For Quick Alerts
  ALLOW NOTIFICATIONS  
  For Daily Alerts

  ಮಾಜಿ ಬಿಗ್ ಬಾಸ್ ಸ್ಪರ್ಧಿ ಫೇಶಿಯಲ್ ಅವಾಂತರ; ಹೇಗಿದ್ದರೂ ಈಗ ಹೇಗಾಗಿದ್ದಾರೆ ನೋಡಿ

  |

  ಸೌಂದರ್ಯ ಪ್ರಿಯರು ಯಾರಾಗಿರಲ್ಲ ಹೇಳಿ. ಎಲ್ಲರೂ ತಾವು ಚೆನ್ನಾಗಿ ಕಾಣಿಸಬೇಕು, ನಮ್ಮ ಮುಖ ಸುಂದರವಾಗಿಬೇಕು ಎಂದೇ ಬಯಸುತ್ತಾರೆ. ಅದರಲ್ಲೂ ನಟಿಮಣಿಯರು ಈ ವಿಚಾರದಲ್ಲಿ ತುಸು ಹೆಚ್ಚು ತಲೆಕೆಡಿಸಿಕೊಂಡಿರುತ್ತಾರೆ. ಸುಂದರವಾಗಿ ಕಾಣಿಸಬೇಕೆಂದು ಏನೆಲ್ಲ ಕಸರತ್ತುಗಳನ್ನು ಮಾಡುತ್ತಿರುತ್ತಾರೆ.

  ಕೆಲವೊಮ್ಮೆ ಇದು ಎಡವಟ್ಟಾಗಿ ಇದ್ದ ಸೌಂದರ್ಯವನ್ನು ಕೆಡಿಸಿಕೊಂಡ ಉದಾಹರಣೆಯೂ ಸಾಕಷ್ಟಿದೆ. ಇತ್ತೀಚಿಗೆ ತಮಿಳು ನಟಿ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ರೈಜಾ ವಿಲ್ಸನ್ ಫೇಶಿಯಲ್ ಮಾಡಿಸಿಕೊಂಡು ಮುಖದ ಅಂದವನ್ನೇ ಕೆಡಿಸಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಸೌಂದರ್ಯ ತಜ್ಞರ ವಿರುದ್ಧ ಕಿಡಿಕಾರಿದ್ದಾರೆ. ಮುಂದೆ ಓದಿ...

  ಸಿನಿಮಾ ಕಾರ್ಯಕ್ರಮದಲ್ಲಿ ಬೇಸರಗೊಂಡು ವೇದಿಕೆ ಇಳಿದಿದ್ದಕ್ಕೆ ರೆಹಮಾನ್ ಕೊಟ್ಟರು ಕಾರಣಸಿನಿಮಾ ಕಾರ್ಯಕ್ರಮದಲ್ಲಿ ಬೇಸರಗೊಂಡು ವೇದಿಕೆ ಇಳಿದಿದ್ದಕ್ಕೆ ರೆಹಮಾನ್ ಕೊಟ್ಟರು ಕಾರಣ

  ತಜ್ಞರ ವಿರುದ್ಧ ರೈಜಾ ಅಸಮಾಧಾನ

  ತಜ್ಞರ ವಿರುದ್ಧ ರೈಜಾ ಅಸಮಾಧಾನ

  ಚರ್ಮ ರೋಗ ತಜ್ಞರ ಯಡವಟ್ಟಿನಿಂದ ರೈಜಾ ಅವರ ಮುಖದ ಅಂದವೇ ಹೊರಟು ಹೋಗಿದೆ. ಮುಖ ಊದಿಕೊಂಡಿದ್ದು, ಕಣ್ಣಿನ ಕೆಳಗೆ ಕಪ್ಪಾಗಿ ಮುಖ ಅಂದವೇ ಹಾಳಾಗಿದೆ. ಚರ್ಮ ರೋಗ ತಜ್ಞರ ಬಳಿಹೋಗಿದ್ದ ರೈಜಾ ಅವರು ಫೇಶಿಯಲ್ ಮಾಡಿಸಿದ್ದಾರೆ, ಫೇಶಿಯಲ್ ಮಾತ್ರವಲ್ಲ ಸೌಂದರ್ಯ ಹೆಚ್ಚಾಗುತ್ತೆ ಎಂದು ಮತ್ತೇನೋ ಮಾಡಿದ್ದಾರೆ. ಬೇಡ ಎಂದರೂ ಒತ್ತಾಯ ಮಾಡಿ ಚಿಕಿತ್ಸೆ ನೀಡಿದ್ದಾರೆ.

