ಕಂಗನಾ, ನಿತ್ಯಾ ಮೆನನ್ ಆಯ್ತು....ಈಗ ಮೂರನೇ ಜಯಲಲಿತಾ ಎಂಟ್ರಿ
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಕುರಿತು ಎರಡು ಬಯೋಪಿಕ್ ಸದ್ದಿಲ್ಲದೇ ತಯಾರಾಗುತ್ತಿದೆ. ಒಂದು ಕಡೆ 'ತಲೈವಿ' ಹೆಸರಿನಲ್ಲಿ ಕಂಗನಾ ರಣಾವತ್ ಸಿನಿಮಾ ಮಾಡುತ್ತಿದ್ದರೆ ಇನ್ನೊಂದೆಡೆ 'ಐರನ್ ಲೇಡಿ' ಹೆಸರಿನಲ್ಲಿ ನಿತ್ಯಾ ಮೆನನ್ ಬಯೋಪಿಕ್ ಕೈಗೆತ್ತಿಕೊಂಡಿದ್ದಾರೆ.
ಈ ಎರಡು ಚಿತ್ರಗಳಿಗೂ ಫೈಟ್ ನೀಡುವುದಕ್ಕೆ ವೆಬ್ ಸೀರೀಸ್ ಸಿನಿಮಾ ನಿರ್ಮಾಣವಾಗುತ್ತಿದೆ. 'ಕ್ವೀನ್' ಹೆಸರಿನಲ್ಲಿ ಜಯಲಲಿತಾ ಅವರ ಜೀವನ ಕಥೆ ತೆರೆಮೇಲೆ ಮೂಡುತ್ತಿದೆ.
ಜಯಲಲಿತಾ ಅವರ ಪಾತ್ರದಲ್ಲಿ ಬಹುಭಾಷೆ ನಟಿ ರಮ್ಯಾಕೃಷ್ಣನ್ ನಟಿಸುತ್ತಿದ್ದು, ಈಗಷ್ಟೇ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ವೆಬ್ ಸೀರೀಸ್ ನಲ್ಲಿ ಜಯಲಲಿತಾ ಅವರ ಬಗ್ಗೆ ಮೂರು ಹಂತದಲ್ಲಿ ಕಥೆ ಮಾಡಲಾಗಿದೆ. ಬಾಲ್ಯದ ಜೀವನ, ಟೀನೆಜ್ ಕಥೆ (ಅದರಲ್ಲಿ ಸಿನಿಮಾ ನಟಿ ಆದ ಕಥೆ) ಹಾಗೂ ರಾಜಕೀಯ ಜೀವನ ತೆರೆಗೆ ತರಲಾಗುತ್ತಿದೆ.

ಡಿಸೆಂಬರ್ 5 ರಂದು ಕ್ವೀನ್ ವೆಬ್ ಸೀರೀಸ್ ಟ್ರೈಲರ್ ಬಿಡುಗಡೆಯಾಗುತ್ತಿದೆ. ಗೌತಮ್ ಮೆನನ್ ಮತ್ತು ಪ್ರಶಾಂತ್ ಮುರುಗೇಶನ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.
ಈ ವೆಬ್ ಸೀರೀಸ್ ಎಂಎಕ್ಸ್ ಪ್ಲೇಯರ್ ನಲ್ಲಿ ಪ್ರಸಾರವಾಗಲಿದೆ. ಈಗಷ್ಟೇ ಟೀಸರ್, ಟ್ರೈಲರ್ ಬಗ್ಗೆ ಮಾಹಿತಿ ನೀಡಿರುವ ಚಿತ್ರತಂಡ, ಪ್ರಸಾರದ ಬಗ್ಗೆ ದಿನಾಂಕ ಪ್ರಕಟಿಸಿಲ್ಲ.
ಕ್ವೀನ್ ವೆಬ್ ಸೀರೀಸ್ ನಿರ್ದೇಶನದ ಜೊತೆ ನಿರ್ದೇಶಕ ಗೌತಮ್ ಮೆನನ್, ಎರಡು ಸಿನಿಮಾ ಕೈಯಲ್ಲಿಟ್ಟುಕೊಂಡಿದ್ದಾರೆ. ವಿಕ್ರಮ್ ಜೊತೆಗಿನ ಸಿನಿಮಾ 'ಧ್ರುವ ನಾತಚರಾಮಿ' ಹಾಗೂ ವರುಣ್ ಜೊತೆ ಇನ್ನೊಂದು ಚಿತ್ರ ಮಾಡುತ್ತಿದ್ದಾರೆ.


Click it and Unblock the Notifications











