ತಮಿಳು ಸೂಪರ್ ಹಿಟ್ ಸಿನಿಮಾ ಸೀಕ್ವೆಲ್ ಪ್ಲ್ಯಾನ್; ಕನ್ನಡಕ್ಕೆ ರೀಮೆಕ್ ಮಾಡ್ತಾರಾ ಗಣೇಶ್?

ಸದ್ಯ ಸೀಕ್ವೆಲ್ ಸಿನಿಮಾಗಳ ಭರಾಟೆ ಜೋರಾಗಿದೆ. ಒಂದೇ ಕಥೆಯನ್ನು ಎರಡು ಭಾಗಗಳಾಗಿ ಹೇಳುವುದು, ಅಥವಾ ಸೂಪರ್ ಹಿಟ್ ಚಿತ್ರಗಳ ಕಥೆಗಳನ್ನು ಮುಂದುವರೆಸುವ ಲೆಕ್ಕಾಚಾರ ಜೋರಾಗಿದೆ. ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಸಾಧ್ಯವಾದಷ್ಟು 2 ಭಾಗಗಳಾಗಿ ತೆರೆಗೆ ತರಲಾಗ್ತಿದೆ.

ಸೂಪರ್ ಹಿಟ್ ಸಿನಿಮಾಗಳ ಸೀಕ್ವೆಲ್ ಮಾಡಿ ಗೆಲ್ಲುವುದು ಅಷ್ಟು ಸುಲಭವಲ್ಲ. ಅದಕ್ಕೆ ತಾಜಾ ಉದಾಹರಣೆ ಕಮಲ್ ಹಾಸನ್ ನಟಿಸಿದ 'ಇಂಡಿಯನ್-2'. ಇದೀಗ ಮತ್ತೊಂದು ತಮಿಳು ಸೂಪರ್ ಹಿಟ್ ಸಿನಿಮಾ ಸೀಕ್ವೆಲ್ ಪ್ಲ್ಯಾನ್ ನಡೀತಿದೆ. ಒಂದು ವೇಳೆ ಆ ಸಿನಿಮಾ ಕಥೆ ಮುಂದುವರೆಸಿ ಗೆದ್ದರೆ ಕನ್ನಡದಲ್ಲೂ ಸೀಕ್ವೆಲ್ ಬರಬಹುದು.

Preparation for 96 Movie sequel will Ganesh Remake in Kannada also

ಇತ್ತೀಚೆಗೆ ರೀಮೆಕ್ ಸಿನಿಮಾಗಳ ಹಾವಳಿ ಕಮ್ಮಿ ಆಗಿದೆ. ಆದರೂ ಆಗೊಮ್ಮೆ ಈಗೊಮ್ಮೆ ಇಂತಹ ಪ್ರಯತ್ನ ನೋಡುತ್ತಿದ್ದೇವೆ. ಒಂದು ಸಿನಿಮಾ ಹಿಟ್ ಆಗಿ ಅದು ರೀಮೆಕ್. ಅದರ ಸೀಕ್ವೆಲ್ ಬಂದು ಹಿಟ್ ಆದಾಗ ಅದನ್ನೂ ರೀಮೆಕ್ ಮಾಡುವ ಪ್ರಯತ್ನ ನಡೆದಿದೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ 'ದೃಶ್ಯಂ'. ಸದ್ಯ ತಮಿಳಿನ '96' ಸೀಕ್ವೆಲ್ ಪ್ರಯತ್ನಗಳು ಆರಂಭವಾಗಿದೆ.

6 ವರ್ಷಗಳ ಹಿಂದೆ ವಿಜಯ್ ಸೇತುಪತಿ ಹಾಗೂ ತ್ರಿಶಾ ನಟಿಸಿದ '96' ಸಿನಿಮಾ ಸೂಪರ್ ಹಿಟ್ ಆಗಿತ್ತು. ರಾಮ್- ಜಾನಕಿ ಲವ್‌ಸ್ಟೋರಿ ಮೋಡಿ ಮಾಡಿತ್ತು. 18 ಕೋಟಿ ಬಜೆಟ್ ಸಿನಿಮಾ 50 ಕೋಟಿ ರೂ. ಗಳಿಕ ಕಂಡು ದಾಖಲೆ ಬರೆದಿತ್ತು. ಸಿಂಪಲ್ ಕಥೆ ಬಹಳ ಸೊಗಸಾಗಿ ತೆರೆಮೇಲೆ ಮ್ಯಾಜಿಕ್ ಕ್ರಿಯೇಟ್ ಮಾಡಿ ಗೆದ್ದಿತ್ತು. ಬಳಿಕ ಸಿನಿಮಾ ಕನ್ನಡ, ತೆಲುಗಿಗೂ ರೀಮೇಕ್ ಆಗಿತ್ತು.

