'ನಿಮ್ಮ ಮೇಲೆ ಕ್ರಶ್ ಆಗಿದೆ' ಎಂದ ಅಭಿಮಾನಿಗೆ ನಟ ಮಾಧವನ್ ನೀಡಿದ ಉತ್ತರ ಹೀಗಿತ್ತು

ಬಹುಭಾಷಾ ನಟ ಮಾಧವನ್ ಸದ್ಯ ಮಾರಾ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ತಮಿಳಿನ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿರುವ ವಿಕ್ರಂ ವೇದ ನಟ ಈಗ ಸಾಮಾಜಿಕ ಜಾಲತಾಣಗಳಲ್ಲೂ ಸಖತ್ ಆಕ್ಟೀವ್ ಆಗಿದ್ದಾರೆ.

ಚಿತ್ರದಿಂದ ಕೊಂಚ ಗ್ಯಾಪ್ ಪಡೆದಿದ್ದ ಮಾಧವನ್ 'ನಿಶಬ್ದಂ' ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರುವ ಮೂಲಕ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸಿದ್ದರು. ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಪಾರ ಸಂಖ್ಯೆ ಅಭಿಮಾನಿ ಬಳಗಹೊಂದಿರುವ ನಟ ಮಾಧವನ್ ಗೆ ಮಹಿಳಾ ಅಭಿಮಾನಿಗಳ ಸಂಖ್ಯೆಯೇ ಹೆಚ್ಚು. ಮಾಧವನ್ ಎಂದರೆ ಹುಚ್ಚು ಹಿಡಿಸಿಕೊಂಡಿರುವ ಅಪಾರ ಸಂಖ್ಯೆಯ ಮಹಿಳಾ ಅಭಿಮಾನಿಗಳಿದ್ದಾರೆ.

ಇತ್ತೀಚಿಗೆ ಮಾಧವನ್ ಗೆ ಮಹಿಳಾ ಅಭಿಮಾನಿಯೊಬ್ಬರು ಟ್ವೀಟ್ ಮಾಡಿ, 'ನಿಮ್ಮ ಮೇಲೆ ಎರಡು ದಶಕಗಳಿಂದ ಕ್ರಶ್ ಆಗಿದೆ' ಎಂದು ಬರೆದು ಹಾರ್ಟ್ ಇಮೋಜಿ ಕಳುಹಿಸಿದ್ದಾರೆ. ಪ್ರೀತಿಯ ಅಭಿಮಾನಿಗೆ ನಟ ಮಾಧವನ್ ಕ್ಯೂಟ್ ಪ್ರತಿಕ್ರಿಯೆ ನೀಡಿದ್ದಾರೆ. ಮಾಧವನ್ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

R Madhavan responses to a fan who has a crush on him for over two decades

ಪ್ರೀತಿಯ ಅಭಿಮಾನಿಗೆ ಮಾಧವನ್ 'ಯಪ್ಪಾ...' ಎಂದು ಪ್ರತಿಕ್ರಿಯೆ ನೀಡಿ, ನಗುವ ಮತ್ತು ಹಾರ್ಟ್ ಇಮೋಜಿ ಕಳುಹಿಸಿದ್ದಾರೆ. ಮಾಧವನ್ ಪ್ರತಿಕ್ರಿಯೆ ಅಭಿಮಾನಿಗಳ ಹೃದಯ ಗೆದ್ದಿದೆ.

ಇತ್ತೀಚಿಗೆ ಮಾಧವನ್ ಬಗ್ಗೆ ಮತ್ತೊಂದು ಸುದ್ದಿ ಹರಿದಾಡಿತ್ತು. ಭಾರತದ ಖ್ಯಾತ ಉದ್ಯಮಿ ರತನ್ ಟಾಟ್ ಬಯೋಪಿಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಈ ಬಗ್ಗೆ ಅಭಿಮಾನಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಶೇರ್ ಮಾಡಿ ನಟ ಮಾಧವನ್ ಅವರಿಗೆ ಟ್ಯಾಗ್ ಮಾಡಿದ್ದರು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನಟ ಮಾಧವನ್ ಪ್ರತಿಕ್ರಿಯೆ ನೀಡಿದ್ದಾರೆ.

ನೆಟ್ಟಿಗನೊಬ್ಬ, 'ಮಾಧವನ್, ರತನ್ ಟಾಟಾ ಬಯೋಪಿಕ್ ನಲ್ಲಿ ನೀವು ನಟಿಸುತ್ತಿದ್ದೀರಾ? ಒಂದು ವೇಳೆ ಈ ಸಿನಿಮಾ ಬಂದರೆ ಅನೇಕರಿಗೆ ಪ್ರೇರಣೆಯಾಗಲಿದೆ' ಎಂದು ಹೇಳಿದ್ದಾರೆ. ಅಭಿಮಾನಿಯ ಪ್ರಶ್ನೆಗೆ ಉತ್ತರ ನೀಡಿರುವ ನಟ ಮಾಧವನ್, 'ದುರದೃಷ್ಟವಶಾತ್ ಇದು ನಿಜವಲ್ಲ. ಕೆಲವು ಅಭಿಮಾನಿಗಳು ಪೋಸ್ಟರ್ ಮಾಡಿದ್ದಾರೆ. ಅಂತಹ ಯಾವುದೇ ಯೋಜನೆ ಇನ್ನು ಚರ್ಚೆಯಾಗಿಲ್ಲ.' ಎಂದು ಹೇಳುವ ಮೂಲಕ ಮಾಧವಾನ್ ವದಂತಿಗಳಿಗೆ ತೆರೆ ಎಳೆದಿದ್ದಾರೆ.

More from Filmibeat

English summary
Actor R Madhavan reply to a fan who has a crush on him for over two decades.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X