For Quick Alerts
  ALLOW NOTIFICATIONS  
  For Daily Alerts

  ಕಮಲ್ ಹಾಸನ್ ಸಿನಿಮಾ ಸೆಟ್‌ಗೆ ಆಗಮಿಸಿ ಟೀಕೆಗೆ ಗುರಿಯಾಗಿದ್ದ ರಾಣಿ ಎಲಿಜಿಬೆತ್

  |

  ಇಂಗ್ಲೆಂಡ್ ರಾಣಿ ಕ್ವೀನ್ ಎಲಿಜಿಬೆತ್ ನಿನ್ನೆ ತಡರಾತ್ರಿ ನಿಧನ ಹೊಂದಿದ್ದಾರೆ. ಸುದೀರ್ಘ ಅವಧಿಯವರೆಗೆ ರಾಣಿಯಾಗಿದ್ದ ಎಲಿಜಿಬೆತ್ ವಿಶ್ವದಾದ್ಯಂತ ಹಲವು ರಾಷ್ಟ್ರಗಳಿಂದ ಗೌರವಾದರಗಳನ್ನು ಪಡೆದವರಾಗಿದ್ದರು.

  ಭಾರತದೊಂದಿಗೂ ಆತ್ಮ ಬಂಧವನ್ನು ರಾಣಿ ಎಲಿಜಿಬೆತ್ ಹೊಂದಿದ್ದರು. ತಮ್ಮ ಅಧಿಕಾರವಧಿಯಲ್ಲಿ ಮೂರು ಭಾರಿ ರಾಣಿ ಎಲಿಜಿಬೆತ್ ಭಾರತಕ್ಕೆ ಭೇಟಿ ನೀಡಿದ್ದರು. ಒಮ್ಮೆಯಂತೂ ಕಮಲ್ ಹಾಸನ್‌ರ ಹೊಸ ಸಿನಿಮಾದ ಚಿತ್ರೀಕರಣದ ಸೆಟ್‌ಗೆ ಆಗಮಿಸಿದ್ದು ದೊಡ್ಡ ಸುದ್ದಿಯಾಗಿತ್ತು.

  ಕಮಲ್ ಹಾಸನ್‌ ನಿರ್ದೇಶಿಸಿ, ನಿರ್ಮಿಸಿ, ನಟಿಸುತ್ತಿದ್ದ 'ಮರುದನಯಾಗಂ' ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಸೆಟ್‌ಗೆ ರಾಣಿ ಎಲಿಜಿಬೆತ್ ಆಗಮಿಸಿದ್ದರು. ಸುಮಾರು 20 ನಿಮಿಷಗಳ ಕಾಲ ಸಿನಿಮಾ ಸೆಟ್‌ನಲ್ಲಿ ಕಾಲ ಕಳೆದರು. ಕಮಲ್ ಹಾಸನ್‌ ಹಾಗೂ ಇತರ ಗಣ್ಯರೊಟ್ಟಿಗೆ ಮಾತನಾಡಿದ್ದರು. ಆದರೆ ಈ ಭೇಟಿ ಸಣ್ಣ ಮಟ್ಟಿನ ವಿವಾದಕ್ಕೆ ಕಾರಣವಾಗಿತ್ತು.

  1997 ರಲ್ಲಿ ಕಮಲ್ ಹಾಸನ್ ಐತಿಹಾಸಿಕ ಕತೆಯುಳ್ಳ 'ಮರುದನಯಾಗಂ' ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದರು. ಆ ಕಾಲದಲ್ಲಿ ಇದು ಭಾರಿ ಬಜೆಟ್‌ನ ಸಿನಿಮಾ ಆಗಿತ್ತು. ಸಿನಿಮಾಕ್ಕೆ ಆ ಕಾಲದಲ್ಲಿಯೇ 85 ಕೋಟಿ ಬಜೆಟ್ ಮೀಸಲಿಡಲಾಗಿತ್ತು. ತಮಿಳಿನ ಖ್ಯಾತ ನಟರು ಸೇರಿದಂತೆ ಬ್ರಿಟನ್‌ನ ಖ್ಯಾತ ನಟರು ಸಹ ಸಿನಿಮಾದಲ್ಲಿ ನಟಿಸಲಿದ್ದರು. ಭಾರಿ ಅದ್ಧೂರಿಯಾಗಿ ಸಿನಿಮಾದ ಮುಹೂರ್ತ ನಡೆದಿತ್ತು. ಅದೇ ಸಂದರ್ಭದಲ್ಲಿ ರಾಣಿ ಎಲಿಜಿಬೆತ್ ಭಾರತಕ್ಕೆ ಆಗಮಿಸಿ, ಕಮಲ್ ಹಾಸನ್‌ರ ಸಿನಿಮಾ ಸೆಟ್‌ಗೆ ಸಹ ಭೇಟಿ ನೀಡಿದ್ದರು.

