ಮಾನಹಾನಿ ಪ್ರಕರಣ: ಲೋಕಸಭೆಯಿಂದ ರಾಹುಲ್‌ ಗಾಂಧಿ ಅನರ್ಹ, ಖುಷ್ಬು ಹಳೇ ಟ್ವೀಟ್ ವೈರಲ್

2019ರ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರತ್ ನ್ಯಾಯಾಲಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ಪ್ರಕಟಿಸಿದೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಇದೆಲ್ಲರ ನಡುವೆ 'ಮೋದಿ' ಪದವನ್ನು 'ಭ್ರಷ್ಟಾಚಾರ' ಎಂದು ಮರು ವ್ಯಾಖ್ಯಾನಿಸಬೇಕು ಎಂದು ಖುಷ್ಬು ಮಾಡಿದ್ದ ಹಳೇ ಟ್ವೀಟ್ ಈಗ ವೈರಲ್ ಆಗುತ್ತಿದೆ.

2018ರಲ್ಲಿ ನಟಿ ಖುಷ್ಬು ಸುಂದರ್ ಕಾಂಗ್ರೆಸ್ ಪಕ್ಷದಲ್ಲಿ ಇದ್ದರು. ಆ ಸಮಯದಲ್ಲಿ ಪ್ರಧಾನಿ ಮೋದಿ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. 'ಮೋದಿ' ಎನ್ನುವ ಪದ 'ಭ್ರಷ್ಟಾಚಾರ'ವನ್ನು ಸೂಚಿಸುತ್ತದೆ. ಆ ಪದವನ್ನು ಮರು ವ್ಯಾಖ್ಯಾನಿಸಬೇಕು ಎಂದು ಟ್ವೀಟ್ ಮಾಡಿದ್ದರು. ಪ್ರಧಾನಿ ಮೋದಿ ಕುರಿತು ರಾಹುಲ್ ಗಾಂಧಿ ನೀಡಿದ ಹೇಳಿಕೆ ವಿರುದ್ಧ ಗುಜರಾತ್ ಮಾಜಿ ಸಚಿವರಾದ ಪೂರ್ಣೇಶ್ ಮೋದಿ ಕ್ರಿಮಿನಲ್ ಮಾನಹಾನಿ ದೂರು ದಾಖಲಿಸಿದ್ದರು. ಹಾಗಾದೇ ಖುಷ್ಬು ಅಂದು ಮಾಡಿದ್ದ ಟ್ವೀಟ್ ಬಗ್ಗೆ ಪೂರ್ಣೇಶ್ ಮೋದಿ ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ.

Rahul Disqualified: Change meaning of Modi to: BJP leader Kushboo Sundars old tweet Goes viral

ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡಿ ಈ ರೀತಿ ರಾಹುಲ್ ಗಾಂಧಿ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದವರು, ಖುಷ್ಬು ಅಂದು ನೀಡಿದ್ದ ಹೇಳಿಕೆ(ಟ್ವೀಟ್) ಬಗ್ಗೆ ಏನು ಹೇಳುತ್ತಾರೆ ಎಂದು ಕೇಳುತ್ತಿದ್ದಾರೆ. ಆಗ ಕಾಂಗ್ರೆಸ್‌ ಪಕ್ಷದಲ್ಲಿ ಇದ್ದವರು ಈಗ ನಿಮ್ಮ ಪಕ್ಷದಲ್ಲಿ ಇದ್ದಾರಲ್ಲ, ಅವರ ಮೇಲೆ ಯಾವುದೇ ದೂರು ದಾಖಲಿಸುವುದಿಲ್ಲವೇ? ರಾಹುಲ್ ಗಾಂಧಿ ಹೇಳಿಕೆಗೂ ಖುಷ್ಬು ಹೇಳಿಕೆಗೂ ವ್ಯತ್ಯಾಸ ಏನು ಇಲ್ಲ ಅಲ್ಲವೇ. ರಾಹುಲ್ ಗಾಂಧಿ ಹೇಳಿದ್ದನ್ನೇ ಖುಷ್ಬು ಕೂಡ ಹೇಳಿದ್ದರು. ಅವರ ಮೇಲೆ ಕ್ರಮ ಕೈಗೊಳ್ಳಿ ನೋಡೋಣ ಎನ್ನುತ್ತಿದ್ದಾರೆ.

