ಶುರುವಾಗುತ್ತಿದೆ ಚಂದ್ರಮುಖಿ-2: ರಜನಿಕಾಂತ್ ಬದಲು ಮತ್ತೊಬ್ಬ ಸ್ಟಾರ್ ನಟ ಎಂಟ್ರಿ?

ತಮಿಳಿನಲ್ಲಿ ಚಂದ್ರಮುಖಿ-2 ಆರಂಭವಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯಲ್ಲಿ ಮೂಡಿಬಂದಿದ್ದ ಚಂದ್ರಮುಖಿ ಸಿನಿಮಾ ಬಹುದೊಡ್ಡ ಸಕ್ಸಸ್ ಕಂಡಿತ್ತು. ಅದಾದ ಮೇಲೆ ಚಂದ್ರಮುಖಿ ಸೀಕ್ವೆಲ್ ಮಾಡಲು ನಿರ್ದೇಶಕ ಪಿ ವಾಸು ಆಸಕ್ತಿ ತೋರಿದರು. ಆದರೆ. ತಲೈವಾ ಆ ಪ್ರಾಜೆಕ್ಟ್‌ನಲ್ಲಿ ನಟಿಸಲು ಮುಂದಾಗಲಿಲ್ಲ.

ರಜನಿಕಾಂತ್ ಇಲ್ಲದೇ ಚಂದ್ರಮುಖಿ-2 ಆರಂಭಿಸಲು ಹಿಂದೇಟು ಹಾಕಿದ ನಿರ್ದೇಶಕ ಪಿ ವಾಸು ಈಗ ಮುಂದುವರಿದ ಭಾಗ ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ. ರಜನಿಕಾಂತ್ ಬದಲು ಆ ಪಾತ್ರಕ್ಕಾಗಿ ತಮಿಳು ಇಂಡಸ್ಟ್ರಿಯ ಮತ್ತೊಬ್ಬ ಸ್ಟಾರ್ ನಟನನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಪೂರ್ವ ತಯಾರಿ ನಡೆದಿದ್ದು, ಸದ್ಯದಲ್ಲೇ ಶೂಟಿಂಗ್ ಪ್ರಾರಂಭಿಸಲಿದ್ದಾರಂತೆ. ಮುಂದೆ ಓದಿ...

ಮೇ ತಿಂಗಳಿಂದ ಚಂದ್ರಮುಖಿ 2 ಆರಂಭ

ಮೇ ತಿಂಗಳಿಂದ ಚಂದ್ರಮುಖಿ 2 ಆರಂಭ

2005ರಲ್ಲಿ ಚಂದ್ರಮುಖಿ ಸಿನಿಮಾ ಬಂದಿತ್ತು. ಅದಾದ ಮೇಲೆ ಚಂದ್ರಮುಖಿ 2 ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಇದೀಗ, 15 ವರ್ಷದ ಬಳಿಕ ಸೀಕ್ವೆಲ್ ಮಾಡಲು ನಿರ್ದೇಶಕ ಪಿ ವಾಸು ತಯಾರಾಗಿದ್ದು, ಮೇ ತಿಂಗಳಲ್ಲಿ ಚಿತ್ರೀಕರಣ ಶುರು ಮಾಡಲಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಚೆನ್ನೈನಲ್ಲಿ ಮೊದಲ ಹಂತದ ಶೂಟಿಂಗ್ ನಡೆಯಲಿದೆ ಎಂಬ ಮಾಹಿತಿ ಇದೆ.