  ಸಿನಿಮಾ ಸೆಟ್‌ಗೆ ಭೇಟಿ ನೀಡಿದ್ದ ರಾಣಿ

  ಸಿನಿಮಾ ಸೆಟ್‌ಗೆ ಭೇಟಿ ನೀಡಿದ್ದ ರಾಣಿ

  ಚೆನ್ನೈನ ಎಂಜಿಆರ್ ಸ್ಟುಡಿಯೋದಲ್ಲಿ ಯುದ್ಧದ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ರಾಣಿ ಎಲಿಜಿಬೆತ್ ಚಿತ್ರೀಕರಣ ಸೆಟ್‌ಗೆ ಆಗಮಿಸಿದರು. ಸೆಟ್‌ ಅನ್ನು ವೀಕ್ಷಿಸಿದ ರಾಣಿ ಎಲಿಜಿಬೆತ್, ಕಮಲ್ ಹಾಸನ್ ಅವರೊಟ್ಟಿಗೆ ಮಾತುಕತೆ ನಡೆಸಿದರು. ಕತೆಯ ಬಗ್ಗೆ ತಿಳಿದುಕೊಂಡರು. ಕಮಲ್‌ರ ಆಗಿನ ಪತ್ನಿ ಸಾರಿಕ ಜೊತೆಗೂ ಮಾತನಾಡಿದರು. ರಾಣಿ ಎಲಿಜಿಬೆತ್ ಜೊತೆ ಆಗಿನ ಸಿಎಂ ಕರುಣಾನಿಧಿ ಹಾಗೂ ಇನ್ನಿತರೆ ಪ್ರಮುಖ ರಾಜಕಾರಣಿಗಳು ಸಹ ಸಿನಿಮಾ ಸೆಟ್‌ಗೆ ಬಂದಿದ್ದರು. ಯುದ್ಧದ ಸನ್ನಿವೇಶದ ಚಿತ್ರೀಕರಣವನ್ನು ಕೆಲ ಕಾಲ ನೋಡಿ ಬಳಿಕ ಎಲ್ಲರಿಗೂ ಶುಭ ಹಾರೈಸಿ ತೆರಳಿದರು.

  ವಿವಾದ ಎದ್ದಿತ್ತು

  ವಿವಾದ ಎದ್ದಿತ್ತು

  ಆದರೆ ರಾಣಿ ಎಲಿಜಿಬೆತ್, 'ಮರುದನಯಾಗಂ' ಸಿನಿಮಾ ಸೆಟ್‌ಗೆ ಭೇಟಿ ನೀಡಿದ್ದಕ್ಕೆ ಬ್ರಿಟನ್‌ನಲ್ಲಿ ಸಣ್ಣ ಮಟ್ಟಿನ ವಿವಾದ ಏರ್ಪಟ್ಟಿತ್ತು. 'ಮರುದನಯಾಗಂ' ಸಿನಿಮಾ ಬ್ರಿಟೀಷರ ಆಡಳಿತ ವಿರುದ್ಧ ಸಶಸ್ತ್ರ ಹೋರಾಟ ಮಾಡುವ ಯೋಧ ಮೊಹಮ್ಮದ್ ಯೂಸಫ್ ಖಾನ್‌ನ ಕತೆಯನ್ನು ಒಳಗೊಂಡಿತ್ತು. ಬ್ರಿಟೀಷರ ವಿರುದ್ಧ ದ್ವೇಷ ಸಾರುವ, ಬ್ರಿಟೀಷರನ್ನು ಕೆಟ್ಟವರೆಂದು ಬಿಂಬಿಸುವ ಸಿನಿಮಾದ ಸೆಟ್‌ಗೆ ಭೇಟಿ ರಾಣಿ ಭೇಟಿ ನೀಡಿ, ಬ್ರಿಟೀಷರ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎನ್ನುವ ರೀತಿಯಲ್ಲಿ ಕೆಲವು ಮಾಧ್ಯಮಗಳು ಬರೆದಿದ್ದವು. ಮಾಮೂಲಿನಂತೆ ಈ ವಿವಾದಕ್ಕೂ ಸಹ ರಾಣಿ ಪ್ರತಿಕ್ರಿಯಿಸಲಿಲ್ಲ.

