಗೆ ಮೂವರು ಮಕ್ಕಳು. ಅದರಲ್ಲಿ ಒಬ್ಬ ಮಗ ಅನಾರೋಗ್ಯದಿಂದ ಮೃತಪಟ್ಟಿದ್ದ. ಆದರೆ, ದಾಂಪತ್ಯ ಕಲಹ ಹಿನ್ನೆಲೆ 2011ರಲ್ಲಿ ರಾಮಲತಾ ಅವರಿಂದ ಪ್ರಭುದೇವ ಡಿವೋರ್ಸ್ ಪಡೆದುಕೊಂಡರು.
ಇದಕ್ಕೂ ಮುಂಚೆ ಖ್ಯಾತ ನಟಿ ನಯನತಾರ ಜೊತೆ ಪ್ರಭುದೇವ ಪ್ರೀತಿಯಲ್ಲಿದ್ದರು. ಹಲವು ವರ್ಷಗಳ ಕಾಲ ಇಬ್ಬರು ಲಿವ್ ಇನ್ ರಿಲೇಶನ್‌ಷಿಪ್ ಸಂಬಂಧ ಹೊಂದಿದ್ದರು. ಈ ಸಂಬಂಧದಿಂದಲೇ ರಾಮಲತಾ ದಾಂಪತ್ಯ ಮುರಿದು ಬಿತ್ತು ಎಂದು ಹೇಳಲಾಗಿದೆ. ನಯನತಾರ ವಿರುದ್ಧ ಮಹಿಳಾ ಸಂಘಟನೆಗಳು ತಿರುಗಿ ಬಿದ್ದಿದ್ದವು. ತದನಂತರ ಪ್ರಭುದೇವ ಅವರಿಂದ ನಯನತಾರ ದೂರವಾಗಿದ್ದರು.


Click it and Unblock the Notifications











