ಕೇವಲ 48 ಗಂಟೆ ; TVK ಸೇರಿದ 2 ದಿನದಲ್ಲೇ ವಿಜಯ್ ಪರ ಡಿವೋರ್ಸ್‌ಗೆ ವಕಾಲತ್ತು, ದಳಪತಿಯ ಆಸ್ಥಾನಕ್ಕೆ ಬಂದ ಈ ವಕೀಲೆ ಯಾರು ?

ಯಾರಿಗೆ ಎಲ್ಲಿ, ಹೇಗೆ ಅದೃಷ್ಟ ಒಲಿಯುತ್ತದೆ ಎಂಬುದನ್ನು ಯಾರಿಂದನೂ ಊಹಿಸಲು ಸಾಧ್ಯ ಇಲ್ಲ. ಕುರಿಕಾಯುತ್ತಾ ತನಗಿಷ್ಟ ಬಂದಂತೆ ಹಾಡುತ್ತಿದ್ದ ಹನುಮಂತ ಸರಿಗಮಪ ಸೀಜನ್ 15ರ ರನ್ನರ್ ಅಪ್ ಆಗುತ್ತಾನೆಂದರೆ ತಮಾಷೆಯ ಮಾತೇ.? ಇನ್ನೂ ಕೇವಲ ಕಣ್ಸನ್ನೆಯಿಂದ ರಾತ್ರೋರಾತ್ರಿ ನ್ಯಾಷನಲ್ ಕ್ರಶ್ ಆಗಿ ಬೇಡಿಕೆ ಸೃಷ್ಟಿಸಿಕೊಂಡ ಪ್ರಿಯಾ ವಾರಿಯರ್ ಅವರದ್ದು ಅದೃಷ್ಟವಲ್ಲದೇ ಮತ್ತೇನು..?

ಇಷ್ಟೇ ಯಾಕೆ..ರೈಲ್ವೆ ಸ್ಟೇಷನ್ನಿನಲ್ಲಿ ಹಾಡುತ್ತಿದ್ದ ರಾಣು ಮಂಡಾಲ್ ರಾತ್ರೋ ರಾತ್ರಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದು ಕೂಡ ಇದೇ ಅದೃಷ್ಟದಿಂದ ಅಲ್ಲವೇ..? ದೆಹಲಿಯ ಚಂದ್ರಿಕಾ ದೀಕ್ಷಿತ್ ಕಥೆ ಕೂಡ ಭಿನ್ನವಾಗಿಲ್ಲ. ಸದ್ಯ ಇದೇ ಸಾಲಿಗೆ ಪ್ರೀತಿ ರಾಜ್ ಶೆಟ್ಟಿ ಕೂಡ ಸೇರಿಕೊಂಡಿದ್ದಾರೆ ಎನ್ನುವ ಮಾತು ಪಕ್ಕದ ತಮಿಳುನಾಡಿನಲ್ಲಿ ಕೇಳಿ ಬರುತ್ತಿದೆ.

from-courtroom-to-inner-circle-why-lawyer-preethi-raj-shetty-is-vijay-s-new-strategic-weapon-in-tvk

ಹೌದು,ಪ್ರೀತಿ ರಾಜ್ ಶೆಟ್ಟಿ.. ನಿನ್ನೆ ಮೊನ್ನೆವರೆಗೆ ಅಪರಿಚಿತವಾಗಿದ್ದ ಈ ಹೆಸರು ಈಗ ಇಡೀ ದೇಶದೆಲ್ಲೆಡೆ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಪಕ್ಕದ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್.

ತಮಿಳುನಾಡು ರಾಜಕಾರಣದಲ್ಲಿ ದಿನಕ್ಕೊಂದು ಹೊಸ ಬೆಳವಣಿಗೆ ನಡೆಯುತ್ತಿರುವ ಈ ಸಮಯದಲ್ಲಿ, ಅತ್ಯಲ್ಪ ಅವಧಿಯಲ್ಲಿಯೇ ಪ್ರೀತಿ ರಾಜ್ ಪವಾಡ ಮಾಡಿದ್ದಾರೆ. ವಿಜಯ್ ಅವರ ಕಾನೂನು ವ್ಯವಹಾರಗಳ ಜವಾಬ್ದಾರಿಯನ್ನು ವಹಿಸಿಕೊಂಡಿದ್ಧಾರೆ.

