ಪುದುಚೇರಿಯಲ್ಲಿ ವಿಜಯ್ ಬೃಹತ್ ರ‍್ಯಾಲಿ, ಗನ್ ಸಮೇತ ಸಿಕ್ಕಿ ಬಿದ್ದ ವ್ಯಕ್ತಿ - ಸ್ಥಳದಲ್ಲಿ ಆತಂಕ
ಇಳಯ ದಳಪತಿ ಎಂದೇ ಖ್ಯಾತರಾದವರು ವಿಜಯ್ ಸೇತುಪತಿ. ತಮ್ಮನ್ನು ತಾವು ಕೇವಲ ಚಿತ್ರರಂಗಕ್ಕೆ ಸೀಮಿತಗೊಳಿಸದೇ ವಿಜಯ್ ಮೊದಲಿಂದ ಸಮಾಜದ ಆಗುಹೋಗುಗಳ ಕುರಿತು ಮಾತನಾಡುತ್ತಾಲೇ ಬಂದಿದ್ದಾರೆ. ಕಾವೇರಿ ನೀರಿನ ಸಮಸ್ಯೆ, ಜಲ್ಲಿಕಟ್ಟು ಪ್ರತಿಭಟನೆ, ಶಬರಿಮಲೈ ದೇಗುಲಕ್ಕೆ ಮಹಿಳೆಯರ ಪ್ರವೇಶ, ನೀಟ್ ಪರೀಕ್ಷೆ ಸೇರಿ ಹೀಗೆ ಹತ್ತು ಹಲವು ವಿಚಾರಗಳ ಕುರಿತು ವಿಜಯ್ ತಮ್ಮ ಧ್ವನಿಯನ್ನು ಎತ್ತುತ್ತಾನೇ ಬಂದಿದ್ದಾರೆ.
ಅಂದಿನಿಂದ ಇದೆಲ್ಲವನ್ನೂ ನೋಡಿದವರು ವಿಜಯ್ ರಾಜಕೀಯದೆಡೆ ಹೊರಳುತ್ತಾರೆ ಎಂದೇ ಅಂದುಕೊಂಡಿದ್ದರು. ಅದು ಕೂಡ ನಿಜಾ ಆಗಿದೆ. ತಮ್ಮ ಪಕ್ಷಕ್ಕೆ ''ತಮಿಳಗ ವೆಟ್ರಿ ಕಳಗಂ'' ಎಂದು ನಾಮಕರಣವನ್ನು ಮಾಡಿರುವ ವಿಜಯ್, ಸದ್ಯ ತಮ್ಮ ಗಮನವೆನ್ನೆಲ್ಲ ರಾಜಕೀಯದ ಕಡೆ ನೀಡಿದ್ದಾರೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ಇರುವ ಹಿನ್ನೆಲೆ ರ್ಯಾಲಿಗಳ ಮೇಲೆ ರ್ಯಾಲಿ ಮಾಡುತ್ತಿದ್ದಾರೆ. ಜನರ ನಡುವೆ ಹೆಚ್ಚೆಚ್ಚು ಕಾಣಿಸಿಕೊಳ್ಳುವ, ಬೆರೆಯುವ ಪ್ರಯತ್ನ ಮಾಡುತ್ತಿದ್ದಾರೆ.

