For Quick Alerts
  ALLOW NOTIFICATIONS  
  For Daily Alerts

  7 ಪದಕ ಗೆದ್ದು ಸಾಧನೆ ಗೈದ ನಟ ಮಾಧವನ್ ಪುತ್ರ ವೇದಾಂತ್

  |

  ತಮಿಳಿನ ಖ್ಯಾತ ನಟ ಮಾಧವನ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದಾರೆ. ಸಿನಿಮಾರಂಗದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಮಾಧವನ್ ಈಗ ತನ್ನ ಮಗನ ಸಾಧನೆಗಳನ್ನು ನೋಡಿ ಹೆಮ್ಮೆ ಪಡುತ್ತಿದ್ದಾರೆ. ಮಾಧವನ್‌ರಂತೆ ಮಗ ವೇದಾಂತ್‌ ಕೂಡ ಸಿನಿಮಾ ರಂಗಕ್ಕೆ ಬರಬಹುದು, ನಟನೆಯಲ್ಲಿ ಆಸಕ್ತಿ ತೋರಬಹುದು ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ ಮಗನ ಹಾದಿಯೇ ಬೇರೆ ಯಾಗಿದೆ. ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ವೇದಾಂತ್ ಕ್ರೀಡಾ ಕ್ಷೇತ್ರದಲ್ಲಿಯೇ ಸಾಧನೆ ಮಾಡುತ್ತಿದ್ದಾರೆ.

  16 ವರ್ಷದ ವೇದಾಂತ್ ಈ ಚಿಕ್ಕ ವಯಸ್ಸಿಗೆ ತಂದೆ ತಾಯಿಯನ್ನು ಹೆಮ್ಮೆ ಪಡಿಸುತ್ತಿದ್ದಾರೆ. ಈಗ ಸ್ವಿಮ್ಮಿಂಗ್‌ನಲ್ಲಿ 7 ಪದಕವನ್ನು ತನ್ನದಾಗಿಸಿಕೊಳ್ಳುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾರೆ .ಇತ್ತೀಚೆಗಷ್ಟೆ ಬೆಂಗಳೂರಿನ ಬಸವನಗುಡಿಯಲ್ಲಿ ನಡೆದ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ 4 ಬೆಳ್ಳಿ ಮತ್ತು 3 ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಈ ಮೂಲಕ ಅಪ್ಪನಂತೆಯೇ ಮಗ ಕೂಡ ಕ್ರೀಡಾ ಕ್ಷೇತ್ರದಲ್ಲಿ ಅಪ್ಪನನ್ನೆ ಮೀರಿಸುವಂತೆ ಸಾಧನೆ ಮಾಡುತ್ತಿದ್ದಾರೆ.

  ಸ್ವಿಮ್ಮಿಂಗ್ ಚಾಂಪಿಯನ್​ಶಿಪ್​ನಲ್ಲಿ ವೇದಾಂತ್ ಮಹಾರಾಷ್ಟ್ರ ತಂಡದ ಪರವಾಗಿ ಸ್ಪರ್ಧಿಸಿದ್ದಾನೆ. 800 ಮೀಟರ್ ಫ್ರೀ ಸ್ಟೈಲ್, 1500 ಫ್ರೀ ಸ್ಟೈಲ್, 4*100 ಫ್ರೀಸ್ಟೈಲ್ ರಿಲೇ ಮತ್ತು 4*200 ಫ್ರೀಸ್ಟೈಲ್ ರಿಲೇಯಲ್ಲಿ, 100 ಮೀಟರ್ ಫ್ರೀಸ್ಟೈಲ್ ಸ್ವಿಮ್ಮಿಂಗ್, 200 ಮೀಟರ್ ಫ್ರೀಸ್ಟೈಲ್ ಸ್ವಿಮ್ಮಿಂಗ್, 400 ಮೀಟರ್ ಫ್ರೀಸ್ಟೈಲ್ ಸ್ವಿಮ್ಮಿಂಗ್ ನಲ್ಲಿ ವೇದಾಂತ್ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾನೆ.

  R Madhavan son Vedaant wins 7 medals in swimming Championship

  ಈ ಖುಷಿಯ ವಿಚಾರವನ್ನು ಮಾಧವನ್ ತಮ್ಮ ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದು, ಮಗನ ಸಾಧನೆಯ ಬಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನಾನು ಮಗನಿಂದ ಕಲಿಯೋದು ತುಂಬಾ ಇದೆ. ನನ್ನನ್ನೇ ವೇದಾಂತ್ ಮೀರಿಸುತ್ತಿದ್ದಾನೆ. ಈತನ ಸಾಧನೆಗೆ ನಾನು ಹೆಮ್ಮೆಗೊಂಡಿದ್ದೇನೆ. ದೇವರು ವೇದಾಂತ್‌ಗೆ ಇನ್ನು ಹೆಚ್ಚಿನ ಶಕ್ತಿ ಕೊಡಲಿ, ಅವನು ಅಂದುಕೊಂಡಿದ್ದನ್ನು ಸಾಧಿಸಲಿ ಎಂದು ಬರೆದುಕೊಂಡಿದ್ದಾರೆ.

