For Quick Alerts
  ALLOW NOTIFICATIONS  
  For Daily Alerts

  ವಿಜಯ್ ಸೇತುಪತಿ ಸಿನಿಮಾದಿಂದ ಹೊರ ನಡೆದ ಅದಿತಿ ಜಾಗಕ್ಕೆ ಸ್ಟಾರ್ ನಟಿಯ ಎಂಟ್ರಿ

  |

  ತಮಿಳು ನಟ ವಿಜಯ್ ಸೇತುಪತಿ ಸದ್ಯ ಮುತ್ತಯ್ಯ ಮುರಳೀಧರನ್ ಬಯೋಪಿಕ್ ಮೂಲಕ ಸದ್ದು ಮಾಡುತ್ತಿದ್ದಾರೆ. ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುರಳೀಧರನ್ ಪಾತ್ರದಲ್ಲಿ ವಿಜಯ್ ಸೇತುಪತಿ ನಟಿಸುತ್ತಿದ್ದರು. 800 ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆ ಚಿತ್ರದ ವಿರುದ್ಧ ತಮಿಳಿಗರು ಆಕ್ರೋಶ ವ್ಯಕ್ತಪಡಿಸಿದರು.

  ಬಳಿಕ ವಿಜಯ್ ಸೇತುಪತಿ 800 ಸಿನಿಮಾದಿಂದ ಹೊರಬಂದಿರುವುದಾಗಿ ಬಹಿರಂಗ ಪಡಿಸಿದರು. ಈ ಸುದ್ದಿಯ ಬೆನ್ನಲ್ಲೇ ವಿಜಯ್ ಸೇತುಪತಿ ಅಭಿನಯದ ಮತ್ತೊಂದು ಬಹುನಿರೀಕ್ಷೆಯ ಸಿನಿಮಾದ ಸುದ್ದಿ ಸದ್ದು ಮಾಡುತ್ತಿದ್ದಾರೆ. ವಿಜಯ್ ಸೇತುಪತಿ ತಮಿಳು, ತೆಲುಗು ಮತ್ತು ಹಿಂದೆ ಸಿನಿಮಾರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. 10ಕ್ಕು ಹೆಚ್ಚು ಸಿನಿಮಾಗಳಲ್ಲಿ ವಿಜಯ್ ಅಭಿನಯಿಸುತ್ತಿರುವ ವಿಜಯ್ ನಟನೆಯ ಬಹುನಿರೀಕ್ಷೆಯ ತುಘಲರ್ ದರ್ಬಾರ್ ಚಿತ್ರದಲ್ಲಿ ಅಚ್ಚರಿಕರ ಬದಲಾವಣೆಯಾಗಿದೆ. ಮುಂದೆ ಓದಿ..

  ಮುರಳೀಧರನ್ ಬಯೋಪಿಕ್ ನಿಂದ ಹೊರಬಂದ ವಿಜಯ್ ಸೇತುಪತಿ ಮಗಳಿಗೆ ಅತ್ಯಾಚಾರ ಬೆದರಿಕೆಮುರಳೀಧರನ್ ಬಯೋಪಿಕ್ ನಿಂದ ಹೊರಬಂದ ವಿಜಯ್ ಸೇತುಪತಿ ಮಗಳಿಗೆ ಅತ್ಯಾಚಾರ ಬೆದರಿಕೆ

  ಚಿತ್ರದಿಂದ ಹೊರನಡೆದ ನಟಿ ಅದಿತಿ

  ಚಿತ್ರದಿಂದ ಹೊರನಡೆದ ನಟಿ ಅದಿತಿ

  ಸೇತುಪತಿ ಅಭಿನಯದ ನಿರೀಕ್ಷೆಯ ಸಿನಿಮಾಗಲ್ಲಿ ತುಘಲರ್ ದರ್ಬಾರ್ ಸಿನಿಮಾ ಕೂಡ ಒಂದು. ರಾಜಕೀಯ ವಿಡಂಬನಾತ್ಮಕ ಸಿನಿಮಾ ಇದಾಗಿದ್ದು ಈಗಾಗಲೇ ಚಿತ್ರದ ಫೋಸ್ಟ್ ಲುಕ್ ರಿಲೀಸ್ ಆಗಿದೆ. ಇದೀಗ ಸಿನಿಮಾದಿಂದ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಚಿತ್ರದಿಂದ ನಾಯಕಿ ಅದಿತಿ ರಾವ್ ಹೈದರಿ ಹೊರನಡೆದಿದ್ದಾರಂತೆ.

  ಸೇತುಪತಿ ಸಿನಿಮಾದಿಂದ ಅದಿತಿ ಹೊರನಡೆದಿದ್ದೇಕೆ?

  ಸೇತುಪತಿ ಸಿನಿಮಾದಿಂದ ಅದಿತಿ ಹೊರನಡೆದಿದ್ದೇಕೆ?