ಕೇವಲ ವೃತ್ತಿಪರ ವ್ಯವಹಾರ ಮಾತ್ರವಲ್ಲ ದಳಪತಿಯ ವೈಯಕ್ತಿಕ ಬದುಕಿನ ಲಾಯರ್ ಆಗಿ ಕೂಡ ಈ ಪ್ರೀತಿ ನೇಮಕಗೊಂಡಿದ್ದಾರೆ. ವಿಶೇಷ ಅಂದರೆ ಪ್ರೀತಿ ರಾಜ್ ಶೆಟ್ಟಿ ''ಟಿವಿಕೆ'' ಪಕ್ಷ ಸೇರಿದ್ದು ಕೆಲವೇ ದಿನಗಳ ಹಿಂದೆಯಷ್ಟೇ. ''ಏಷ್ಯಾನೆಟ್ ಸುವರ್ಣ'' ತಮಿಳು ಮತ್ತು ''ಒನ್ ಇಂಡಿಯಾ'' ತಮಿಳು ವರದಿಯ ಪ್ರಕಾರ ವಿಜಯ್ ಆಸ್ಥಾನಕ್ಕೆ ಇವರು ಬಂದು ಇನ್ನು ಒಂದು ವಾರವೂ ಆಗಿಲ್ಲ.

ಈ ಕಾರಣದಿಂದಾಗಿಯೇ ಸದ್ಯ ಹಲವರು ನಿಬ್ಬೇರಗಾಗಿದ್ಧಾರೆ. ಅತ್ಯಲ್ಫ ಅವಧಿಯಲ್ಲಿ ಪ್ರೀತಿ ರಾಜ್ ಶೆಟ್ಟಿ, ವಿಜಯ್ ಸಾಮ್ರಾಜ್ಯದಲ್ಲಿ ಇಷ್ಟೊಂದು ಮಹತ್ತರವಾದ ಸ್ಥಾನ ಪಡೆದಿದ್ಹೇಗೆ..? ವಿಜಯ್ ಎಲ್ಲರನ್ನೂ ಕಡೆಗಣಿಸಿ ಪ್ರೀತಿ ಅವರನ್ನೇ ತಮ್ಮ ಡಿವೋರ್ಸ್ ಲಾಯರ್ ಆಗಿ ನೇಮಕ ಮಾಡಿದ್ದೇಕೆ..? ಎಂಬ ಚರ್ಚೆಯನ್ನು ಕೂಡ ಮಾಡುತ್ತಿದ್ದಾರೆ.

from-courtroom-to-inner-circle-why-lawyer-preethi-raj-shetty-is-vijay-s-new-strategic-weapon-in-tvk


ಯಾರು ಈ ಪ್ರೀತಿ ರಾಜ್ ಶೆಟ್ಟಿ ..?

ಪ್ರೀತಿ ರಾಜ್ ಶೆಟ್ಟಿ ಅವರ ಮೂಲ ಚೆನ್ನೈನಲ್ಲಿಯೇ ಇದೆ. ಸಿವಿಲ್, ಕೌಟುಂಬಿಕ ಪ್ರಕರಣ, ಚೆಕ್ ಬೌನ್ಸ್ ಮತ್ತು ಮುಖ್ಯವಾಗಿ ಕ್ರಿಮಿನಲ್ ಕಾನೂನು ವಿಭಾಗಗಳಲ್ಲಿ ಇವರು ಕೆಲಸ ಮಾಡಿದ್ದಾರೆ. ಇನ್ನು ಕಳೆದ ಕೆಲ ದಿನಗಳಿಂದ ಸಾರ್ವಜನಿಕ ವೇದಿಕೆಗಳಲ್ಲಿ ಟಿವಿಕೆ ಪಕ್ಷದ ನೀತಿ ಮತ್ತು ಅದರ ಕಾನೂನಾತ್ಮಕ ನಿಲುವುಗಳನ್ನು ರಚನಾತ್ಮಕವಾಗಿ ಮತ್ತು ಬೌದ್ಧಿಕವಾಗಿಯೂ ಕೂಡ ಮಂಡಿಸುತ್ತಿರುವ ಪ್ರೀತಿ, ತಮಿಳು ಸುದ್ದಿ ವಾಹಿನಿಗಳ ಚರ್ಚಾ ಕಾರ್ಯಕ್ರಮಗಳ ಖಾಯಂ ಅತಿಥಿ ಕೂಡ ಹೌದು.