  ಇದಕ್ಕೆ ಸಾಕಷ್ಟು ಮಂದಿ ಕಮೆಂಟ್ ಮಾಡುತ್ತಿದ್ದು, ಮಕ್ಕಳಿಗೆ ಒಳ್ಳೆಯ ದಾರಿ ತೋರಿಸಿದರೆ ಏನು ಬೇಕಾದರೂ ಮಾಡುತ್ತಾರೆ ಅನ್ನೋದಕ್ಕೆ ನಿಮ್ಮ ಮಗನೆ ಸಾಕ್ಷಿ. ಅವರ ಸಾಧನೆ ಹೀಗೆ ಮುಂದುವರೆಯಲಿ ಅಂತೆಲ್ಲ ಶುಭಹಾರೈಸುತ್ತಿದ್ದಾರೆ. ಜೊತೆಗೆ ವೇದಾಂತ್ ಸಿನಿಮಾ ಎಂಟ್ರಿ ಯಾವಾಗ ಅಂತಲೂ ಪ್ರಶ್ನೆ ಮಾಡಿದ್ದಾರೆ. ಈ ಹಿಂದೆ ಮಾಧವನ್ ಒಂದು ಸಂದರ್ಶನದಲ್ಲಿ ಮಾತನಾಡಿದ್ದರು ಈ ಸಂದರ್ಭದಲ್ಲಿ," ಮಕ್ಕಳನ್ನು ಉತ್ತಮವಾಗಿ ಬೆಳೆಸೋದು ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡುವುದಷ್ಟೆ ನಮ್ಮ ಕರ್ತವ್ಯ, ವೃತ್ತಿ ಆಯ್ಕೆ, ಜೀವನ ನಡೆಸುವ ದಾರಿ ಎಲ್ಲವನ್ನೂ ಅವರೆ ಕಂಡುಕೊಳ್ಳಬೇಕು. ನಾವು ಅವರಿಗೆ ನಮ್ಮಂತೆಯೇ ಆಗು ಎಂದು ಹೇಳೊದಕ್ಕೆ ಸಾಧ್ಯವಿಲ್ಲ" ಎಂದಿದ್ದರು. ಹಾಗೆಯೆ ಮಗನ ಇಚ್ಚೆಯಂತೆ ಕ್ರೀಡಾ ಕ್ಷೇತ್ರದಲ್ಲಿ ಉತ್ತೇಜನ ನೀಡುತ್ತಿದ್ದಾರೆ.

  R Madhavan son Vedaant wins 7 medals in swimming Championship

  ಮಾಧವನ್ ತನ್ನ ಮಗನನ್ನು ಹೀಗೆ ಆದರ್ಶವಾಗಿ ಬೆಳೆಸುತ್ತಿರೊದಕ್ಕೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ. ಈ ಹಿಂದೆ ಕೂಡ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್‌ ಖಾನ್ ಡ್ರಗ್‌ಕೇಸ್‌ನಲ್ಲಿ ಸಿಲುಕಿಕೊಂಡಾಗ , ಮಾಧವನ್ ಮತ್ತು ಪುತ್ರ ವೇದಾಂತ್ ಸಾಕಷ್ಟು ಸುದ್ದಿಯಾಗಿದ್ರು, ಆಚಾರ, ವಿಚಾರ, ಸಂಸ್ಕ್ರತಿ ಚನ್ನಾಗಿದ್ದರೆ ಮಕ್ಕಳು ಹೇಗೆ ಬೆಳೆಯುತ್ತಾರೆ ಅನ್ನೋದಕ್ಕೆ ಇವರೆ ಸಾಕ್ಷಿ ಎಂದೆಲ್ಲ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಶುರುವಾಗಿದ್ದವು. ಈಗ ವೇದಾಂತ್‌ರ ಕ್ರೀಡಾ ಸಾಧನೆಗೆ ನೆಟ್ಟಿಗರು ಐಡಿಯಲ್ ಸನ್ ಎಂದು ಹೇಳುವ ಮೂಲಕ ಖುಷಿ ವ್ಯಕ್ತಪಡಿಸುತ್ತಿದ್ದಾರೆ.

  ಇನ್ನು ನಟ ಮಾದವನ್ ತಮಿಳಿನ ಮಾರ ಸಿನಿಮಾದ ನಂತರ ಹೆಚ್ಚಿನ ಸಮಯ ತೆಗೆದುಕೊಂಡಿದ್ದು, ಈಗ ಅವರ ಕೈಯಲ್ಲಿ ನಂಬಿ ನಾರಾಯಣನ್ ಜೀವನಾಧಾರಿತ ಚಿತ್ರ ರಾಕೆಟ್ರಿ ದಿ ನಂಬಿ ಎಫೆಕ್ಟ್ ಚಿತ್ರ ಇದೆ. ಶೂಟಿಂಗ್ ಹಂತದಲ್ಲಿ ಸಿನಿಮಾ ಇದ್ದು ಮುಂದಿನ ವರ್ಷ ಮಾರ್ಚ್‌ ನಲ್ಲಿ ಸಿನಿಮಾ ತೆರೆಕಾಣಲಿದೆ.ಹೀಗೆ ಒಂದು ಕಡೆ ತಂದೆ ಚಿತ್ರರಂಗದಲ್ಲಿ ತೊಡಗಿಸಿಕೊಂಡು ಸಾಧನೆ ಗೈಯುತ್ತಿದ್ದಾರೆ, ಅತ್ತ ಮಗ ವೇದಾಂತ್ ಕ್ರೀಡಾ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ಅಪ್ಪ ಮಗನ ಕಾಂಬಿನೇಷನ್‌ಗೆ ಅಭಿಮಾನಿಗಳು ಖುಷಿಯಾಗಿದ್ದಾರೆ.

  English summary
  Actor R Madhavan 16-year-old son Vedaant has won seven medals in swimming in a recently-concluded 47th Junior National Aquatic Championships 2021 in Bengaluru. Know more.
  Thursday, October 28, 2021, 12:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X