ಕನ್ನಡದಲ್ಲಿ ಗಣೇಶ್ ಹಾಗೂ ಭಾವನಾ ನಟಿಸಿದ್ದರು. '99' ಟೈಟಲ್‌ನಲ್ಲಿ ಸಿನಿಮಾ ಮೂಡಿ ಬಂದಿತ್ತು. ಇದೀಗ ನಿರ್ದೇಶಕ ಪ್ರೇಮ್ ಕುಮಾರ್ '96' ಸೀಕ್ವೆಲ್ ಮಾಡಲು ಕಥೆ ಸಿದ್ಧಪಡಿಸುತ್ತಿದ್ದಾರೆ. ವಿಜಯ್ ಸೇತುಪತಿ ಹಾಗೂ ತ್ರಿಶಾ ಕಥೆ ಕೇಳಿ ಒಪ್ಪಿದರೆ ಸಿನಿಮಾ ಶುರುವಾಗುತ್ತದೆ ಎಂದು ಹೇಳಲಾಗ್ತಿದೆ. ತಮಿಳಿನಲ್ಲಿ ಹಿಟ್ ಆಗಿದ್ದ ಸಿನಿಮಾ ಕನ್ನಡ ಹಾಗೂ ತೆಲುಗಿನಲ್ಲಿ ಅಷ್ಟಾಗಿ ಸಕ್ಸಸ್ ಕಾಣಲಿಲ್ಲ.

Preparation for 96 Movie sequel will Ganesh Remake in Kannada also

ಒಂದು ವೇಳೆ ತಮಿಳಿನಲ್ಲಿ '96' ಸೀಕ್ವೆಲ್ ಬಂದರೂ ಕನ್ನಡದಲ್ಲಿ ರೀಮೆಕ್ ಮಾಡುವ ಸಾಧ್ಯತೆ ಕಮ್ಮಿ ಇದೆ ಎನ್ನಬಹುದು. ಸದ್ಯ ವಿಜಯ್ ಸೇತುಪತಿ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್‌ಬಾಸ್ ತಮಿಳು ಸೀಸನ್ 8ರ ನಿರೂಪಣೆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಹಾಗಾಗಿ ಯಾವಾಗ '96' ಪಾರ್ಟ್-2 ಬರುತ್ತೆ ಎಂದು ಹೇಳುವುದು ಕಷ್ಟ. ಸೇತುಪತಿ ಆ ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. ಹಾಗಾಗಿ ಸೀಕ್ವೆಲ್ ಮಾಡಿದರೆ ಖಂಡಿತ ಒಪ್ಪುತ್ತಾರೆ.

ತೆಲುಗಿನಲ್ಲಿ 'ಜಾನು' ಹೆಸರಿನಲ್ಲಿ ಸಿನಿಮಾ ರೀಮೆಕ್ ಆಗಿತ್ತು. ಶರ್ವಾನಂದ್ ಹಾಗೂ ಸಮಂತಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಶಾಲೆಯಲ್ಲಿ ಒಟ್ಟಿಗೆ ಓದಿದ ಸಹಪಾಠಿಗಳು ಬಹಳ ವರ್ಷಗಳ ಬಳಿಕ ಒಟ್ಟಿಗೆ ಸೇರುತ್ತಾರೆ. ಶಾಲಾ ದಿನಗಳಲ್ಲಿ ಕಾರಣಾಂತರಗಳಿಂದ ದೂರಾದ ರಾಮ್- ಜಾನಕಿ ಮತ್ತೆ ಭೇಟಿ ಆಗುವಂತಾಗುತ್ತದೆ. ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದೇ '96' ಸಿನಿಮಾ ಕಥೆ.

ಸೀಕ್ವೆಲ್ ಕಥೆ ಸಿದ್ಧವಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ಸೇತುಪತಿ- ತ್ರಿಶಾ ಕಥೆ ಕೇಳಿ ಒಪ್ಪುತ್ತಾರಾ? ಎನ್ನುವುದು ಕುತೂಹಲ ಮೂಡಿಸಿದೆ. ಇನ್ನು ಕನ್ನಡ, ತೆಲುಗಿಗೂ ಈ ಸೀಕ್ವೆಲ್ ರೀಮೇಕ್ ಆಗುತ್ತಾ? ಎಂದು ಕಾದು ನೋಡಬೇಕು.

More from Filmibeat

English summary
Director Prem Kumar planning for Super hit 96 Movie part-2
Read more about: vijay sethupathi trisha ganesh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X