For Quick Alerts
  ALLOW NOTIFICATIONS  
  For Daily Alerts

  ಮತ್ತೆ ನಯನತಾರಾ ಬಗ್ಗೆ ಅಸಭ್ಯವಾಗಿ ಮಾತನಾಡಿದ ತಮಿಳು ನಟ

  |

  ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ಜೋರಾಗಿ ನಡೆಯುತ್ತಿದೆ. ಹಲವು ನಟ-ನಟಿಯರು ವಿವಿಧ ಪಕ್ಷಗಳ ಮೂಲಕ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದಾರೆ. ಅಂತೆಯೇ ತಮಿಳಿನ ಹಿರಿಯ ನಟ ರಾಧಾ ರವಿ ಸಹ ಈ ಬಾರಿ ಬಿಜೆಪಿಯ ಪರವಾಗಿ ಪ್ರಚಾರಕ್ಕೆ ಇಳಿದಿದ್ದಾರೆ.

  ಹಿಂದೊಮ್ಮೆ ನಟಿ ನಯನತಾರಾ ಬಗ್ಗೆ ಅಸಭ್ಯವಾಗಿ ಮಾತನಾಡಿ ಡಿಎಂಕೆ ಪಕ್ಷದಿಂದ ಹೊರಗೆ ದಬ್ಬಿಸಿಕೊಂಡಿದ್ದ ರಾಧಾ ರವಿ ಈಗ ಮತ್ತೆ ನಯನತಾರಾ ಬಗ್ಗೆ ಮಾತನಾಡಿದ್ದಾರೆ, ಜೊತೆಗೆ ಡಿಎಂಕೆ ಪಕ್ಷದ ಮುಖಂಡ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಬಗ್ಗೆಯೂ ಬಾಯಿ ಹರಿಬಿಟ್ಟಿದ್ದಾರೆ.

  ಬಿಜೆಪಿ ಪರ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಧಾ ರವಿ, 'ನಾನು ನಯನತಾರಾ ಬಗ್ಗೆ ಮಾತನಾಡಿಲ್ಲ ಎಂದರೂ ಅವರು (ಡಿಎಂಕೆ) ಕೇಳಲಿಲ್ಲ, ಮಾಧ್ಯಮಗಳೂ ಸಹ ಹಾಗೆಯೇ ಹೇಳಿದವು. ಕೊನೆಗೆ ಅವರಿಗೆ ನಾನೇ ಹೇಳಿದೆ. 'ಹೌದು ನಾನು ನಯನತಾರಾ ವಿರುದ್ಧ ಮಾತನಾಡಿದ್ದೇನೆ ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ ಎಂದಿದ್ದೆ' ಎಂದಿದ್ದಾರೆ.

  'ಉದಯನಿಧಿಗೂ-ನಯನತಾರಾಗೂ ಸಂಭಂಧವಿದ್ದರೆ ನಾನೇನು ಮಾಡಲಿ'

  'ಉದಯನಿಧಿಗೂ-ನಯನತಾರಾಗೂ ಸಂಭಂಧವಿದ್ದರೆ ನಾನೇನು ಮಾಡಲಿ'

  'ನಯನತಾರಾ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದೀಯ ಎಂದು ನನ್ನನ್ನು ತಾತ್ಕಾಲಿಕವಾಗಿ ಪಕ್ಷದಿಂದ ಅಮಾನತು ಮಾಡಿದರು. ನೀವೇನು ನನ್ನನ್ನು ಕಳಿಸುವುದು ಎಂದು ನಾನೇ ಪಕ್ಷಬಿಟ್ಟು ಬಂದೆ. ಆದರೆ ನಾನು ಅವರನ್ನು (ಡಿಎಂಕೆ) ಕೇಳುವುದೆಂದರೆ, ನಯನತಾರಾ ಯಾರು? ನಯನತಾರಾಗೂ ನಿಮಗೂ ಏನು ಸಂಬಂಧ? ಅವಳ ಬಗ್ಗೆ ಮಾತನಾಡಿದರೆ ನಿಮಗೇನು ಸಮಸ್ಯೆ. ಉದಯನಿಧಿಗೂ, ನಯನತಾರಾಗೂ ಸಂಬಂಧ ಇದ್ದರೆ ನಾನೇನು ಮಾಡಲು ಆಗುತ್ತದೆ' ಎಂದು ಹೇಳಿದ್ದಾರೆ ರಾಧಾ ರವಿ.

