For Quick Alerts
  ALLOW NOTIFICATIONS  
  For Daily Alerts

  ಈ ಸಮಸ್ಯೆಯಿಂದ ತೂಕ ಇಳಿಸಲು ಸಾಧ್ಯವಾಗುತ್ತಿಲ್ಲ; ಬಾಡಿ ಶೇಮಿಂಗ್ ಬಗ್ಗೆ 'ಗೀತಾ' ನಟಿಯ ಬೇಸರ

  |

  ನಟಿಯರು ಫಿಟ್ನೆಸ್ ಕಡೆ ಹೆಚ್ಚು ಗಮನ ಕೊಡುತ್ತಾರೆ. ಸ್ವಲ್ಪ ದಪ್ಪ ಅಥವಾ ತೆಳ್ಳಗಾದರೆ ಸಾಕು ಬಾಡಿ ಶೇಮಿಂಗ್‌ಗೆ ಗುರಿಯಾಗುತ್ತಾರೆ. ಅಲ್ಲದೆ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಸಹ ಕಡಿಮೆಯಾಗುತ್ತಾ ಹೋಗುತ್ತೆ. ಹಾಗಾಗಿ ಸದಾ ಡಯಟ್, ಫಿಟ್ನೆಸ್, ವರ್ಕೌಟ್ ಅಂತ ಹೆಚ್ಚು ತಲೆಕೆಡಿಸಿಕೊಂಡಿರುತ್ತಾರೆ.

  ಅನೇಕ ನಟಿಯರು ಬಾಡಿ ಶೇಮಿಂಗ್‌ಗೆ ಗುರಿಯಾಗಿದ್ದಾರೆ. ಕನ್ನಡದ ಗೀತಾ ಸಿನಿಮಾದಲ್ಲಿ ನಟಿಸಿದ್ದ ಪ್ರಗ್ಯಾ ಮಾರ್ಟಿನ್ ಕೂಡ ಬಾಡಿ ಶೇಮಿಂಗ್ ಅನುಭವಸಿದ್ದಾರೆ. ಈ ಬಗ್ಗೆ ಸ್ವತಃ ಬಹಿರಂಗ ಪಡಿಸಿದ್ದಾರೆ. ಆಂಗ್ಲ ವೆಬ್ ಪೋರ್ಟಲ್ ಪಿಂಕ್ ವಿಲ್ಲಾಗೆ ಜೊತೆ ಮಾತನಾಡಿರುವ ಪ್ರಗ್ಯಾ, ದಪ್ಪಗಾಗಿರುವ ಬಗ್ಗೆ ಅನೇಕರು ಕಾಮೆಂಟ್ ಮಾಡುತ್ತಾರೆ, ತೆಳ್ಳಗಾಗುವಂತೆ ಸೂಚಿಸುತ್ತಿರುತ್ತಾರೆ ಎಂದು ಹೇಳಿದ್ದಾರೆ.

  ಪ್ರಗ್ಯಾ ಸದ್ಯ ತಮಿಳಿನ ವೆಬ್ ಸೀರಿಸ್ 'ನವರಸ'ದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ನವರಸ ಸೀರಿಸ್ ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿದೆ. ಬಹುದೊಡ್ಡ ತಾರಾಬಳಗ ಇರುವ ನವರಸ ಸೀರಿಸ್‌ನಲ್ಲಿ ತಮಿಳು ನಟ ಸೂರ್ಯ, ವಿಜಯ್ ಸೇತುಪತಿ, ಸಿದ್ಧಾರ್ಥ್ ಸೇರಿದಂತೆ ಅನೇಕರಿದ್ದಾರೆ. ಈ ವೆಬ್‌ಸೀರಿಸ್‌ನಲ್ಲಿ ನಟಿ ಪ್ರಗ್ಯಾ ಕೂಡ ನಟಿಸಿದ್ದಾರೆ.

  ನಟ ಸೂರ್ಯ ಜೊತೆ ಕೆಲಸ ಮಾಡಿರುವ ಅನುಭವ ಹಂಚಿಕೊಂಡಿರುವ ಪ್ರಗ್ಯಾ, "ಅದ್ಭುತ, ನನಗೆ ಪದಗಳೇ ಸಿಗುತ್ತಿಲ್ಲ ಹೇಳಲು. ಸೂರ್ಯ ಸರ್ ಚಿತ್ರರಂಗದ ಸೂಪರ್ ಸ್ಟಾರ್. ನಮ್ಮನ್ನು ತಾವು ಸಾಬೀತುಪಡಿಸಿಕೊಂಡ ನಟ. ನಾನು ನಟಿಯಾಗಿ ಮಾತ್ರವಲ್ಲ, ಪ್ರೇಕ್ಷಕಳಾಗಿ ಸೂರ್ಯ ಸರ್ ಮತ್ತು ನಿರ್ದೇಶಕ ಗೌತಮ್ ಮೆನನ್ ಅವರಿಂದ ತುಂಬಾ ನಿರೀಕ್ಷೆ ಮಾಡುತ್ತೇನೆ. ಅವರು ಯಾವಾಗಲು ಮ್ಯಾಜಿಕ್ ಸೃಷ್ಟಿಮಾಡುತ್ತಾರೆ. ಉತ್ತಮವಾಗಿ ಮೂಡಿಬಂದಿದೆ ಎನ್ನುವ ನಿರೀಕ್ಷೆಯಲ್ಲಿದ್ದೀನಿ. ಸೂರ್ಯ ಸರ್ ಅತ್ಯಂತ ವೃತ್ತಿಪರ ನಟ. ಅವರೊಂದಿಗೆ ಕೆಲಸ ಮಾಡಿದ್ದು ಅದ್ಭುತವಾಗಿತ್ತು" ಎಂದು ಹೇಳಿದ್ದಾರೆ.

