ರೈಲಿನಲ್ಲಿ ಸ್ವೀಟ್ಸ್ ಮಾರುವ 80 ವರ್ಷದ ವೃದ್ಧನಿಗೆ ರಾಘವ ಲಾರೆನ್ಸ್ ಸಹಾಯ
ತಮಿಳು ನಟ, ನಿರ್ದೇಶಕ ರಾಘವ ಲಾರೆನ್ಸ್ ತಮ್ಮ ಸಹಾಯಗುಣದಿಂದ ಎಲ್ಲರಿಗೂ ಮಾದರಿಯಾಗಿದ್ದಾರೆ. ಅಸಹಾಯಕರಿಗೆ ಕೈಚಾಚಲು ಅವರು ಸದಾ ಸಿದ್ಧರಿರುತ್ತಾರೆ. 80 ವರ್ಷದ ವೃದ್ಧೆಯೊಬ್ಬರ ದಯನೀಯ ಸ್ಥಿತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪೋಸ್ಟ್‌ಗೆ ಸ್ಪಂದಿಸಿದ್ದರು. ಅವರಿಗೆ ವೃದ್ಧೆಗೆ 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದ್ದಾರೆ.
ತಮಿಳುನಾಡಿನ ಅರಿಯಲೂರು ಜಿಲ್ಲೆಯ ದೇವಮಂಗಲಂ ಗ್ರಾಮದ ರೈಲು ನಿಲ್ದಾಣದ ಬಳಿ 80 ವರ್ಷದ ವೃದ್ಧರೊಬ್ಬರು ಸಿಹಿ ತಿಂಡಿಗಳನ್ನು ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಪತಿ, ಪತ್ನಿ ಜೀವನೋಪಾಯಕ್ಕಾಗಿ ಈ ವ್ಯಾಪಾರ ನಡೆಸುತ್ತಿದ್ದಾರೆ. ಆ ವಯಸ್ಸಿನಲ್ಲಿ ಅವರ ಕಷ್ಟ ನೋಡಿ ಯಾರೋ ಫೋಟೊ ಸಮೇತ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಈ ಪೋಸ್ಟ್ ನೋಡಿದ ರಾಘವ ಲಾರೆನ್ಸ್ ಸಹಾಯ ಮಾಡಲು ಮುಂದಾಗಿದ್ದಾರೆ.

"ನಾನು ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ, ಸಾಧ್ಯವಾಗುತ್ತಿಲ್ಲ. ಯಾರಿಗಾದರೂ ಅವರ ಮಾಹಿತಿ ಇದ್ದರೆ ಕೊಡಿ" ಎಂದು ಲಾರೆನ್ಸ್ 'X' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಒಂದು ವೇಳೆ ನೀವು ಯಾರಾದರೂ ರೈಲಿನಲ್ಲಿ ನೋಡಿದರೆ ಅವರ ಬಳಿಕ ಸ್ವೀಟ್ ತೆಗೆದುಕೊಂಡು ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
ರಾಘವ ಲಾರೆನ್ಸ್ ಚಾರಿಟಬಲ್ ಟ್ರಸ್ಟ್ ಮೂಲಕ ಸಾಕಷ್ಟು ಜನರಿಗೆ ಸಹಾಯ ಮಾಡುತ್ತಾ ಬರುತ್ತಿದ್ದಾರೆ. ಅವರ ಸಹಾಯಗುಣದ ಬಗ್ಗೆ ಜನ ಮೆಚ್ಚುಗೆ ಸೂಚಿಸುತ್ತಾರೆ. ಈ ಹಿಂದೆ ಬಡಕುಟುಂಬವೊಂದು ಕೂಡಿಟ್ಟ ಹಣ ಹಾಳಾಗಿತ್ತು. ಆಗ ಅವರನ್ನು ಮನೆಗೆ ಕರೆದು ಹಣ ನೀಡಿ ಸಹಾಯ ಮಾಡಿದ್ದರು. ಶಿವಗಂಗೆ ಜಿಲ್ಲೆಯ ತಿರುಪ್ಪುವನಂ ಮೂಲದ ಕೂಲಿ ಕಾರ್ಮಿಕರ ಕುಟುಂಬದ ಉಳಿತಾಯದ ಹಣವನ್ನು ಹುಂಡಿಯಲ್ಲಿ ಹಾಕಿ, ಮನೆಯಲ್ಲಿ ಗುಂಡಿ ತೋಡಿ ಹೂತ್ತಿಟ್ಟಿದ್ದರು.
ಒಂದು ದಿನ ಹುಂಡಿ ತೆಗೆದು ನೋಡಿದಾಗ ಗೆದ್ದಲು ತಿಂದು ಹಣ ನೋಟುಗಳು ಹಾಳಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆಗಿತ್ತು. ಇದು ಲಾರೆನ್ಸ್ ಗಮನಕ್ಕೆ ಬಂದಿತ್ತು. ಕೂಡಲೇ ಆ ಕುಟುಂಬದವರನ್ನು ಮನೆಗೆ ಕರೆದು 1 ಲಕ್ಷ ರೂ. ಹಣ ಕೊಟ್ಟಿದ್ದರು. ಲಾರೆನ್ಸ್ ಸಹಾಯಗುಣಕ್ಕೆ ನೆಟ್ಟಿಗರು ಬಹುಪರಾಕ್ ಎಂದಿದ್ದರು.
ಸಾಮಾನ್ಯ ಡ್ಯಾನ್ಸರ್ ಆಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದ ಲಾರೆನ್ಸ್ ಬಳಿಕ ಕೊರಿಯೋಗ್ರಫರ್ ಆಗಿ ಸಕ್ಸಸ್ ಕಂಡರು. ಸೌತ್ ಸೂಪರ್ ಸ್ಟಾರ್‌ಗಳನ್ನೆಲ್ಲಾ ಕುಣಿಸಿದರು. ಬಳಿಕ ನಿರ್ದೇಶಕನಾಗಿ ಒಂದಷ್ಟು ಸಿನಿಮಾ ಕಟ್ಟಿಕೊಟ್ಟರು. ಮುಂದೆ ಹೀರೊ ಆಗುವ ಅವಕಾಶವೂ ಸಿಕ್ಕಿತ್ತು. ಹೀರೊ ಆಗಿ ಕೆಲ ಸಿನಿಮಾಗಳಲ್ಲಿ ಸಕ್ಸಸ್ ಕಂಡರು. ಇತ್ತೀಚಿನ ವರ್ಷಗಳಲ್ಲಿ ಲಾರೆನ್ಸ್ ಕ್ರೇಜ್ ಕಮ್ಮಿ ಆಗಿದೆ. 'ಕಾಂಚನಾ' ಸರಣಿ ಸಿನಿಮಾಗಳನ್ನು ನಿರ್ದೇಶಿಸಿ, ನಟಿಸಿ ಕಮಾಲ್ ಮಾಡಿದ್ದಾರೆ. ಕನ್ನಡದ 'ಅಸುರ' ಚಿತ್ರದ ಹಾಡೊಂದಕ್ಕೆ ಲಾರೆನ್ಸ್ ಹೆಜ್ಜೆ ಹಾಕಿದ್ದರು.


Click it and Unblock the Notifications











