twitter
    For Quick Alerts
    ALLOW NOTIFICATIONS  
    For Daily Alerts

    ಕಮಲ್ ಹಾಸನ್ ನಿವಾಸಕ್ಕೆ ಕ್ವಾರಂಟೈನ್ ಸ್ಟಿಕ್ಕರ್ ಅಂಟಿಸಿ ಕಿತ್ತುಹಾಕಿದ ಅಧಿಕಾರಿಗಳು

    |

    ಕೊರೊನಾ ವೈರಸ್ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ತಮ್ಮ ಮನೆಯನ್ನೇ ಆಸ್ಪತ್ರೆಯನ್ನಾಗಿ ಪರಿವರ್ತಿಸಿಕೊಳ್ಳಿ ಎಂದು ಇತ್ತೀಚಿಗೆ ನಟ, ರಾಜಕಾರಣಿ ಕಮಲ್ ಹಾಸನ್ ಸರ್ಕಾರಕ್ಕೆ ಹೇಳಿದ್ದರು. ಆದರೀಗ ಈ ಮನೆಗೆ ಚೆನ್ನೈ ಕಾರ್ಪೊರೇಶನ್ ಕ್ವಾರಂಟೈನ್ ಸ್ಟಿಕ್ಕರ್ ಅಂಟಿಸಿದ್ದಾರೆ. ಅಂಟಿಸಿದ ಕೆಲವೆ ಸಮಯದಲ್ಲಿ ತೆಗೆದುಹಾಕಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

    Recommended Video

    ವಿರಾಟ್ ಕೊಹ್ಲಿ ಗೆ ಹೇರ್ ಕಟ್ ಮಾಡಿದ ಅನುಷ್ಕಾ | Filmibeat Kannada

    ಇಡೀ ಭಾರತ ಲಾಕ್ ಡೌನ್ ಆಗಿ 5 ದಿನಗಳಾಗಿದೆ. ಬೇರೆ ಬೇರೆ ಜಿಲ್ಲೆ, ರಾಜ್ಯ ಮತ್ತು ವಿದೇಶದಿಂದ ಮನೆಗೆ ವಾಪಸ್ ಆದವರ ಮನೆಗೆ ಕ್ವಾರಂಟೈನ್ ಸ್ಟಿಕ್ಕರ್ ಅಂಟಿಸಲಾಗುತ್ತಿದೆ. 15 ದಿನಗಳ ಕಾಲ ಗೃಹ ದಿಗ್ಬಂಧನದಲ್ಲಿ ಇರಬೇಕು. ಇದೇ ನೋಟೀಸ್ ಅನ್ನು ಈಗ ಚೆನ್ನೈ ಕಾರ್ಪೋರೇಶನ್ ಕಮಲ್ ಮನೆಗೆ ಅಂಟಿಸಿದ್ದಾರೆ. ಮನೆಯಲ್ಲಿ ಯಾರು ಇಲ್ಲದಿದ್ದದು ನೋಟೀಸ್ ಅಂಟಿಸಿರುವುದು ಗೊಂದಲಕ್ಕೆ ಕಾರಣವಾಗಿದೆ. ಕಮಲ್ ಮನೆಗೆ ಅಂಟಿಸಿರುವ ಕ್ವಾರಂಟೈನ್ ನೋಟೀಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂದೆ ಓದಿ..

    ಕಮಲ್ ಮನೆಗೆ ಕ್ವಾರಂಟೈನ್ ನೋಟೀಸ್

    ಕಮಲ್ ಮನೆಗೆ ಕ್ವಾರಂಟೈನ್ ನೋಟೀಸ್

    ಕಮಲ್ ಹಾಸನ್ ಅವರ ಚೆನ್ನೈನ ಅಲ್ವರ್ ಪೇಟ್ ನಿವಾಸ ದಿಗ್ಬಂಧನದಲ್ಲಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ನಿವಾಸದಲ್ಲಿ ಮೊದಲು ಕಮಲ್ ಹಾಸನ್ ಕುಟುಂಬ ವಾಸಮಾಡುತ್ತಿದ್ದರು. ಆದರೀಗ ಯಾರು ಈ ಮನೆಯಲ್ಲಿ ವಾಸವಿಲ್ಲ. ಈ ಮನೆಯನ್ನು ಮಕ್ಕಳ್ ನಿಧಿ ಮೈಯಮ್ ಪಕ್ಷದ ಕಚೇರಿಯಾಗಿ ಪರಿವರ್ತಿಸಿಕೊಂಡಿದ್ದಾರೆ. ಈ ಕಚೇರಿಗೆ ಈಗ ಅಧಿಕಾರಿಗಳು ಕ್ವಾರಂಟೇನ್ ನೋಟೀಸ್ ಅಂಟಿದ್ದಾರೆ.

    ಅಂಟಿಸಿದ ನೋಟೀಸ್ ಕಿತ್ತುಹಾಕಿದ ಅಧಿಕಾರಿಗಳು

    ಅಂಟಿಸಿದ ನೋಟೀಸ್ ಕಿತ್ತುಹಾಕಿದ ಅಧಿಕಾರಿಗಳು

    ಚೆನ್ನೈ ಕಾರ್ಪೋರೇಟ್ ಅಧಿಕಾರಿಗಳಿಗೆ ಕಮಲ್ ಮನೆಯ ವಿಚಾರದಲ್ಲಿ ಗೊಂದಲ ಉಂಟಾಗಿ, ಕಮಲ್ ಹಳೆ ಮನೆಗೆ ಕ್ವಾರಂಟೈನ್ ನೋಟೀಸ್ ಅಂಟಿಸಿದ್ದಾರೆ. ನಂತರ ಕಮಲ್ ಹಾಸನ್ ಸ್ಪಷ್ಟನೆ ನೀಡಿದ ಮೇಲೆ ಚೆನ್ನೈ ಅಧಿಕಾರಿಗಳು ಕಿತ್ತುಹಾಕಿದ್ದಾರೆ.