ನಿಜಾ. ಕರೂರ್ ಕಾಲ್ತುಳಿತ ಪ್ರಕರಣ ಇವರ ಈ ಪ್ರಯತ್ನಕ್ಕೆ ಬ್ರೇಕ್ ಹಾಕಿತ್ತು. ಆದರೆ.. ಈಗ ವಿಜಯ್ ಕರೂರ್ ಆಘಾತದಿಂದ ಹೊರ ಬಂದಿದ್ದಾರೆ. ಪುದುಚೇರಿಯಲ್ಲಿ ಬೃಹತ್ ಸಾರ್ವಜನಿಕ ಸಭೆ ಏರ್ಪಡಿಸಿದ್ದಾರೆ.
ಸದ್ಯ ಪುದಿಚೇರಿಯಲ್ಲಿನ ಇದೇ ಸಭೆಗೆ ಬಂದಿದ್ದ ವ್ಯಕ್ತಿಯೊಬ್ಬ ಗನ್ ಸಮೇತ ಸಿಕ್ಕಿ ಬಿದ್ದಿದ್ದಾನೆ. ಇದರಿಂದ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಸದ್ಯ ಈ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದು ವಿಚಾರಣೆಗೆ ಕರೆದೊಯ್ದಿದ್ದಾರೆ ಎಂದು ''ನ್ಯೂಸ್ 18'' ವರದಿ ಮಾಡಿದೆ.
ಸಭೆಗೆ ವಿಜಯ್ ಬರುವುದಕ್ಕೆ ಮುನ್ನವೇ ಈ ವ್ಯಕ್ತಿ ಭದ್ರತಾ ತಪಾಸಣೆ ವೇಳೆ ಸಿಕ್ಕಿ ಬಿದ್ದಿದ್ದು, ಈ ಘಟನೆಯಿಂದ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಕೂಡ ಸ್ಪಷ್ಟ ಪಡಿಸಿದ್ದಾರೆ. ಬಂಧಿತ ವ್ಯಕ್ತಿಯ ಹೆಸರು ಡೇವಿಡ್ ಎಂದು ಹೇಳಿರುವ ಪೊಲೀಸರು TVK ಪುದುಚೇರಿ ಜಿಲ್ಲಾ ಕಾರ್ಯದರ್ಶಿಯ ಭದ್ರತಾ ಸಿಬ್ಬಂದಿಯಾಗಿ ಇವರು ಕೆಲಸ ಮಾಡುತ್ತಿದ್ದು, ಆತ್ಮರಕ್ಷಣೆಗಾಗಿ ಗನ್ ಹೊಂದಿದ್ದರು ಎಂದು ಕೂಡ ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ. ಸುರಕ್ಷತೆ-ಭದ್ರತೆಯ ದೃಷ್ಟಿಯಿಂದ ಡೇವಿಡ್ ಅವರನ್ನು ವಶಕ್ಕೆ ಪಡೆದು ಸ್ಥಳದಿಂದ ಕರೆದೊಯ್ದಿದ್ದಾರೆ.
ಅಂದ್ಹಾಗೇ ಕರೂರು ಕಾಲ್ತುಳಿತ ಪ್ರಕರಣದಿಂದ ಎಚ್ಚೆತ್ತಿರುವ ಪುದುಚೇರಿ ಪೊಲೀಸರು ತುಂಬಾನೇ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಂಡಿದ್ದಾರೆ. ಉಪ್ಪಲಂನ ಎಕ್ಸ್‌ಪೋ ಗ್ರೌಂಡ್‌ನಲ್ಲಿ ನಡೆಯಲಿರುವ ಎರಡು ಗಂಟೆಗಳ ಸಭೆಯಲ್ಲಿ ಕೇವಲ 5,000 ಜನರಿಗೆ ಪ್ರವೇಶವನ್ನು ನೀಡಿದ್ದಾರೆ. ಈ 5,000 ನಿವಾಸಿಗಳು ಕೂಡ ಪುದುಚೇರಿಯವರೆ. ತಮಿಳುನಾಡಿನ ಜನರಿಗೆ ಅಥವಾ ತಮಿಳುನಾಡಿನ ವಿಜಯ್ ಅವರ ಅಭಿಮಾನಿಗಳಿಗೆ ಈ ರಾಜಕೀಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಲಾಗಿದೆ.

ಇನ್ನು ಮಕ್ಕಳು, ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಈ ಕಾರ್ಯಕ್ರಮದಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ. ಟಿವಿಕೆ ಪಕ್ಷ ನೀಡಿರುವ ಕ್ಯೂಆರ್-ಕೋಡೆಡ್ ಪಾಸ್ ಹೊಂದಿದವರಿಗೆ ಮಾತ್ರ ಈ ಕಾರ್ಯಕ್ರಮದಲ್ಲಿ ಅವಕಾಶ ನೀಡಲಾಗಿದೆ. ಭದ್ರತೆಗಾಗಿ 800 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಇನ್ನುಳಿದಂತೆ ಸಭೆ ನಡೆಯುವ ಸ್ಥಳದಲ್ಲಿ ಕುಡಿಯುವ ನೀರು, ಶೌಚಾಲಯಗಳು, ಆಂಬ್ಯುಲೆನ್ಸ್‌ಗಳು ಮತ್ತು ಇತರ ಸುರಕ್ಷತಾ ಸೌಲಭ್ಯಗಳ ಜವಾಭ್ಧಾರಿಗಳನ್ನುವಿಜಯ್ ಅವರ ಟಿವಿಕೆ ಪಕ್ಷಕ್ಕೆ ವಹಿಸಲಾಗಿದೆ.
ಪುದುಚೇರಿಯ ಈ ರ್ಯಾಲಿಯ ನಂತರ ವಿಜಯ್ ಈ ತಿಂಗಳ ಕೊನೆಯಲ್ಲಿ ತಮಿಳುನಾಡಿನಲ್ಲಿ ಮತ್ತೆ ಬೀದಿಗಿಳಿಯಲಿದ್ದಾರೆ. ಈರೋಡ್‌ನಿಂದ ತಮ್ಮ ರ್ಯಾಲಿಗಳನ್ನು ರಾಜ್ಯದೆಲ್ಲೆಡೆ ಮತ್ತೆ ಆರಂಭ ಮಾಡುವ ನಿರೀಕ್ಷೆ ಇದೆ. ಡಿಎಂಕೆ ನಮ್ಮ ಶತ್ರು ಎಂದು ವಿಜಯ್ ತಮ್ಮ ಹಿಂದಿನ ಸಭೆ ರ್ಯಾಲಿಗಳಲ್ಲಿ ಬಹಿರಂಗವಾಗಿ ಘೋಷಿಸಿಯೂ ಆಗಿದೆ. ವಿಜಯ್ ಮಾಡುತ್ತಿರುವ ಈ ಕಸರತ್ತಿಗೆ ಬೆಲೆ ಸಿಗುತ್ತಾ..? ಎನ್ನುವುದನ್ನು ಮುಂಬರುವ ದಿನಗಳಲ್ಲಿ ನೋಡಬೇಕಿದೆ.


Click it and Unblock the Notifications