ರಜನಿಕಾಂತ್ ಬದಲು ಲಾರೆನ್ಸ್

ರಜನಿಕಾಂತ್ ಬದಲು ಲಾರೆನ್ಸ್

ಈ ಹಿಂದೆ ತಿಳಿಸಿದಂತೆ ಸೂಪರ್ ಸ್ಟಾರ್ ರಜನಿಕಾಂತ್ ಈ ಪ್ರಾಜೆಕ್ಟ್‌ನಿಂದ ಹಿಂದೆ ಸರಿದ್ದರು. ರಜನಿ ಜಾಗಕ್ಕೆ ನಟ-ನಿರ್ದೇಶಕ ರಾಘವ ಲಾರೆನ್ಸ್ ಎಂಟ್ರಿಯಾಗಿದ್ದಾರೆ. ಕಾಂಚನಾ ಸರಣಿ ಮೂಲಕ ತಮಿಳು ಪ್ರೇಕ್ಷಕರನ್ನು ರಂಜಿಸಿರುವ ಲಾರೆನ್ಸ್ ಈಗ ಚಂದ್ರಮುಖಿ 2ರಲ್ಲಿ ನಾಯಕರಾಗಿ ನಟಿಸಲಿದ್ದಾರೆ. ರಜನಿ ಪಾತ್ರವನ್ನು ಮುಂದುವರಿಸಲಿದ್ದಾರೆ. ಚಂದ್ರಮುಖಿ 2 ಚಿತ್ರಕ್ಕಾಗಿ ಮುಂಗಡ ಹಣ ಪಡೆದುಕೊಂಡಿದ್ದೇನೆ ಎಂದು ಲಾರೆನ್ಸ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಜ್ಯೋತಿಕಾ ಮತ್ತು ನಯನತಾರಾ ಇರ್ತಾರಾ?

ಜ್ಯೋತಿಕಾ ಮತ್ತು ನಯನತಾರಾ ಇರ್ತಾರಾ?

2005ರಲ್ಲಿ ತೆರೆಕಂಡಿದ್ದ ಚಂದ್ರಮುಖಿ ಚಿತ್ರದಲ್ಲಿ ಜ್ಯೋತಿಕಾ ಪ್ರಮುಖ ಪಾತ್ರ ನಿರ್ವಹಿಸಿದ್ದರು. ನಯನತಾರಾ ಹಾಗೂ ಶಿವಾಜಿ ಪ್ರಭು ಸಹ ಕಾಣಿಸಿಕೊಂಡಿದ್ದರು. ಮುಂದುವರಿದ ಭಾಗದಲ್ಲಿ ಈ ಕಲಾವಿದರು ಇರಲಿದ್ದಾರಾ ಅಥವಾ ಹೊಸ ಕಲಾವಿದರು ಇರಬಹುದಾ ಎಂಬ ಚರ್ಚೆ ಶುರುವಾಗಿದೆ.

Recommended Video

ಆಟೋದಲ್ಲಿ ಓಡಾಡುತ್ತಿರುವ ನಟ ಅಜಿತ್ ಸರಳತೆಗೆ ಅಭಿಮಾನಿಗಳು ಫಿದಾ | Filmibeat Kannada
ಕನ್ನಡ-ತೆಲುಗಿನಲ್ಲಿ ಸೂಪರ್ ಹಿಟ್ ಸಿನಿಮಾ

ಕನ್ನಡ-ತೆಲುಗಿನಲ್ಲಿ ಸೂಪರ್ ಹಿಟ್ ಸಿನಿಮಾ

ಕನ್ನಡದಲ್ಲಿ 'ಆಪ್ತರಕ್ಷಕ' ಹಾಗೂ ತೆಲುಗಿನಲ್ಲಿ 'ನಾಗವಲ್ಲಿ' ಹೆಸರಿನಲ್ಲಿ ಮುಂದುವರಿದ ಭಾಗ ಮೂಡಿ ಬಂದಿತ್ತು. ಈ ಎರಡು ಚಿತ್ರಗಳನ್ನು ಪಿ ವಾಸು ನಿರ್ದೇಶಿಸಿದ್ದರು. ಈಗ ತಮಿಳಿನಲ್ಲಿ ಚಂದ್ರಮುಖಿ 2 ತೆರೆಗೆ ತರಲು ಯೋಜನೆ ನಡೆದಿದೆ. ಕನ್ನಡದಲ್ಲಿ ವಿಷ್ಣುವರ್ಧನ್ ನಟಿಸಿದ್ದರೆ, ತೆಲುಗಿನಲ್ಲಿ ವೆಂಕಟೇಶ್ ಅಭಿನಯಿಸಿದ್ದರು.

More from Filmibeat

English summary
Tamil Actor Raghava Lawrence to start Chandramukhi 2 from May 2nd week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X