For Quick Alerts
  ALLOW NOTIFICATIONS  
  For Daily Alerts

  ಐಶ್ವರ್ಯ ರೈ ಮೆಗಾ ಪ್ರಾಜೆಕ್ಟ್‌ನಲ್ಲಿ ಪ್ರಕಾಶ್ ರಾಜ್ ನಟನೆ

  |

  ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದಲ್ಲಿ ತಯಾರಾಗುತ್ತಿರುವ ಪೊನ್ನಿಯನ್ ಸೆಲ್ವನ್ ಚಿತ್ರಕ್ಕೆ ಮತ್ತೊಬ್ಬ ಸ್ಟಾರ್ ಕಲಾವಿದ ಎಂಟ್ರಿಯಾಗಿದ್ದಾರೆ. ಬಹುಭಾಷೆ ನಟ ಪ್ರಕಾಶ್ ರಾಜ್ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಆಯ್ಕೆಯಾಗಿದ್ದಾರೆ.

  ಈ ಬಗ್ಗೆ ನಟ ಪ್ರಕಾಶ್ ರಾಜ್ ಸಂತಸ ಹಂಚಿಕೊಂಡಿದ್ದು, ಸುಮಾರು 23 ವರ್ಷದ ಚಿತ್ರವನ್ನು ಸ್ಮರಿಸಿಕೊಂಡಿದ್ದಾರೆ. ''23 ವರ್ಷದ ಹಿಂದೆ ಇರುವನ್ ಚಿತ್ರದಲ್ಲಿ ಮಣಿರತ್ನಂ ಅವರ ಜೊತೆ ಕೆಲಸ ಆರಂಭಿಸಿದ್ದೆ, ಈಗ ಅದನ್ನು ಮುಂದುವರಿಯುತ್ತಿದೆ. ಏನೋ ಒಂದು ರೀತಿ ಸಂತೋಷ, ಹೊಸತನ ಕಂಡುಕೊಳ್ಳಬಹುದು ಎಂಬ ಆಶಯ'' ಎಂದು ಟ್ವೀಟ್ ಮಾಡಿದ್ದಾರೆ.

  ಜನವರಿ 6 ರಿಂದ ಹೈದರಾಬಾದ್‌ನಲ್ಲಿ ಪೊನ್ನಿಯನ್ ಸೆಲ್ವನ್ ಚಿತ್ರೀಕರಣ ಆರಂಭಜನವರಿ 6 ರಿಂದ ಹೈದರಾಬಾದ್‌ನಲ್ಲಿ ಪೊನ್ನಿಯನ್ ಸೆಲ್ವನ್ ಚಿತ್ರೀಕರಣ ಆರಂಭ

  ಅಂದ್ಹಾಗೆ, 'ಪೊನ್ನಿಯನ್ ಸೆಲ್ವನ್' ಚಿತ್ರದಲ್ಲಿ ಪ್ರಕಾಶ್ ರಾಜ್ ಅವರದ್ದು ಯಾವ ಪಾತ್ರ ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ಐಶ್ವರ್ಯ ರೈ ಅವರ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

  1997ರಲ್ಲಿ ತೆರೆಕಂಡಿದ್ದ 'ಇರುವನ್' ಚಿತ್ರದಲ್ಲಿ ಮೋಹನ್ ಲಾಲ್, ಪ್ರಕಾಶ್ ರಾಜ್, ಐಶ್ವರ್ಯ ರೈ, ರೇವತಿ, ಟಬು, ಗೌತಮಿ ಅಂತಹ ಪ್ರಮುಖ ಕಲಾವಿದರು ನಟಿಸಿದ್ದರು. ಅಂತಹದ್ದೇ ಕಲಾವಿದರ ದಂಡು ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿಯೂ ಕಂಡು ಬರುತ್ತಿದೆ.

  ಲಾಕ್‌ಡೌನ್‌ನಿಂದ ಕಂಬ್ಯಾಕ್ ಮಾಡಿರುವ ಮಣಿರತ್ನಂ ಪೊನ್ನಿಯನ್ ಸೆಲ್ವನ್ ಚಿತ್ರೀಕರಣ ಪುನರಾರಂಭಿಸಿದ್ದಾರೆ. ಪೊನ್ನಿಯನ್ ಸೆಲ್ವನ್ ಚಿತ್ರವನ್ನು ಎರಡು ಭಾಗಗಳಲ್ಲಿ ತಯಾರಿಸಲು ನಿರ್ದೇಶಕ ಮಣಿರತ್ನಂ ಪ್ಲಾನ್ ಮಾಡಿದ್ದಾರೆ ಎಂದು ಈ ಹಿಂದೆಯೇ ವರದಿಯಾಗಿದೆ. ಎ ಆರ್ ರೆಹಮಾನ್ ಚಿತ್ರಕ್ಕೆ ಸಂಗೀತ ಒದಗಿಸುತ್ತಿದ್ದು, ಲೈಕಾ ಪ್ರೊಡಕ್ಷನ್ ಬಂಡವಾಳ ಹಾಕಿದ್ದಾರೆ.

  ಮಣಿರತ್ನಂ ಚಿತ್ರದಲ್ಲಿ ಐಶ್ವರ್ಯ ರೈ ಪಕ್ಕಾ: ಹೊಸ ವರ್ಷಕ್ಕೆ ಅಚ್ಚರಿಮಣಿರತ್ನಂ ಚಿತ್ರದಲ್ಲಿ ಐಶ್ವರ್ಯ ರೈ ಪಕ್ಕಾ: ಹೊಸ ವರ್ಷಕ್ಕೆ ಅಚ್ಚರಿ

  ಚಿತ್ರದ ಪ್ರಧಾನ ಪಾತ್ರದಲ್ಲಿ ತ್ರಿಷಾ ನಟಿಸಿದ್ದಾರೆ. ವಿಕ್ರಂ, ಕಾರ್ತಿ, ಐಶ್ವರ್ಯ ರೈ ಬಚ್ಚನ್, ಅಮಿತಾಭ್ ಬಚ್ಚನ್, ವಿಕ್ರಂ ಪ್ರಭು, ಜಯಂ ರವಿ, ಐಶ್ವರ್ಯ ಲಕ್ಷ್ಮಿ, ಕಿಶೋರ್, ಸಾರಾ ಅರ್ಜುನ್ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ.

  English summary
  Indian actor Prakash raj playing important role in mani ratnam's ponniyin selvan movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X