  ಅದಿತಿ ರಾವ್ ಸಿನಿಮಾದಿಂದ ಹೊರನಡೆದ ಬಗ್ಗೆ ಚಿತ್ರದ ನಿರ್ದೇಶಕ ಪ್ರಸಾದ್ ದೀನದಾಯಲನ್ ಬಹಿರಂಗಪಡಿಸಿದ್ದಾರೆ. 'ಡೇಟ್ ಹೊಂದಾಣಿಕೆಯ ಸಮಸ್ಯೆಯಿಂದ ಅದಿತಿ ಸಿನಿಮಾದಲ್ಲಿ ನಟಿಸುತ್ತಿಲ್ಲ, ನಾವು ಕೂಡ ಉತ್ಯುತ್ತಮ ಪ್ರಯತ್ನ ಮಾಡಿದೆವು, ಆದರೆ ಕಾರ್ಯರೂಪಕ್ಕೆ ಬಂದಿಲ್ಲ' ಎಂದು ಹೇಳಿದ್ದಾರೆ.

  Breaking: ಮುರಳೀಧರನ್ ಬಯೋಪಿಕ್‌ಗೆ ಗುಡ್ ಬೈ ಹೇಳಿದ ವಿಜಯ್ ಸೇತುಪತಿBreaking: ಮುರಳೀಧರನ್ ಬಯೋಪಿಕ್‌ಗೆ ಗುಡ್ ಬೈ ಹೇಳಿದ ವಿಜಯ್ ಸೇತುಪತಿ

  ಅದಿತಿ ಜಾಗಕ್ಕೆ ರಾಶಿ ಎಂಟ್ರಿ

  ಅದಿತಿ ಜಾಗಕ್ಕೆ ರಾಶಿ ಎಂಟ್ರಿ

  ಇದೇ ಸಮಯದಲ್ಲಿ ಅದಿತಿ ಜಾಗಕ್ಕೆ ಎಂಟ್ರಿ ಕೊಟ್ಟ ನಟಿಯಾರು ಎನ್ನುವುದನ್ನು ನಿರ್ದೇಶಕರು ರಿವೀಲ್ ಮಾಡಿದ್ದಾರೆ. ಹೌದು, ಅದಿತಿ ಜಾಗಕ್ಕೆ ನಟಿ ರಾಶಿ ಖನ್ನಾ ಬಂದಿದ್ದಾರೆ. ತುಘಲಕ್ ದರ್ಬಾರ್ ಪಾತ್ರಕ್ಕೆ ರಾಶಿ ಸಂಪೂರ್ಣವಾಗಿ ಹೊಂದಾಣಿಕೆಯಾಗುತ್ತಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಅಲ್ಲದೆ ಈ ಸಿನಿಮಾದ ಕಥೆ ಕೇಳಿ ರಾಶಿ ಕೂಡ ಇಂಪ್ರೆಸ್ ಆಗಿದ್ದಾರಂತೆ.

  Dhruva Sarja First Reaction For Chiru Baby | ಅಣ್ಣನ ಮಗು ನೋಡಿ ಧ್ರುವನಿಗೆ ಮೊದಲು ಅನ್ನಿಸಿದ್ದೇನು ಗೊತ್ತಾ
  ವಿಜಯ್ ಸೇತುಪತಿ ಜೊತೆ ರಾಶಿಗೆ ಎರಡನೇ ಸಿನಿಮಾ

  ವಿಜಯ್ ಸೇತುಪತಿ ಜೊತೆ ರಾಶಿಗೆ ಎರಡನೇ ಸಿನಿಮಾ

  ಅಂದ್ಹಾಗೆ ರಾಶಿ ಎರಡನೇ ಬಾರಿಗೆ ವಿಜಯ್ ಸೇತುಪತಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 2019ರಲ್ಲಿ ಇಬ್ಬರು ಸಂಗಧಮಿಜನ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಅಂದ್ಹಾಗೆ ಈಗಾಗಲೇ 50ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆಯಂತೆ. ಇತ್ತೀಚಿಗಷ್ಟೆ ವಿಜಯ್ ಮತ್ತು ರಾಶಿ ಒಂದು ಹಾಡನ್ನು ಚಿತ್ರೀಕರಿಸಲಾಗಿದೆಯಂತೆ. ಈ ವರ್ಷದ ಕೊನೆಯಲ್ಲಿ ಚಿತ್ರೀಕರಣ ಮುಗಿಸುವ ಯೋಜನೆ ಮಾಡಿಕೊಂಡಿದೆ ಸಿನಿಮಾತಂಡ.

  English summary
  Aditi RaoHydari walks out from Vijay Sethupathi's upcoming Tughlaq Durbar. Raashi Khanna play female lead in Tughlaq Durbar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X