ತಮಿಳಿನ 'ಕೌನ್ ಬನೇಗಾ ಕರೋಡ್ ಪತಿ' ನಿರೂಪಕಿ ಆದ ರಾಧಿಕಾ ಶರತ್ ಕುಮಾರ್
ಹಿಂದಿಯ ಯಶಸ್ವಿ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್ ಪತಿ ದಕ್ಷಿಣದ ಕೆಲ ಭಾಷೆಗಳಲ್ಲಿ ಪ್ರಸಾರವಾಗ್ತಿದೆ. ಕನ್ನಡದಲ್ಲಿ ''ಕನ್ನಡದ ಕೋಟ್ಯಧಿಪತಿ'', ತೆಲುಗಿನಲ್ಲಿ ''ಮೀಲೊ ಯವರು ಕೋಟ್ಯಧೀಶ್ವರಡು'' ಎಂಬ ಹೆಸರಿನಲ್ಲಿ ಮೂಡಿ ಬರ್ತಿದೆ.
ಈಗ, ತಮಿಳಿನಲ್ಲಿ 'ಕೋಡೇಶ್ವರಿ' ಎಂಬ ಹೆಸರಿನಲ್ಲಿ ಈ ಶೋ ಬರಲಿದ್ದು, ಇದನ್ನ ನಟಿ ರಾಧಿಕಾ ಶರತ್ ಕುಮಾರ್ ನಿರೂಪಣೆ ಮಾಡಲಿದ್ದಾರೆ. ಈ ಮೂಲಕ ಕೌನ್ ಬನೇಗಾ ಕರೋಡ್ ಪತಿ ಇತಿಹಾಸದಲ್ಲಿ ಮೊದಲ ಮಹಿಳಾ ನಿರೂಪಕಿ ಎಂಬ ಹೆಗ್ಗಳಿಕೆಗೆ ರಾಧಿಕಾ ಪಾತ್ರರಾಗಿದ್ದಾರೆ.

ತಮಿಳಿನಲ್ಲಿ ಕೌನ್ ಬನೇಗಾ ಕರೋಡ್ ಪತಿ ಶೋ ನಡೆಸಿಕೊಡಲಿರುವ ರಾಧಿಕಾ ಅವರಿಗೆ ಬಿಗ್ ಬಿ ಅಮಿತಾಭ್ ಬಚ್ಚನ್ ಶುಭಕೋರಿದ್ದಾರೆ. ''ಇದೊಂದು ಸ್ಫೂರ್ತಿದಾಯಕ ಕಾರ್ಯಕ್ರಮ. ಇಂತಹ ಶೋಗೆ ನೀವು ನಿರೂಪಕಿಯಾಗಿದ್ದು ಖುಷಿಯ ವಿಚಾರ. ನೀವು ಮೊದಲ ಮಹಿಳಾ ನಿರೂಪಕಿ ಆಗುತ್ತಿದ್ದಾರೆ. ಶುಭಾಶಯ'' ಎಂದಿದ್ದಾರೆ.
ಯುಕೆ ಮೂಲದ 'ಹೂ ವಾಂಟ್ಸ್ ಟು ಬಿ ಎ ಮಿಲಿನೇಯರ್' ಶೋನಿಂದ ಭಾರತಕ್ಕೆ ಬಂದಿರುವ ಕೆಬಿಸಿ, 2000 ಇಸವಿಯಲ್ಲಿ ಮೊದಲ ಆವೃತ್ತಿ ಪ್ರಸಾರವಾಗಿತ್ತು. ನಂತರ ಹಿಂದಿಯಲ್ಲಿ ಯಶಸ್ವಿ ಆದ ಬಳಿಕ ಪ್ರಾದೇಶಿಕವಾಗಿ ವಿಸ್ತರಿಸಿದ ಶೋ, ಬೋಝ್ ಪುರಿ, ಮರಾಠಿ, ತಮಿಳು, ಕನ್ನಡ, ಬೆಂಗಾಳಿ, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಆರಂಭವಾಯಿತು.
ಈಗ ತಮಿಳಿನಲ್ಲಿ ಈ ಶೋ ಬರ್ತಿದ್ದು, ಕಾಲಿವುಡ್ ಟಿವಿ ವೀಕ್ಷಕರಿಗೆ ಖುಷಿ ತಂದಿದೆ. ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡದ ಭಾಷೆಯಲ್ಲಿ ರಾಧಿಕಾ ನಟಿಸುತ್ತಿದ್ದಾರೆ. ಸದ್ಯ ಕನ್ನಡದಲ್ಲಿ ಪುನೀತ್ ನಟಿಸುತ್ತಿರುವ ಯುವರತ್ನ ಚಿತ್ರದಲ್ಲಿ ರಾಧಿಕಾ ಅಭಿನಯಿಸುತ್ತಿದ್ದಾರೆ.


Click it and Unblock the Notifications











