Don't Miss!
- News Dr.Rajkumar: ಹುಟ್ಟೂರಲ್ಲಿ ಮುತ್ತುರಾಜಣ್ಣನ ನೆನಪುಗಳು ನೂರಾರು.. ನಿಮಗೆ ಗೊತ್ತಿರದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Automobiles ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
- Lifestyle ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು.! ಹೇಗೆ ಗೊತ್ತಾ?
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Finance ಬೆಂಗಳೂರಿನಲ್ಲಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ, ದಿನಾಂಕ, ಸಮಯ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನ್ಯೂ ಲುಕ್ ಜೊತೆ ಸ್ಪೆಷಲ್ ಸಂದೇಶ ಕೊಟ್ಟ ನಟ ರಾಘವ ಲಾರೆನ್ಸ್
ನೃತ್ಯ ನಿರ್ದೇಶಕನಾಗಿ ಚಿತ್ರರಂಗದಲ್ಲಿ ಹೆಸರು ಗಳಿಸಿದ್ದ ರಾಘವ ಲಾರೆನ್ಸ್ ಸದ್ಯ ಟಾಲಿವುಡ್ನಲ್ಲಿ ಬಹುಬೇಡಿಕೆಯ ನಟ. ಕಾಂಚನಾ, ಕಾಂಚನಾ -2 ಚಿತ್ರಗಳಲ್ಲಿ ನಾಯಕ ನಟನಾಗಿ ಮಿಂಚಿದ್ದ ರಾಘವ ಲಾರೆನ್ಸ್ ಅದ್ಧುತವಾಗಿ ನಟಿಸುವುದರ ಮೂಲಕ ಯಾವ ಪಾತ್ರಕ್ಕೂ ಜೀವ ನೀಡಬಲ್ಲ ನಟ ಎಂದು ಗುರುತಿಸಿಕೊಂಡರು.
ಹಾರರ್-ಕಾಮಿಡಿ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡುವ ಮೂಲಕ ಸೈ ಉತ್ತಮ ನಟನಾಗಿಯೂ ಸೈ ಎನಿಸಿಕೊಂಡಿದ್ದ ತಮಿಳು ನಟ ರಾಘವ ಲಾರೆನ್ಸ್ ಇದೀಗ ಹೊಸ ಲುಕ್ನಲ್ಲಿ ಅಭಿಮಾನಿಗಳಿಗೆ ದರ್ಶನಕೊಟ್ಟಿದ್ದಾರೆ. ಈ ಹಿಂದೆ ನೋಡಿದ ರಾಘವ ಲಾರೆನ್ಸ್ಗೂ ಸದ್ಯದ ರಾಘವ ಲಾರೆನ್ಸ್ಗೂ ಅಜ-ಗಜಾಂತರ ವ್ಯತ್ಯಾಸವಿದ್ದು, ಫ್ಯಾನ್ಸ್ ಜಸ್ಟ್ ವಾವ್ ಎಂದಿದ್ದಾರೆ.
ಮಾಸ್ ಹೀರೋ ಲುಕ್ನಲ್ಲಿ ಕಾಂಚನ ನಟ
ಪಿ.ವಾಸು ನಿರ್ದೇಶನದ ಚಂದ್ರಮುಖಿ-2 ಚಿತ್ರದಲ್ಲಿ ನಟಿಸುತ್ತಿರುವ ರಾಘವ ಲಾರೆನ್ಸ್ ಈ ಚಿತ್ರಕ್ಕಾಗಿ ತಮ್ಮ ದೇಹವನ್ನು ದಂಡಿಸಿದ್ದು, ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ನೃತ್ಯ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ರಾಘವ ಲಾರೆನ್ಸ್ ಇದೀಗ ಮಾಸ್ ಹೀರೋ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಇತ್ತೀಚಿನ ಫೋಟೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿರುವ ರಾಘವ ಲಾರೆನ್ಸ್, ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಫೋಟೋದಲ್ಲಿ ಬಾಡಿಬಿಲ್ಡರ್ನಂತೆ ರಾಘವ ಫೋಸ್ ಕೊಟ್ಟಿದ್ದು, ಮೆಚ್ಚಿನ ನಾಯಕನ ಬದಲಾವಣೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಿವ ಮಾಸ್ಟರ್ಗೆ ಥ್ಯಾಂಕ್ಸ್ ಹೇಳಿದ ಲಾರೆನ್ಸ್
ಇನ್ನು ಫೋಟೋ ಜೊತೆಗೆ ಒಂದಿಷ್ಟು ಪ್ರಮುಖ ವಿಚಾರಗಳನ್ನು ರಾಘವ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಮೊದಲನೆಯದಾಗಿ ತಮ್ಮ ಟ್ರೈನರ್ಗೆ ಧನ್ಯವಾದ ತಿಳಿಸಿದ್ದಾರೆ. ಚಂದ್ರಲೇಖ-2 ಚಿತ್ರಕ್ಕಾಗಿ ಬದಲಾಗಿದ್ದೇನೆ. ಈ ಬದಲಾವಣೆಗೆ ಸತತ ಶ್ರಮ ವಹಿಸಿರುವ ನನ್ನ ತರಬೇತುದಾರ ಶಿವ ಮಾಸ್ಟರ್ ಅವರಿಗೆ ಧನ್ಯವಾದ ಎಂದಿದ್ದಾರೆ.
