10 ದಿನಕ್ಕೆ ₹300 ಕೋಟಿ ಕ್ಲಬ್ ಸೇರಿದ 'ಪೊನ್ನಿಯಿನ್ ಸೆಲ್ವನ್- 2': KGF- 2 ಮೀರಿಸುತ್ತಾ ಮಣಿರತ್ನಂ ದೃಶ್ಯಕಾವ್ಯ?

ಥಿಯೇಟರ್‌ಗಳಲ್ಲಿ 'ಪೊನ್ನಿಯಿನ್ ಸೆಲ್ವನ್- 2 ಆರ್ಭಟ ಮುಂದುವರೆದಿದೆ. ಕೋಟಿ ಕೋಟಿ ಕೊಳ್ಳೆ ಹೊಡೆದು ಸಿನಿಮಾ ಸಂಚಲನ ಸೃಷ್ಟಿಸಿದೆ. ಮಣಿರತ್ನಂ ದೃಶ್ಯಕಾವ್ಯ ಪ್ರೇಕ್ಷಕರನ್ನು ದೊಡ್ಡಮಟ್ಟಿಗೆ ಥಿಯೇಟರ್‌ಗೆ ಸೆಳೆಯುತ್ತಿದೆ. 10 ದಿನಗಳ ನಂತರ ಕೂಡ ಸಿನಿಮಾ ಕೆಲವೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಐಪಿಎಲ್‌ ಭರಾಟೆ ನಡುವೆಯೂ ಚೋಳ ಸಾಮ್ರಾಜ್ಯದ ವೈಭವ ತೆರೆಮೇಲೆ ಸದ್ದು ಮಾಡುತ್ತಿದೆ. ಗಲ್ಲಾಪೆಟ್ಟಿಗೆ ತುಂಬುತ್ತಿದೆ.

ಚಿಯಾನ್ ವಿಕ್ರಂ, ಐಶ್ವರ್ಯ ರೈ, ಕಾರ್ತಿ, ಜಯಂ ರವಿ, ತ್ರಿಶಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಮಣಿರತ್ನಂ ನಿರ್ದೇಶನ, ಎ. ಆರ್ ರಹಮಾನ್ ಸಂಗೀತ ಚಿತ್ರಕ್ಕಿದೆ. ಕಲ್ಕಿ ಕೃಷ್ಣಮೂರ್ತಿ ಬರೆದ ಕಾದಂಬರಿಯನ್ನು ಬಹಳ ಸೊಗಸಾಗಿ ಚಿತ್ರತಂಡ ತೆರೆಗೆ ತಂದಿದೆ. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಪ್ರತಿಷ್ಟಾತ್ಮಕವಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿತ್ತು. ಎಲ್ಲರ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಕಳೆದ ವರ್ಷ ಪ್ರೀಕ್ವೆಲ್ ರಿಲೀಸ್ ಆಗಿತ್ತು. 6 ತಿಂಗಳ ಅಂತರದಲ್ಲಿ ಸೀಕ್ವೆಲ್ ತೆರೆಗೆ ತಂದು ಗೆದ್ದಿದೆ ಚಿತ್ರತಂಡ. ಮೊದಲ ಭಾಗಕ್ಕಿಂತ 2ನೇ ಭಾಗಕ್ಕೆ ರೆಸ್ಪಾನ್ಸ್ ಚೆನ್ನಾಗಿದೆ.

PS-2 vs KGF -2 Collection: Manirathnams film crosses Rs 300 cr mark worldwide in 10 days

ಮೊದಲ 4 ದಿನಕ್ಕೆ 200 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಸಿನಿಮಾ 2ನೇ ವೀಕೆಂಡ್‌ ಮುಕ್ತಾಯದ ವೇಳೆಗೆ ವಿಶ್ವದಾದ್ಯಂತ 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಸ್ವತಃ ಲೈಕಾ ಸಂಸ್ಥೆ ಇದನ್ನು ಘೋಷಿಸಿದೆ. ಕಳೆದ ವರ್ಷ ರಿಲೀಸ್ ಆಗಿದ್ದ ಸರಣಿಯ ಮೊದಲ ಸಿನಿಮಾ ಒಟ್ಟು 500 ಕೋಟಿ ರೂ. ಗಳಿಕೆ ಕಂಡಿತ್ತು. ಆದರೆ ಸೀಕ್ವೆಲ್ ಕೇವಲ 10 ದಿನಗಳಲ್ಲಿ 300 ಕೋಟಿ ರೂ. ಕಲೆಕ್ಷನ್ ಮಾಡಿರೋದು ವಿಶೇಷ. ಶೀಘ್ರದಲ್ಲೇ 'ಪೊನ್ನಿಯಿನ್ ಸೆಲ್ವನ್- 2 ಕೂಡ 500 ಕೋಟಿ ರೂ. ಗಡಿ ದಾಟುವ ಸುಳಿವು ಸಿಗುತ್ತಿದೆ.