  ಇನ್ನು ಸೆಲೆಬ್ರಿಟಿಗಳ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ ಪ್ರಗ್ಯಾ, ತನ್ನ ತೂಕದ ಬಗ್ಗೆ ತುಂಬಾ ಜನ ಮಾತನಾಡುತ್ತಾರೆ ಎಂದು ಹೇಳಿದ್ದಾರೆ. ಆದರೆ ತನಗೆ ಪಿಸಿಓಡಿ (ಋತುಚಕ್ರ) ಸಮಸ್ಯೆ ಇರುವುದರಿಂದ ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಅದು ಯಾರಿಗೂ ಗೊತ್ತಾಗಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  "ನನ್ನ ತೂಕದ ಬಗ್ಗೆ ತುಂಬಾ ಮಾತನಾಡುತ್ತಾರೆ. ಕೆಲವು ಕೆ.ಜಿ ಕಡಿಮೆ ಮಾಡಿಕೊಳ್ಳಿ ಎಂದು ಸದಾ ಹೇಳುತ್ತಿರುತ್ತಾರೆ. ನೀವು ಸ್ವಲ್ಪ ತೆಳು ಆದರೆ ಇನ್ನು ಚೆನ್ನಾಗಿ ಕಾಣುತ್ತೀರಿ ಎಂದು ಅನೇಕರು ಹೇಳುತ್ತಿರುತ್ತಾರೆ. ಒಂದು ರೀತಿಯಲ್ಲಿ ಸರಿ ಎಂದು ಕಾಣುತ್ತದೆ. ನಾನು ಅದನ್ನು ಅಲ್ಲಗಳೆಯುವುದಿಲ್ಲ. ಆದರೆ ನನಗೆ ಪಿಸಿಓಡಿ ಸಮಸ್ಯೆ ಇರುವುದರಿಂದ ತೂಕ ಇಳಿಸುವುದು ತುಂಬಾ ಕಷ್ಟ. ಇದು ಬಹಳಷ್ಟು ಜನರಿಗೆ ತಿಳಿದಿಲ್ಲ. ನಾನು ಪಿಸಿಓಡಿ ಸಮಸ್ಯೆ ಹೊಂದಿದ್ದೀನಿ ಎಂದು ಹೇಳಲು ಹಿಂಜರಿಯುವುದಿಲ್ಲ. ಏಕೆಂದರೆ ಅವರ ತೂಕ ಇಳಿಸಿಕೊಳ್ಳಲು ತುಂಬಾ ಪ್ರಯತ್ನ ಪ್ರಯತ್ನಿಸಿದ ನಂತರವೂ ಸಾಧ್ಯವಾಗುವುದಿಲ್ಲ" ಎಂದಿದ್ದಾರೆ.

  "ಹಾಗಾಗಿ ಒಬ್ಬ ನಟಿಯನ್ನು ದೇಹದ ಆಧಾರದ ಮೇಲೆ ಜಡ್ಜ ಮಾಡುವುದನ್ನು ಮೊದಲು ನಿಲ್ಲಿಸಬೇಕು. ಒಬ್ಬ ನಟನನ್ನು ಮೊದಲು ಮನುಷ್ಯನಾಗಿ ನೋಡಲು ಅರಂಭಿಸಿದರೆ ಸಾಕಷ್ಟು ಬದಲಾವಣೆಗಳಾಗುತ್ತವೆ. ಮಾನಸಿಕ ಆರೋಗ್ಯ ಸಮಸ್ಯೆಗಳಲ್ಲಿ ಅನೇಕ ವೈವಿಧ್ಯತೆಗಳಿವೆ" ಎಂದು ಪ್ರಗ್ಯಾ ಮಾನಸಿಕ ಆರೋಗ್ಯ ಮತ್ತು ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ.

  ಪ್ರಗ್ಯಾ, ನವರಸ ವೆಬ್ ಸೀರಿಸ್‌ನಲ್ಲಿ ನಟ ಸೂರ್ಯ ಜೊತೆ ತೆರೆಹಂಚಿಕೊಂಡಿದ್ದಾರೆ. ಗೌತಮ್ ಮೆನನ್ ನಿರ್ದೇಶನ ಮಾಡಿದ್ದಾರೆ. ಇದೊಂದು ರೊಮ್ಯಾಂಟಿಂಗ್ ಚಿತ್ರವಾಗಿದೆ. ಮಣಿರತ್ನಂ ನಿರ್ಮಾಣದಲ್ಲಿ ಮೂಡಿಬರುತ್ತಿರುವ ನವರಸ ಆಗಸ್ಟ್ 6ರಂದು ಬಿಡುಗಡೆಯಾಗಿದೆ.

  ನಟಿ ಪ್ರಗ್ಯಾ ಮಾರ್ಟಿನ್ ಬಾಲನಟಿಯಾಗಿ ಬಣ್ಣದ ಲೋಕ ಪ್ರವೇಶ ಮಾಡಿದವರು. ಮಲಯಾಳಂ ಸಿನಿಮಾರಂಗದಿಂದ ಸಿನಿ ಪಯಣ ಪ್ರಾಂಭಿಸಿದ ಪ್ರಗ್ಯಾ ತಮಿಳು ಮತ್ತು ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ಕನ್ನಡ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಗೀತಾ' ಸಿನಿಮಾದಲ್ಲಿ ಪ್ರಗ್ಯಾ ಕಾಣಿಸಿಕೊಂಡಿದ್ದಾರೆ.

  English summary
  Actress Prayaga Martin opens up on her working experience with Suriya in the Netflix's Navarasa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X