  85 ಕೋಟಿ ವೆಚ್ಚದ ಸಿನಿಮಾ

  85 ಕೋಟಿ ವೆಚ್ಚದ ಸಿನಿಮಾ

  'ಮರುದನಯಾಗಂ' ಸಿನಿಮಾ ಭಾರಿ ಬಜೆಟ್‌ನ ಸಿನಿಮಾ ಆಗಿತ್ತು. ಆಗಿನ ಕಾಲಕ್ಕೆ 85 ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಲು ಕಮಲ್ ಹಾಸನ್ ಮುಂದಾಗಿದ್ದರು. ಸಿನಿಮಾದ ನಾಯಕಿ ಪಾತ್ರಕ್ಕೆ 'ಟೈಟ್ಯಾನಿಕ್' ಸಿನಿಮಾದ ನಾಯಕಿ ಕೇಟ್ ವಿನ್ಲೆಟ್ ಅನ್ನು ಕೇಳಲಾಗಿತ್ತು. ಆದರೆ ಅವರು ನಟಿಸಲಿಲ್ಲ. ಕೊನೆಗೆ ಕಮಲ್ ಹಾಸನ್ ಅವರೇ ಬ್ರಿಟನ್‌ಗೆ ತೆರಳಿ ನಾಯಕಿಯ ಹುಡುಕಾಟ ನಡೆಸಿ ನಟಿಯೊಬ್ಬರನ್ನು ಅಂತಿಮಗೊಳಿಸಿದ್ದರು. ರಾಣಿ ಸೆಟ್‌ಗೆ ಆಗಮಿಸಿದ ದಿನ ಚಿತ್ರೀಕರಿಸಲಾಗುತ್ತಿದ್ದ ದೊಡ್ಡ ಫೈಟ್ ದೃಶ್ಯವೊಂದಕ್ಕೆ ಸುಮಾರು 1.50 ಕೋಟಿ ಖರ್ಚು ಮಾಡಲಾಗಿತ್ತು.

  ನಿಂತು ಹೋಯ್ತು ಸಿನಿಮಾ

  ನಿಂತು ಹೋಯ್ತು ಸಿನಿಮಾ

  ಆದರೆ ಸಿನಿಮಾದ ಅತಿಯಾದ ಬಜೆಟ್‌ನಿಂದಾಗಿಯೇ ಸಿನಿಮಾದ ಚಿತ್ರೀಕರಣ ನಿಂತು ಹೋಯಿತು. ಕಮಲ್ ಹಾಸನ್‌ಗೆ ಫೈನ್ಯಾನ್ಸ್ ಮಾಡುತ್ತಿದ್ದ ವಿದೇಶಿ ಸಂಸ್ಥೆ ಕೈಕೊಟ್ಟಿತು. ಇದರಿಂದಾಗಿ ಸಿನಿಮಾ ನಿಂತು ಹೋಯಿತು. ಸಿನಿಮಾದ ಮುಹೂರ್ತ, ಪ್ರೀ ಪ್ರೊಡಕ್ಷನ್‌, ಆರಂಭದ ಕೆಲವು ದೃಶ್ಯಗಳ ಚಿತ್ರೀಕರಣಕ್ಕೆ ಕಮಲ್ ಹಾಸನ್ ಮಾಡಿದ್ದ ಕೋಟ್ಯಂತರ ರುಪಾಯಿ ಹಣ ಹಿಂತಿರುಗದೆ ಕಮಲ್ ಸಾಲಕ್ಕೆ ಸಿಲುಕಿಕೊಂಡರು. ಈ ಸಾಲ ಹಲವು ವರ್ಷಗಳ ಕಾಲ ಕಮಲ್ ಹಾಸನ್ ಅನ್ನು ಬಾಧಿಸಿತು.

  English summary
  Queen Elizabeth visited Kamal Haasan's Marudhanayagam movie set in 1997 in Chennai.
  Friday, September 9, 2022, 11:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X