ತಮಿಳುನಾಡಿನಲ್ಲಿ ಹೌಸ್‌ಫುಲ್

10 ದಿನ ಕಳೆದರೂ ತಮಿಳು ನಾಡಿನ ಕೆಲವಡೆ ಸಿನಿಮಾ ಇನ್ನು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಪ್ರೀಕ್ವೆಲ್ ನೋಡಿದವರು, ಕಲ್ಕಿ ಕೃಷ್ಣಮೂರ್ತಿ ಬರೆದ ಕಾದಂಬರಿ ಓದಿಕೊಂಡವರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಚೋಳರು ಹಾಗೂ ಪಾಂಡ್ಯರ ಆಂತರಿಕ ಸಂಘರ್ಷ, ರಾಜಕೀಯ, ಚೋಳ ವಿರುದ್ಧ ನಂದಿನಿಯ ಸೇಡಿನ ಕಥೆಯನ್ನು ತೆರೆಗೆ ತರಲಾಗಿದೆ. ಯುದ್ಧ ಸನ್ನಿವೇಶಗಳು, ವಾವ್ ಮೊಮೆಂಟ್ಸ್‌ಗಿಂತ ಡ್ರಾಮಾಗೆ ಮಣಿರತ್ನಂ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. ಕಾದಂಬರಿಯನ್ನು ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಕಟ್ಟಿಕೊಡಲಾಗಿದೆ.

KGF- 2 ದಾಖಲೆ ಮುರಿಯುತ್ತಾ?

ದಕ್ಷಿಣದ ಯಾವುದೇ ದೊಡ್ಡ ಸೀಕ್ವೆಲ್ ಸಿನಿಮಾ ಬಂದ್ರು ಕೆಲವರು KGF- 2 ಜೊತೆಗೆ ಹೋಲಿಸಿ ನೋಡುತ್ತಿದ್ದಾರೆ. 'ಪೊನ್ನಿಯಿನ್ ಸೆಲ್ವನ್- 2' ಆರ್ಭಟ ನೋಡಿ KGF- 2 ದಾಖಲೆ ಮುರಿಯುತ್ತಾ? ಎನ್ನುವ ಚರ್ಚೆ ನಡೀತಿದೆ. ಮಣಿರತ್ನಂ ನಿರ್ದೇಶನದ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿದೆ. ಒಳ್ಳೆ ಕಲೆಕ್ಷನ್ ಕೂಡ ಮಾಡ್ತಿದೆ. ಆದರೆ KGF- 2 ಕಲೆಕ್ಷನ್ ಮೀರಿಸುವುದು ಸುಲಭದ ಮಾತಲ್ಲ. 'ಪೊನ್ನಿಯಿನ್ ಸೆಲ್ವನ್- 2' 1000 ಕೋಟಿ ರೂ. ಗಡಿ ದಾಟುವುದೇ ಕಷ್ಟ ಇದೆ. ಇನ್ನು 1250 ಕೋಟಿ ರೂ. ಕಲೆಕ್ಷನ್ ದೂರದ ಮಾತೇ ಸರಿ.

ಸಾಧಿಸಿ ಗೆದ್ದ ಮಣಿರತ್ನಂ

ಕಲೆಕ್ಷನ್ ವಿಚಾರವನ್ನು ಪಕ್ಕಕ್ಕಿಟ್ಟರೆ 'ಪೊನ್ನಿಯಿನ್ ಸೆಲ್ವನ್' ಕಾದಂಬರಿಯನ್ನು ದಶಕಗಳಿಂದ ಸಿನಿಮಾ ಮಾಡಲು ಕಾಲಿವುಡ್ ಮಂದಿ ಪ್ರಯತ್ನಿಸಿದ್ದರು. ಎಂಜಿಆರ್‌, ಕಮಲ್ ಹಾಸನ್‌ ಕೂಡ ಈ ಸಾಹಸಕ್ಕೆ ಕೈ ಹಾಕಿದ್ದರು. ಆದರೆ 2000 ಪುಟಗಳ ಕಥೆಯನ್ನು 2 ಗಂಟೆ ಸಿನಿಮಾದಲ್ಲಿ ಹೇಳುವುದು ಕಷ್ಟ ಎಂದು ಸುಮ್ಮನಾಗಿದ್ದರು. ಆದರೆ 'ಬಾಹುಬಲಿ' ಕಥೆಯನ್ನು ರಾಜಮೌಳಿ 2 ಭಾಗಗಳಾಗಿ ಕಟ್ಟಿಕೊಟ್ಟು ಗೆದ್ದರು. ಅದನ್ನು ನೋಡಿ ಮಣಿರತ್ನಂ 'ಪೊನ್ನಿಯಿನ್ ಸೆಲ್ವನ್' ಚಿತ್ರಕ್ಕೆ ಕೈ ಹಾಕಿದ್ದರು. ಆ ಪ್ರಯತ್ನದಲ್ಲಿ ಬಹುತೇಕ ಸಕ್ಸಸ್ ಕಂಡಿದ್ದಾರೆ.

More from Filmibeat

English summary
PS-2 vs KGF -2 Collection: Manirathnam's film crosses Rs 300 cr mark worldwide in 10 days. Vikram, Aishwarya Rai, karthi, trisha Starrer film hit the theatres on April 28. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X