For Quick Alerts
  ALLOW NOTIFICATIONS  
  For Daily Alerts

  ತಮಿಳು ಸಿನಿಮಾ ಟ್ರೇಲರ್ ನೋಡಿ ಟ್ವೀಟ್ ಮಾಡಿದ ಪ್ರಧಾನಿ ಮೋದಿ

  |

  ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಪ್ರಚಾರ ಹಾಗೂ ಇನ್ನಿತರ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ತಮಿಳು ಸಿನಿಮಾ ಟ್ರೇಲರ್ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

  ನಟ ಆರ್.ಮಾಧವನ್ ನಿರ್ದೇಶಿಸಿ, ನಟಿಸಿರುವ ಭಾರತೀಯ ವಿಜ್ಞಾನಿಯೊಬ್ಬರ ಕತೆ 'ರಾಕೆಟ್ರಿ; ದಿ ನಂಬಿ ಎಫೆಕ್ಟ್' ಸಿನಿಮಾದ ಟ್ರೇಲರ್ ಅನ್ನು ಮಾಧವನ್ ಹಾಗೂ ವಿಜ್ಞಾನಿ ನಂಬಿ ನಾರಾಯಣ್ ಅವರು ಮೋದಿ ಅವರಿಗೆ ತೋರಿಸಿದ್ದಾರೆ.

  ಪ್ರಧಾನಿ ಮೋದಿ, ವಿಜ್ಞಾನಿ ನಂಬಿ ನಾರಾಯಣ್ ಹಾಗೂ ಆರ್.ಮಾಧವನ್ ಅವರು ಟ್ರೇಲರ್ ಅನ್ನು ನೋಡುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಆರ್.ಮಾಧವನ್, 'ಸಿನಿಮಾದ ಕೆಲವು ದೃಶ್ಯಗಳನ್ನು ನೋಡಿ ಪ್ರಧಾನಿಯವರು ಬಹಳ ಮೆಚ್ಚಿ ಮಾತನಾಡಿದರು. ವಿಜ್ಞಾನಿ ನಂಬಿ ಅವರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಮೋದಿ, ಅವರೊಂದಿಗೆ ಆದ ಅನ್ಯಾಯದ ಬಗ್ಗೆ ಮರುಕ ವ್ಯಕ್ತಪಡಿಸಿದರು' ಎಂದು ಮಾಧವನ್ ಹೇಳಿದ್ದಾರೆ.

  ಮಾಧವನ್ ಅವರ ಟ್ವೀಟ್‌ಗೆ ಪ್ರತಿಯಾಗಿ ಮೋದಿ ಅವರು ಟ್ವೀಟ್ ಮಾಡಿದ್ದು, 'ನಿಮ್ಮನ್ನು (ಆರ್.ಮಾಧವನ್) ಹಾಗೂ ಪ್ರತಿಭಾವಂತ ನಂಬಿ ಅವರನ್ನು ಭೇಟಿಯಾಗಿದ್ದು ಸಂತೋಶದ ವಿಷಯ. ಈ ಸಿನಿಮಾವು (ರಾಕೆಟ್ರಿ; ದಿ ನಂಬಿ ಎಫೆಕ್ಟ್) ಬಹಳ ಮುಖ್ಯವಾದ ವಿಷಯವನ್ನು ಒಳಗೊಂಡಿದೆ. ಈ ವಿಷಯದ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ನಮ್ಮ ವಿಜ್ಞಾನಿಗಳು, ತಂತ್ರಜ್ಞಾನಿಗಳು ನಮ್ಮ ದೇಶಕ್ಕಾಗಿ ಹಲವು ತ್ಯಾಗಗಳನ್ನು ಮಾಡಿದ್ದಾರೆ. ಸಿನಿಮಾದ ಕೆಲವು ದೃಶ್ಯಗಳನ್ನು ನಾನು ನೋಡಿದ್ದೇನೆ' ಎಂದು ಮೋದಿ ಹೇಳಿದ್ದಾರೆ.

  'ರಾಕೆಟ್ರಿ; ದಿ ನಂಬಿ ಎಫೆಕ್ಟ್' ಸಿನಿಮಾವು ಇಸ್ರೋದ ಮಾಜಿ ವಿಜ್ಞಾನಿ ನಂಬಿ ನಾರಾಯಣ್ ಅವರ ಜೀವನ ಆಧರಿಸಿದ್ದಾಗಿದೆ. ನಂಬಿ ನಾರಾಯಣ್ ಮೇಲೆ ಗೂಢಚಾರಿಕೆಯ ಸುಳ್ಳು ಆರೋಪ ಹೊರಿಸಿ ಅವರನ್ನು ಜೈಲಿಗೆ ಅಟ್ಟಲಾಗಿತ್ತು. ಜೈಲಿನಲ್ಲಿ ಅವರ ಮೇಲೆ ದೈಹಿಕ ಹಲ್ಲೆಯನ್ನು ಮಾಡಲಾಯಿತು. ಪ್ರಕರಣದ ತನಿಖೆ ನಡೆಸಿದ ಸಿಬಿಐ ಹಾಗೂ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನಂಬಿ ಅವರ ಮೇಲೆ ಹೊರಿಸಲಾದ ಆರೋಪ ಸುಳ್ಳು ಎಂದವು.

  ಸೈಕಲ್ ನಲ್ಲಿ ಬಂದು ವೋಟ್ ಹಾಕಿ ಮೋದಿಗೆ ಟಾಂಗ್ ಕೊಟ್ಟ ವಿಜಯ್ | Filmibeat Kannada

  'ರಾಕೆಟ್ರಿ; ದಿ ನಂಬಿ ಎಫೆಕ್ಟ್' ಸಿನಿಮಾವು ತಮಿಳು, ಹಿಂದಿ, ಮಲಯಾಳಂ, ತೆಲುಗು, ಇಂಗ್ಲಿಷ್, ಕನ್ನಡ ಭಾಷೆಗಳಲ್ಲಿ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದ ಟ್ರೇಲರ್ ಈಗಾಗಲೇ ಹಿಟ್ ಆಗಿದೆ.

  English summary
  Prime Minister Narendra Modi tweeted about R Madhavan's movie 'Rocketry; The Nambi effect'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X