ರಾಜಕೀಯ ಸಂವಾದದಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ವಿಜಯ್ ಅವರ ''ತಮಿಳಗ ವೆಟ್ರಿ ಕಳಗಂ'' ಪಕ್ಷದ ತತ್ವಸಾರವನ್ನೇ ಜಪಿಸುತ್ತಿರುವ ಪ್ರೀತಿ ಮೊನ್ನೆ..ಮೊನ್ನೆ.. ವಿಜಯ್ ಮತ್ತು ಸಂಗೀತಾ ಅವರ ವಿಚ್ಚೇದನ ಪ್ರಕರಣದ ಕುರಿತು ನಡೆದ ವಿಚಾರಣೆಯಲ್ಲಿ ವಿಜಯ್ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ವಾದವನ್ನು ಮಂಡಿಸಿದ್ದಾರೆ. ಇವರ ಈ ವಾದ ಮತ್ತು ನಡೆ ಸದ್ಯ ತಮಿಳುನಾಡಿನ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.

ಯಾಕೆಂದರೆ ಸಾಮಾನ್ಯವಾಗಿ ರಾಜಕೀಯದಲ್ಲಿ ಹಲವಾರು ವರ್ಷಗಳ ಕಾಲ ಪಕ್ಷ ಮತ್ತು ವ್ಯಕ್ತಿಗೆ ನಿಷ್ಠೆಯಿಂದ ಇರಬೇಕು, ಮೂರೊತ್ತು ಚಾಕರಿಯನ್ನು ಮಾಡಬೇಕು, ಆಗಲೇ ಉನ್ನತ ಸ್ಥಾನ ಮಾನ ಎನ್ನುವ ಕಲ್ಪನೆ ಹಲವರಲ್ಲಿದೆ. ಹಾಗೇ ನೋಡಿದರೆ ರಾಜಕೀಯದ ಇತಿಹಾಸವನ್ನು ಗಮನಿಸಿದರೆ ಈ ಮಾತು ನಿಜಾ ಕೂಡ ಹೌದು. ಆದರೆ ಪ್ರೀತಿ ರಾಜ್ ಶೆಟ್ಟಿ ವಿಚಾರದಲ್ಲಿ ಎಲ್ಲವೂ ತದ್ವಿರುದ್ದ. ಯೋಗ್ಯತೆ ಮತ್ತು ಅರ್ಹತೆ ಇದ್ದರೆ ಮನ್ನಣೆ ನಿಮಗೆ ಸಿಗುತ್ತೆ ಎನ್ನುವ ಸಂದೇಶ ರವಾನೆ ಮಾಡಲು ಎಂದೇ ಏನೋ ಪ್ರೀತಿ ರಾಜ್ ಪಕ್ಷ ಸೇರಿದ 48 ಗಂಟೆಗಳಲ್ಲಿ ಮಹತ್ತರ ಜವಾಬ್ಧಾರಿಯನ್ನು ವಹಿಸಿದ್ದಾರೆ.

ಇನ್ನು ಪ್ರೀತಿ ರಾಜ್ ಶೆಟ್ಟಿ ಕೇವಲ ವಿಜಯ್ ವೈಯಕ್ತಿಕ ವಿಚಾರವನ್ನು ಮಾತ್ರವಲ್ಲ. ಬದಲಿಗೆ ಎಂ.ಕೆ. ಸ್ಟಾಲಿನ್ ವಿರುದ್ಧ ವಿಜಯ್ ಸಾರಿರುವ ಕಾನೂನು ಸಮರದಲ್ಲಿಯೂ ಕೂಡ ಟಿವಿಕೆ ಪಕ್ಷದ ಪರವಾಗಿ ಅಖಾಡಕ್ಕೆ ಪ್ರೀತಿ ಧುಮುಕಿದ್ದಾರೆ.

ಒಟ್ನಲ್ಲಿ ಕೇವಲ ಎರಡೇ ದಿನದಲ್ಲಿ ಟಿವಿಕೆ ಪಕ್ಷದ ಕಾನೂನು ವಿಭಾಗದ ಬೆನ್ನೆಲುಬಾಗಿದ್ದಾರೆ ಪ್ರೀತಿ ರಾಜ್ ಶೆಟ್ಟಿ. ವಿಜಯ್ ವೈಯಕ್ತಿಕ ವಿಚ್ಛೇದನ ಪ್ರಕರಣದ ಜೊತೆ ಮುಂಬರುವ ಕಾನೂನು ಸಮರಗಳನ್ನು ಪ್ರೀತಿ ರಾಜ್ ಶೆಟ್ಟಿ ಹೇಗೆ ಎದುರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

English summary
Thalapathy Vijay makes a bold political play. High-profile lawyer Preethi Raj Shetty rises to a key legal position in TVK. Read about her meteoric rise here.
Read more about: vijay politics
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X