For Quick Alerts
  ALLOW NOTIFICATIONS  
  For Daily Alerts

  ನಾಲ್ಕು ವರ್ಷಗಳಲ್ಲಿ ಒಂದು ರೂಪಾಯಿ ಹಣ ಗಳಿಸಿಲ್ಲ: ಮಾಧವನ್

  |

  ಕೋವಿಡ್ ನಿಂದಾಗಿ ಇಡೀ ವಿಶ್ವದ ಚಿತ್ರರಂಗ ತತ್ತರಿಸಿ ಹೋಗಿತ್ತು. ಇದಕ್ಕೆ ಭಾರತದ ಚಿತ್ರರಂಗವೂ ಹೊರತಲ್ಲ. ಸಿನಿಮಾವನ್ನೇ ನಂಬಿದ್ದ ಎಷ್ಟೋ ಮಂದಿ ತಂತ್ರಜ್ಞರು, ಪೋಷಕ ನಟ-ನಟಿಯರು, ಕ್ಯಾರೆಕ್ಟರ್ ಆರ್ಟಿಸ್ಟ್‌ಗಳು ಬೀದಿಗೆ ಬಂದರು.

  ಪೋಷಕ ನಟರು, ಸಣ್ಣ ತಂತ್ರಜ್ಞರು ಮಾತ್ರವಲ್ಲ, ಕೋವಿಡ್‌ನಿಂದ ದೊಡ್ಡ-ದೊಡ್ಡ ನಟರು, ನಿರ್ದೇಶಕರು, ನಟಿಯರು, ನಿರ್ಮಾಪಕರು ಸಹ ತತ್ತರಿಸಿ ಹೋದರು. ಆದರೆ ದೊಡ್ಡ ನಟ-ನಟಿಯರ ಸಮಸ್ಯೆಗಳು ಹೊರ ಪ್ರಪಂಚಕ್ಕೆ ಗೊತ್ತಾಗಿರಲಿಲ್ಲ. ಆದರೆ ಈಗ ಸ್ಟಾರ್ ನಟ ಆರ್.ಮಾಧವನ್ ಕಳೆದ ಕೆಲ ವರ್ಷಗಳಿಂದ ತಾವು ಅನುಭವಿಸಿದ ಕಷ್ಟಗಳನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

  ಆರ್.ಮಾಧವನ್ ಈ ಬಾರಿ ಫ್ರ್ಯಾನ್ಸ್‌ನಲ್ಲಿ ನಡೆಯುತ್ತಿರುವ ಕಾನ್ ಚಿತ್ರೋತ್ಸವದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದಾರೆ. ಅಲ್ಲದೆ ಅವರೇ ನಿರ್ದೇಶಿಸಿ, ನಟಿಸಿರುವ 'ರಾಕೆಟ್ರಿ; ನಂಬೀ ಎಫೆಕ್ಟ್' ಸಿನಿಮಾ ಸಹ ಕಾನ್‌ನಲ್ಲಿ ಪ್ರದರ್ಶಿತಗೊಂಡಿದೆ.

  ಕಾನ್‌ನಲ್ಲಿ ಜರುಗಿದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ನಟ ಆರ್.ಮಾಧವನ್, ಕಳೆದ ನಾಲ್ಕು ವರ್ಷಗಳಿಂದ ತಾವು ಒಂದು ರುಪಾಯಿ ಹಣವನ್ನೂ ಸಂಪಾದನೆ ಮಾಡಿಲ್ಲ ಎಂಬುದಾಗಿ ಹೇಳಿದ್ದಾರೆ. ಕೇವಲ ಒಂದು ಪಾತ್ರದಿಂದ ಹಾಗೋ ಹೀಗೋ ತಮ್ಮ ಜೀವನ ನಡೆಯಿತು ಎಂದು ಸಹ ಮಾಧವನ್ ಹೇಳಿಕೊಂಡಿದ್ದಾರೆ.