ಲಾರೆನ್ಸ್ ಟ್ರಸ್ಟ್ನ ಸಂಪೂರ್ಣ ಜವಾಬ್ದಾರಿ ಹೊತ್ತ ರಾಘವ
ಇನ್ನು ತಮ್ಮ ಲಾರೆನ್ಸ್ ಚಾರಿಟೇಬಲ್ ಟ್ರಸ್ಟ್ ಬಗ್ಗೆ ಪ್ರಮುಖವಾದ ವಿಚಾರವನ್ನು ರಾಘವ ಲಾರೆನ್ಸ್ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇನ್ನು ಮುಂದೆ ಲಾರೆನ್ಸ್ ಚಾರಿಟೇಬಲ್ ಟ್ರಸ್ಟ್ನ ಸಂಪೂರ್ಣ ಜವಾಬ್ದಾರಿಯನ್ನು ನಾನೇ ಹೊರುತ್ತಿದ್ದೇನೆ. ನಾನೀಗ ಉತ್ತಮ ಸ್ಥಾನದಲ್ಲಿದ್ದೇನೆ. ಟ್ರಸ್ಟ್ ನಿರ್ವಹಣೆ ಮಾಡುವಷ್ಟು ಶಕ್ತನಾಗಿದ್ದೇನೆ. ಹೆಚ್ಚಿನ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಹೀಗಾಗಿ ಜನ ಸೇವೆಯ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಇನ್ಮುಂದೆ ನಿಮ್ಮ ಪ್ರೀತಿ ಆಶೀರ್ವಾದವಿರಲಿ
ಇನ್ನು ಈವರೆಗೂ ನನ್ನ ಹಾಗೂ ಲಾರೆನ್ಸ್ ಚಾರಿಟೇಬಲ್ ಟ್ರಸ್ಟ್ ಅನ್ನು ನಂಬಿ ಸಹಾಯ ಮಾಡಿರುವ ದಾನಿಗಳಿಗೆ ಧನ್ಯವಾದಗಳು. ಇನ್ನು ಮುಂದೆ ಟ್ರಸ್ಟ್ ಹೆಸರಿನಲ್ಲಿ ಯಾರೂ ಹಣ ಕಳುಹಿಸಬೇಡಿ ಎಂದಿದ್ದಾರೆ. ನಿಮ್ಮ ಸಹಾಯಕ್ಕೆ ನಾನು ಋಣಿಯಾಗಿದ್ದೇನೆ. ಇನ್ನು ಮುಂದೆ ನಿಮ್ಮ ಪ್ರೀತಿ ಆಶೀರ್ವಾದ ನಮ್ಮ ಮೇಲಿರಲಿ ಎಂದು ರಾಘವ ಲಾರೆನ್ಸ್ ಮನವಿ ಮಾಡಿದ್ದಾರೆ. ರಾಘವ ಲಾರೆನ್ಸ್ ಅಭಿನಯದ ಚಂದ್ರಮುಖಿ-2 ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರತಂಡ ಪ್ರೇಕ್ಷಕರಿಗೆ ಗುಡ್ನ್ಯೂಸ್ ನೀಡಲಿದೆ. ಇನ್ನು 17 ವರ್ಷಗಳ ಬಳಿಕ ಚಂದ್ರಮುಖಿ ಸಿಕ್ವೇಲ್ ತೆರೆಯ ಮೇಲೆ ಬರುತ್ತಿದ್ದು, ಪ್ರೇಕ್ಷಕರೂ ಕೂಡ ಚಿತ್ರದ ಬಗ್ಗೆ ಕಾತುರರಾಗಿದ್ದಾರೆ.