2018ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದ ಖುಷ್ಬು ನಂತರ ಬಿಜೆಪಿ ಸೇರಿದ್ದರು. ಇದೀಗ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಖುಷ್ಬು ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಅವರನ್ನು ಅಣಕಿಸುವ ಭರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ "ಎಲ್ಲಾ ಕಳ್ಳರ ಸರ್‌ ನೇಮ್ ಮೋದಿ ಎಂದೇ ಇರುವುದೇಕೆ" ಎಂದು ಪ್ರಶ್ನಿಸಿದ್ದರು. ಈ ಹೇಳಿಕೆ ಭಾರೀ ಸದ್ದು ಮಾಡಿತ್ತು. ಇದೇ ಹೇಳಿಕೆ ಈಗ ರಾಹುಲ್ ಗಾಂಧಿ ಸಂಸದ ಸ್ಥಾನಕ್ಕೂ ಕುತ್ತು ತಂದಿದೆ. ಇನ್ನು ಬಿಜೆಪಿ ನಾಯಕಿ ತಮ್ಮ ಹಳೇ ಟ್ವೀಟ್ ಡಿಲೀಟ್ ಮಾಡಿಲ್ಲ. ಹಾಗಾಗಿ ಕಾಂಗ್ರೆಸ್ ನಾಯಕರು ಆ ಟ್ವೀಟ್ ಶೇರ್ ಮಾಡಿ ಇದಕ್ಕೆ ಏನು ಹೇಳುತ್ತೀರಾ ಎಂದು ಕೇಳುತ್ತಿದ್ದಾರೆ.

ರಾಹುಲ್ ಗಾಂಧಿ ಹೇಳಿಕೆಗೂ ಅಂದಿನ ಕಾಂಗ್ರೆಸ್ ನಾಯಕಿ ಖುಷ್ಬು ಟ್ವೀಟ್‌ಗೂ ಅಂತಹ ವ್ಯತ್ಯಾಸ ಏನು ಇಲ್ಲ. ಇಂದು ರಾಹುಲ್ ಗಾಂಧಿ ಹೇಳಿಕೆ ಸಂಬಂಧ 2 ವರ್ಷ ಜೈಲು ಶಿಕ್ಷೆ, ಸಂಸದ ಸ್ಥಾನದಿಂದ ಅನರ್ಹದಂತಹ ದಂಡ ತೆರಬೇಕು ಎಂದರೆ ಖುಷ್ಬು ಟ್ವೀಟ್‌ಗೂ ಇದೇ ರೀತಿಯ ಶಿಕ್ಷೆ ಆಗಬೇಕಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ. ಸದ್ಯ ಖುಷ್ಬು 'ಮೋದಿ ಭ್ರಷ್ಟಾಚಾರ್' ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Rahul Disqualified: Change meaning of Modi to: BJP leader Kushboo Sundars old tweet Goes viral

ಮತ್ತೊಂದು ಕಡೆ ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹಗೊಂಡ ವಿಚಾರಕ್ಕೆ ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕಕ್ರಿಯಿಸುತ್ತಿದ್ದಾರೆ . ಕೆಲವರು ಇದನ್ನು ಸ್ವಾಗತಿಸಿದ್ದರೆ ವಿರೋಧ ಪಕ್ಷದ ನಾಯಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಸೂರತ್ ನ್ಯಾಯಾಲಯ ನೀಡಿರುವ ತೀರ್ಪನ್ನು ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ. ಆದರೆ ಬಿಜೆಪಿ ನಾಯಕರು ಕನಿಷ್ಠಸ ದೇಶದ ನ್ಯಾಯಾಂಗ ವ್ಯವಸ್ಥೆಗಾದರೂ ಗೌರವ ಕೊಡಿ ಎನ್ನುತ್ತಿದ್ದಾರೆ.

More from Filmibeat

English summary
Rahul Disqualified: 'Change meaning of Modi to': BJP leader Kushboo Sundar's old tweet Goes viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X