ತಮಿಳಿನಲ್ಲಿ ಹೆಂಗಿದೆ 'ವಿಕ್ರಾಂತ್ ರೋಣ'ನ 'ರಾ..ರಾ.. ರಕ್ಕಮ್ಮ' ರಂಗು
ಕಿಚ್ಚ ಸುದೀಪ್ ಅಭಿನಯದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ'ನ ದರ್ಶನ ಪಡೆಯಲು ಸಿನಿ ಪ್ರೇಕ್ಷಕರು ಕಾದು ಕುಳಿತಿದ್ದಾರೆ. ಅದರಲ್ಲೂ ಕಿಚ್ಚನ ಅಭಿಮಾನಿಗಳಿಗೆ ಈ ಸಿನಿಮಾ ವಿಶೇಷವಾಗಿದ್ದು, ಸಿನಿಮಾದ ಪ್ರತಿಯೊಂದು ಅಪ್‌ಡೇಟ್‌ಗಳನ್ನು ಫಾಲೋ ಮಾಡ್ತಿದ್ದಾರೆ.
ಈಗಾಗಲೇ 'ವಿಕ್ರಾಂತ್ ರೋಣ' ಚಿತ್ರ ಟ್ರೈಲರ್ ಹಾಗೂ ಪೋಸ್ಟರ್ ಮೂಲಕ ಅಭಿಮಾನಿಗಳಲ್ಲಿ ಸಿನಿಮಾ ಮೇಲಿನ ನೀರಿಕ್ಷೆಯನ್ನು ಹೆಚ್ಚಿಸಿದೆ. ಅಭಿಮಾನಿಗಳು ಕೂಡ ಸಿನಿಮಾ ನೋಡಲು ಕಾತುರರಾಗಿದ್ದಾರೆ. 'ಕೋಟಿಗೊಬ್ಬ 3' ಬಳಿಕ ಮತ್ತೆ ಸುದೀಪ್ 'ವಿಕ್ರಾಂತ್ ರೋಣ' ಚಿತ್ರದಲ್ಲಿ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ.
ಸದ್ಯಕ್ಕೆ 'ವಿಕ್ರಾಂತ್ ರೋಣ' ಚಿತ್ರವು ದಿನ ಬಿಟ್ಟು ದಿನ ಸಿನಿಮಾದ ಕುರಿತು ಹೊಸ ಅಪ್ ಡೇಟ್ ನೀಡುತ್ತಿದೆ. ಈಗ ಸಿನಿಮಾದ ಹಾಟ್ ಫೇವರಿಟ್ ಸಾಂಗ್ ಆಗಿರುವ 'ರಕ್ಕಮ್ಮಾ' ಸಾಂಗ್‌ನ್ನು ತಮಿಳಿನಲ್ಲಿ ರಿಲೀಸ್ ಆಗಿದೆ.

ತಮಿಳಿನಲ್ಲಿ 'ರಾ..ರಾ.. ರಕ್ಕಮ್ಮ' ಸಾಂಗ್ ರಿಲೀಸ್
'ವಿಕ್ರಾಂತ್ ರೋಣ' ಚಿತ್ರ 'ರಾ..ರಾ.. ರಕ್ಕಮ್ಮ' ಹಾಡು ಈಗಾಗಲೇ ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್ ಆಗಿ ಸಖತ್ ಹಿಟ್ ಆಗಿದೆ. ಈಗ ತಮಿಳಿನಲ್ಲೂ 'ರಾ..ರಾ.. ರಕ್ಕಮ್ಮ' ಅಂತಲೇ ಹಾಡು ರಿಲೀಸ್ ಆಗಿದ್ದು, ತಮಿಳು ಪ್ರೇಕ್ಷಕರಿಗೆ ಸಖತ್ ಕಿಕ್ ಕೊಟ್ಟಿದೆ. ಲಹರಿ ಮ್ಯೂಸಿಕ್ ಯ್ಯೂಟೂಬ್‌ನಲ್ಲಿ ತಮಿಳು ವರ್ಷನ್ 'ರಾ..ರಾ.. ರಕ್ಕಮ್ಮ' ಹಾಡು ರಿಲೀಸ್ ಆಗಿದ್ದು, ಭರ್ಜರಿ ವೀವ್ಸ್ ಪಡೆದುಕೊಂಡಿದೆ. ಈ ಹಾಡು ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ 60 ಸಾವಿರಕ್ಕೂ ಹೆಚ್ಚು ವೀವ್ಸ್ ಪಡೆದು ಮುನ್ನುಗ್ಗಿದೆ. 'ರಾ..ರಾ.. ರಕ್ಕಮ್ಮ' ಹಾಡು ಕೇಳಿದ ತಮಿಳು ಪ್ರೇಕ್ಷಕರು ಕೂಡ 'ರಾ..ರಾ.. ರಕ್ಕಮ್ಮ' ಹಾಡನ್ನು ಗುನುಗಿದ್ದಾರೆ.

