'ತಲೈವಿ' ಸಿನಿಮಾದಲ್ಲಿ ಶಶಿಕಲಾ ಆದ ಸೌತ್ ನಟಿ
ಸದ್ಯ, ತಮಿಳು ನಾಡು ಮಾಜಿ ಮುಖ್ಯಮಂತ್ರಿ, ಜನಪ್ರಿಯ ನಟಿ ಜಯಲಲಿತಾ ಬಯೋಪಿಕ್ ಬಹಳ ಸದ್ದು ಮಾಡುತ್ತಿದೆ. 'ತಲೈವಿ' ಹೆಸರಿನ ಈ ಸಿನಿಮಾ ಫಸ್ಟ್ ಲುಕ್ ಈಗಾಗಲೇ ಹೊರ ಬಂದಿದೆ.
'ತಲೈವಿ' ಸಿನಿಮಾದಲ್ಲಿ ಕಂಗನಾ ರಣಾವತ್ ಜಯಲಲಿತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಶಶಿಕಲಾ ಪಾತ್ರಕ್ಕೂ ನಾಯಕಿಯ ಆಯ್ಕೆ ಆಗಿದೆ. ನಟಿ ಪ್ರಿಯಾಮಣಿ ಈ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಜಯಲಲಿತಾ ಸಿನಿಮಾ ಎಂದ ಮೇಲೆ ಗೆಳತಿ ಶಶಿಕಲಾ ಪಾತ್ರ ಕೂಡ ಪ್ರಮುಖವಾಗಿ ಇರುತ್ತದೆ. ಹೀಗಾಗಿ ಈ ಪಾತ್ರಕ್ಕೆ ಪ್ರಿಯಾಮಣಿರನ್ನು ಆಯ್ಕೆ ಮಾಡಲಾಗಿದೆ. ಕಳೆದ ವರ್ಷ 'ನನ್ನ ಪ್ರಕಾರ' ಎಂಬ ಕನ್ನಡ ಸಿನಿಮಾ ಮಾಡಿದ್ದ ಪ್ರಿಯಾಮಣಿ ಈಗ ಜಯಲಲಿತಾ ಬಯೋಪಿಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಹಿಂದೆ ಈ ಸಿನಿಮಾದ ಶಶಿಕಲಾ ಪಾತ್ರದಲ್ಲಿ ಅಮಲಾ ಪೌಲ್ ಕಾಣಿಸಿಕೊಳ್ಳುತ್ತಾರೆ ಎನ್ನುವ ಸುದ್ದಿ ಇತ್ತು. ಆದರೆ, ಪ್ರಿಯಾಮಣಿ ಶಶಿಕಲಾ ಆಗುತ್ತಿದ್ದಾರೆ. ಸಿನಿಮಾದ ಒಂದೊಂದೆ ಪಾತ್ರಗಳನ್ನು ಚಿತ್ರತಂಡ ರಿವೀಲ್ ಮಾಡುತ್ತಿದೆ.
ಮತ್ತೊಂದು ಕಡೆ ರಾಮ್ ಗೋಪಾಲ್ ವರ್ ಕೂಡ ಶಶಿಕಲಾ ಬಗ್ಗೆ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಜೊತೆಗೆ ನಿತ್ಯಾ ಮೆನನ್ ಕೂಡ 'ದಿ ಐರನ್ ಲೇಡಿ' ಸಿನಿಮಾ ಮಾಡುತ್ತಿದ್ದು, ಇದು ಕೂಡ ಜಯಲಲಿತಾ ಜೀವನಾಧಾರಿತ ಸಿನಿಮಾವಾಗಿದೆ.

'ತಲೈವಿ' ಸಿನಿಮಾದ ಫಸ್ಟ್ ಲುಕ್ ಟೀಸರ್ ಈಗಾಗಲೇ ಹೊರ ಬಂದಿದ್ದು, ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ವಿಜಯ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ.


Click it and Unblock the Notifications