  ಆಕ್ರೋಶ ವ್ಯಕ್ತಪಡಿಸಿದ್ದ ನಯನತಾರಾ

  ಆಕ್ರೋಶ ವ್ಯಕ್ತಪಡಿಸಿದ್ದ ನಯನತಾರಾ

  2019 ರಲ್ಲಿ ರಾಧಾ ರವಿ, ನಯನತಾರಾ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾಗ, ನಯನತಾರಾ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ರಾಧಾ ರವಿ ಮಾತುಗಳು ಅಸಭ್ಯ, 'ಸೆಕ್ಸಿಸ್ಟ್', ಪ್ರಚಾರ ಪಡೆದುಕೊಳ್ಳಲು, ಮಾಧ್ಯಮಗಳ ಗಮನ ತಮ್ಮತ್ತ ಸೆಳೆದುಕೊಳ್ಳಲು ರಾಧಾ ರವಿ ನೀಚ ಹಾದಿ ಹಿಡಿದಿದ್ದಾರೆ ಎಂದು ನಯನತಾರಾ ಆರೋಪಿಸಿದ್ದರು.

  ಕಮಲ್ ಹಾಸನ್ ಖಾಸಗಿ ಬದುಕಿನ ಬಗ್ಗೆಯೂ ಮಾತು

  ಕಮಲ್ ಹಾಸನ್ ಖಾಸಗಿ ಬದುಕಿನ ಬಗ್ಗೆಯೂ ಮಾತು

  ರಾಧಾ ರವಿ, ನಯನತಾರಾ ಬಗ್ಗೆ ಮಾತ್ರವೇ ಅಲ್ಲದೆ ಕೆಲವು ದಿನಗಳ ಹಿಂದೆ ನಟ, ರಾಜಕಾರಣಿ ಕಮಲ್‌ ಹಾಸನ್ ಖಾಸಗಿ ಜೀವನದ ಬಗ್ಗೆಯೂ ಮಾತನಾಡಿದ್ದರು. 'ಕಮಲ್‌ ಹಾಸನ್ ಬಗ್ಗೆ ಜಾಗೃತೆಯಾಗಿ ಇರುವಂತೆ ಎಚ್ಚರಿಕೆ ಹೇಳಲೆಂದೇ ನಾನು ಪ್ರಚಾರಕ್ಕೆ ಬಂದಿದ್ದೇನೆ. ಮೂವರು ಹೆಂಗಸರನ್ನು (ಮಾಜಿ ಪತ್ನಿಯರು) ಕಾಪಾಡಿಕೊಳ್ಳಲಾಗದ ಅವನು ಜನರನ್ನು ಹೇಗೆ ಕಾಪಾಡಿಯಾನು' ಎಂದು ಕಮಲ್ ಬಗ್ಗೆ ಹೇಳಿಕೆ ನೀಡಿದ್ದರು ರಾಧಾ ರವಿ.

  ಯುವರತ್ನ ಸಿನಿಮಾದಲ್ಲಿ ಅಪ್ಪು ಎಂಟ್ರಿಗೆ ಪ್ರೇಕ್ಷಕರು ಫಿದಾ!! | Filmibeat Kannada
  ಹಲವು ಸಿನಿಮಾತಾರೆಯರು ಕಣದಲ್ಲಿ

  ಹಲವು ಸಿನಿಮಾತಾರೆಯರು ಕಣದಲ್ಲಿ

  ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಜೋರಾಗಿ ನಡೆಯುತ್ತಿದೆ. ಕಮಲ್ ಹಾಸನ್, ಖುಷ್ಬು, ಉದಯನಿಧಿ ಸ್ಟಾಲಿನ್ ಸೇರಿದಂತೆ ಇನ್ನೂ ಹಲವರು ನಟ-ನಟಿಯರು ಈ ಬಾರಿ ಕಣದಲ್ಲಿದ್ದಾರೆ. ತಮಿಳುನಾಡಿನಲ್ಲಿ ಮತದಾನವು ಏಪ್ರಿಲ್ 6 ರಂದು ಮತದಾನ ನಡೆಯಲಿದೆ. ಮತ ಎಣಿಕೆ ಮೇ 2ಕ್ಕೆ ನಡೆಯಲಿದೆ.

  English summary
  Actor Radha Ravi talked lightly about Nayanthara and actor politician Udhayanidhi Stalin in election campaign.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X