    ಗೊಂದಲಕ್ಕೆ ಕಾರಣವಾದ ಮಾಜಿ ಪತ್ನಿ

    ಗೊಂದಲಕ್ಕೆ ಕಾರಣವಾದ ಮಾಜಿ ಪತ್ನಿ

    ಈ ಗೊಂದಲಕ್ಕೆ ಕಾರಣವಾಗಿದ್ದು ಕಮಲ್ ಹಾಸನ್ ಮಾಜಿ ಪತ್ನಿ ಗೌತಮಿ. ಇತ್ತೀಚಿಗೆ ಗೌತಮಿ ದುಬೈನಿಂದ ವಾಪಸ್ ಆಗಿದ್ದಾರೆ. ಅವರ ಪಾಸ್ ಪೋರ್ಟ್ ನಲ್ಲಿ ಅಲ್ವರ್ ಪೇಟ್ ನಿವಾಸದ ವಿಳಾಸ ಇರುವ ಕಾರಣ ಅಧಿಕಾರಿಗಳು ಕ್ವಾರಂಟೈನ್ ನೋಟೀಸ್ ಅಂಟಿಸಿರುವುದಾಗಿ ಚೆನ್ನೈ ಕಾರ್ಪೊರೇಟ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

    ಮನೆಯನ್ನೆ ಆಸ್ಪತ್ರೆ ಮಾಡಿ ಎಂದಿರುವ ಕಮಲ್ ಹಾಸನ್

    ಮನೆಯನ್ನೆ ಆಸ್ಪತ್ರೆ ಮಾಡಿ ಎಂದಿರುವ ಕಮಲ್ ಹಾಸನ್

    ಕೊರೊನಾ ವೈರಸ್ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಒಂದು ಕಾಲದಲ್ಲಿ ವಾವಿದ್ದ ಮನೆಯನ್ನೇ ಆಸ್ಪತ್ರೆಯನ್ನಾಗಿ ಬೇಕಾದರೆ ಪರಿವರ್ತಿಸಿಕೊಳ್ಳಿ ಎಂದು ನಟ, ರಾಜಕಾರಣಿ ಕಮಲ್ ಹಾಸನ್ ಸರ್ಕಾರಕ್ಕೆ ಹೇಳಿದ್ದಾರೆ. ಸರ್ಕಾರ ಯಾವಾಗ ಅನುಮತಿ ನೀಡುತ್ತದೆಯೋ ಆಗ ತಮ್ಮ ಮನೆಯನ್ನು ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಲು ಬಿಟ್ಟುಕೊಡಲು ಸಿದ್ಧರಾಗಿರುವುದಾಗಿ ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.

    ಕೊರೊನಾದಿಂದ ಬೇರೆ ಬೇರೆಯಾದ ಕಮಲ್ ಕುಟುಂಬ

    ಕೊರೊನಾದಿಂದ ಬೇರೆ ಬೇರೆಯಾದ ಕಮಲ್ ಕುಟುಂಬ

    ಕಮಲ್ ಹಾಸನ್ ಕುಟುಂಬ ಈಗ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. ಕೊರೊನಾ ವೈರಸ್ ಪರಿಣಾಮ ಕಮಲ್ ಕುಟುಂಬ ಪ್ರತ್ಯೇಕ ಮನೆಯಲ್ಲಿ ವಾಸುತ್ತಿದ್ದಾರೆ. ಕುಟುಂಬದವರೆಲ್ಲರೂ ಚಿತ್ರೀಕರಣ ಮತ್ತಿತರೆ ಕಾರಣದಿಂದ ಬೇರೆ-ಬೇರೆ ಕಡೆಗಳಲ್ಲಿ ಓಡಾಡಿರುವ ಕಾರಣ ಎಲ್ಲರು ಸದ್ಯಕ್ಕೆ ಬೇರೆ-ಬೇರೆಯಾಗಿರುವುದಾಗಿ ಶ್ರುತಿ ಹಾಸನ್ ಹೇಳಿದ್ದಾರೆ. ಅಕ್ಷರಾ ಹಾಸನ್ ಮತ್ತು ಕಮಲ್ ಹಾಸನ್ ಚೆನ್ನೈನಲ್ಲಿದ್ದರೂ ಪರಸ್ಪರ ಬೇರೆ-ಬೇರೆ ಮನೆಗಳಲ್ಲಿ ವಾಸವಿದ್ದಾರೆ. ಇನ್ನು ಶ್ರುತಿ ಹಾಸನ್ ಮುಂಬೈನಲ್ಲಿದ್ದಾರೆ. ಅವರ ತಾಯಿ ಸಾರಿಕಾ ಸಹ ಮುಂಬೈ ನಲ್ಲಿದ್ದಾರೆ ಆದರೆ ಬೇರೆ ಮನೆಯಲ್ಲಿ ವಾಸವಿದ್ದಾರೆ.

    English summary
    chennai corporation officials paste quarantine sticker on actor Kamal Haasan house.
    Saturday, March 28, 2020, 14:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X