  ಕೋವಿಡ್‌ಗೆ ಮುನ್ನ ನಾನು 'ರಾಕೆಟ್ರಿ: ನಂಬಿ ಎಫೆಕ್ಟ್' ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದೆ, ಅದೇ ಸಮಯಕ್ಕೆ ಕೋವಿಡ್ ಬಂತು ಆ ಎರಡು ವರ್ಷ ಯಾವ ಕೆಲಸವನ್ನೂ ಮಾಡಲಾಗಲಿಲ್ಲ ಹೀಗಾಗಿ ಸತತ ನಾಲ್ಕು ವರ್ಷ ಒಂದು ರುಪಾಯಿ ಸಹ ನಾನು ಸಂಪಾದನೆ ಮಾಡಿಲ್ಲ'' ಎಂದಿದ್ದಾರೆ ಮಾಧವನ್.

  'ನಾನು ನಟಿಸಿದ ವೆಬ್ ಸರಣಿ 'ಡಿಕಪಲ್ಡ್‌' ನಿಂದ ಬಂದ ಸಂಭಾವನೆಯಿಂದ ಹೇಗೋ ಜೀವನ ಸಾಗಿಸಿದೆ'' ಎಂದಿದ್ದಾರೆ ಆರ್.ಮಾಧವನ್.

  ಆರ್.ಮಾಧವನ್ ತಮಿಳಿನ ಸ್ಟಾರ್ ನಟರಲ್ಲಿ ಒಬ್ಬರು. 90 ರ ದಶಕದಲ್ಲಿ ಭಾರಿ ಬೇಡಿಕೆ ಮಾಧವನ್‌ಗೆ ಇತ್ತು. ಮೋಸ್ಟ್ ಹ್ಯಾಂಡ್ಸಮ್ ನಟರಾಗಿದ್ದ ಮಾಧವನ್, ದಶಕಗಳ ಕಾಲ ನೆನಪುಳಿವ ಹಲವು ಸಿನಿಮಾಗಳನ್ನು ನೀಡಿದ್ದಾರೆ. ಆದರೆ ಇತ್ತೀಚೆಗೆ ಅವರ ಬೇಡಿಕೆ ಕಡಿಮೆಯಾಗಿದೆ ಆದರೆ ಈಗಲೂ ಮಾಧವನ್ ನಾಯಕ ನಟನ ಪಾತ್ರಗಳಲ್ಲಿಯೇ ನಟಿಸುತ್ತಿದ್ದಾರೆ.

  ಆರ್.ಮಾಧವನ್, 'ರಾಕೆಟ್ರಿ: ದಿ ನಂಬಿ ಎಫೆಕ್ಟ್' ಹೆಸರಿನ ಸಿನಿಮಾವನ್ನು ಮಾಧವನ್ ನಿರ್ದೇಶನ ಮಾಡಿದ್ದಾರೆ. ನಟಿಸಿದ್ದಾರೆ ಸಹ ಹಾಗೂ ಸಿನಿಮಾದ ಸಹ ನಿರ್ಮಾಪಕರೂ ಆಗಿದ್ದಾರೆ. ಈ ಸಿನಿಮಾ ಜುಲೈ 1 ರಂದು ತೆರೆಗೆ ಬರಲಿದೆ. ಸಿನಿಮಾದಲ್ಲಿ ನಟ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾವು ವಿಜ್ಞಾನಿ ನಂಬಿ ನಾರಾಯಣ್ ಜೀವನವನ್ನು ಆಧರಿಸಿದೆ.

  ವಿಜ್ಞಾನಿ ನಂಬಿ ನಾರಾಯಣ್ ಅವರ ಮೇಲೆ ಗೂಢಾಚಾರಿಕೆ ಆರೋಪ ಹೊರಿಸಲಾಗಿತ್ತು. ಹಲವು ವರ್ಷಗಳ ವಿಚಾರಣೆ ಬಳಿಕ ನಂಬಿ ಅವರ ಮೇಲೆ ಹೇರಲಾಗಿದ್ದ ಆರೋಗಳು ಸುಳ್ಳೆಂಬುದು ಸುಪ್ರೀಂಕೋರ್ಟ್‌ನಲ್ಲಿ ಸಾಬೀತಾಯಿತು.

  English summary
  Actor R Madhavan said he did not earn single rupee in last four years. He said Before COVID he was involed in Shooting and then COVID hit. now he is waiting for his movie to release.
  Saturday, May 21, 2022, 8:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X