ಕನ್ನಡಿಗರ ಮನ ಗೆದ್ದ 'ರಕ್ಕಮ್ಮ'
ಕಳೆದ ಮೂರು ದಿನಗಳ ಹಿಂದೆ ಕನ್ನಡದಲ್ಲಿ 'ರಕ್ಕಮ್ಮ' ಹಾಡು ಬಿಡುಗಡೆಗೊಂಡಿತ್ತು. ಈಗ ಈ ಹಾಡು 4 ಮಿಲಿಯನ್ ವೀವ್ಸ್ ಪಡೆಯುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದೆ. 'ರಕ್ಕಮ್ಮ' ಲಿರಿಕಲ್ ಹಾಡಿನಲ್ಲಿ ಸುದೀಪ್ ರಕ್ಕಮ್ಮ ಜೊತೆ ಮಸ್ತ್ ಸ್ಟೆಪ್ ಹಾಕಿರುವ ಸಣ್ಣ ತುಣುಕುಗಳನ್ನು ಸಹ ತೋರಿಸಲಾಗಿದೆ. ಹೀಗಾಗಿ 'ರಕ್ಕಮ್ಮ' ಹಾಡಿನ ಲಿರಿಕಲ್ ವಿಡಿಯೋನೇ ಕನ್ನಡದಲ್ಲಿ ಭರ್ಜರಿ ವೀಕ್ಷಣೆ ಪಡೆದುಕೊಂಡಿದ್ದು, ಕನ್ನಡಿಗರ ಮನ ಗೆಲ್ಲುವಲ್ಲಿ 'ಗಡಾಂಗ್ ರಕ್ಕಮ್ಮ' ಹಾಡು ಯಶಸ್ವಿಯಾಗಿದೆ.

'ರಕ್ಕಮ್ಮ'ಳಾಗಿ ಕಿಚ್ಚನಿಗೆ ಸಾಥ್ ಕೊಟ್ಟ ಜಾಕ್ವಲಿನ್
'ವಿಕ್ರಾಂತ್ ರೋಣ' ಚಿತ್ರದಲ್ಲಿ ದೊಡ್ಡ ತಾರ ಬಳಗವೇ ಇದ್ದು, ಈಗ 'ರಕ್ಕಮ್ಮಾ' ಹಾಡಿನಲ್ಲಿ ಬಾಲಿವುಡ್ ಬೆಡಗಿ ಜಾಕ್ವಲಿನ್ ಫರ್ನಾಂಡೀಸ್ ಕಾಣಿಸಿಕೊಂಡಿದ್ದಾರೆ. ಸುದೀಪ್ ಹಾಗೂ ಜಾಕ್ವಲಿನ್ ಫರ್ನಾಂಡೀಸ್ ಕಾಂಬಿನೇಶನ್ ಪ್ರೇಕ್ಷಕರಿಗೆ ಮೆಚ್ಚುಗೆ ಆಗಿದೆ. ಹಾಡಿನಲ್ಲಿ ರಗಡ್ ಆಗಿ ಸುದೀಪ್ ಕಾಣಿಸಿಕೊಂಡಿದ್ದು, ಜಾಕ್ವಲಿನ್ ಕೂಡ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು 'ರಕ್ಕಮ್ಮ' ಹಾಡಿಗೆ ಮಸ್ತ್ ಡ್ಯಾನ್ಸ್ ಮಾಡಿದ್ದು, ಈ ಹಾಡನ್ನು ಥಿಯೇಟರ್‌ನಲ್ಲಿ ನೋಡಲು ಪ್ರೇಕ್ಷಕರು ಕಾದು ಕುಳಿತಿದ್ದಾರೆ.

ಜುಲೈ ನಲ್ಲಿ 'ವಿಕ್ರಾಂತ್ ರೋಣ' ಅಬ್ಬರ
ಆರು ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ 'ವಿಕ್ರಾಂತ್ ರೋಣ' ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಿಚ್ಚನ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಜುಲೈ 28 ಕ್ಕೆ ಸಿನಿಮಾ ವಿಶ್ವದಾದ್ಯಂತ ಅಬ್ಬರಿಸಲಿದೆ. ಪಿವಿಆರ್ ಸಂಸ್ಥೆ ಈ ಸಿನಿಮಾವನ್ನು ಉತ್ತರ ಭಾರತದಲ್ಲಿ ರಿಲೀಸ್ ಮಾಡುವ ಹೊಣೆಯನ್ನ ಹೊತ್ತಿದೆ. 3ಡಿ ಅವತರಣಿಕೆಯಲ್ಲಿ 'ವಿಕ್ರಾಂತ್ ರೋಣ' ರಿಲೀಸ್ ಆಗಲಿದ್ದು, 'ಕೆಜಿಎಫ್ 2' ನಂತರ ಮತ್ತೊಂದು ಕನ್ನಡ ಸಿನಿಮಾ 'ವಿಕ್ರಾಂತ್ ರೋಣ' ಚಿತ್ರ ಕೂಡ ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.


Click it and Unblock the Notifications