  ಫೋನ್ ಮಾಡಿದರೂ ಸಿಗುತ್ತಿಲ್ಲ ವೈದ್ಯರು

  ಫೋನ್ ಮಾಡಿದರೂ ಸಿಗುತ್ತಿಲ್ಲ ವೈದ್ಯರು

  ಮನೆಗೆ ಬಂದ ಬಳಿಕ ರೈಜಾ ಮುಖ ಊದಿಕೊಳ್ಳಲು ಪ್ರಾರಂಭಿಸಿದೆ. ಬೆಳಗ್ಗೆದ್ದು ನೋಡಿದಾಗ ಅವರ ಕಣ್ಣಿನ ಕೆಳ ಭಾಗ ಸಂಪೂರ್ಣವಾಗಿ ಊದಿಕೊಂಡು, ಕಪ್ಪಾಗಿದೆ. ಗಾಬರಿಯಾದ ರೈಜಾ ಚಿಕಿತ್ಸೆ ನೀಡಿದ ಸೌಂದರ್ಯ ತಜ್ಞರಿಗೆ ಕರೆ ಮಾಡಿದ್ದಾರೆ. ಆದರೆ ಅವರು ಕರೆ ಸ್ವೀಕರಿಸಿಲ್ಲ, ಬಳಿಕ ಆಸ್ಪತ್ರೆಗೆ ಫೋನ್ ಮಾಡಿದ್ರೆ ಊರಲ್ಲಿ ಇಲ್ಲ ಎಂದು ಹೇಳುತ್ತಿದ್ದಾರೆ.

  ದಳಪತಿ ವಿಜಯ್ ಜೊತೆ ನಟಿಸಲು ಪೂಜಾ ಹೆಗ್ಡೆ ಇಷ್ಟೊಂದು ಸಂಭಾವನೆ ಪಡೆಯುತ್ತಿದ್ದಾರಾ?ದಳಪತಿ ವಿಜಯ್ ಜೊತೆ ನಟಿಸಲು ಪೂಜಾ ಹೆಗ್ಡೆ ಇಷ್ಟೊಂದು ಸಂಭಾವನೆ ಪಡೆಯುತ್ತಿದ್ದಾರಾ?

  ಅಳಲು ತೋಡಿಕೊಳ್ಳುತ್ತಿದ್ದಾರೆ ಇನ್ನು ಅನೇಕರು

  ಅಳಲು ತೋಡಿಕೊಳ್ಳುತ್ತಿದ್ದಾರೆ ಇನ್ನು ಅನೇಕರು

  ಈ ಬಗ್ಗೆ ರೈಜಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿ, ಚಿಕಿತ್ಸೆ ನೀಡಿದ ಕ್ಲೀನಿಕ್ ವಿಳಾಸವನ್ನು ಹಂಚಿಕೊಂಡಿದ್ದಾರೆ. ಅನೇಕರಿಗೆ ಹೀಗೆ ಆಗಿದ್ದು, ಬಹುತೇಕರು ನಟಿ ರೈಜಾ ಅವರಿಗೆ ಸಂದೇಶ ಕಳುಹಿಸಿದ್ದಾರೆ. ಎಲ್ಲಾ ಮೆಸೇಜ್‌ಗಳನ್ನು ರೈಜಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಪವರ್ ಸ್ಟಾರ್ ಗೆ ಕರೆ ಮಾಡಿದ ಎಂಎಸ್ ಧೋನಿ ಹೇಳಿದ್ದೇನು? | Filmibeat Kannada
  2017ರಲ್ಲಿ ಬಣ್ಣದ ಲೋಕಕ್ಕೆ ಬಂದ ರೈಜಾ

  2017ರಲ್ಲಿ ಬಣ್ಣದ ಲೋಕಕ್ಕೆ ಬಂದ ರೈಜಾ

  ರೈಜಾ 2017ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಪುಟ್ಟ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರೈಜಾ ಬಳಿಕ ತಮಿಳು ಬಿಗ್‌ಬಾಸ್‌ನಿಂದ ಖ್ಯಾತಿಗಳಿಸಿದ್ದಾರೆ. ಅತ್ಯಂತ ಜನಪ್ರಿಯ ಸ್ಪರ್ಧಿಗಳಲ್ಲಿ ರೈಜಾ ಒಬ್ಬರಾಗಿದ್ದರು. 2018ರಲ್ಲಿ ರಿಲೀಸ್ ಆದ ಪ್ಯಾರ್ ಪ್ರೇಮ ಕಾದಲ್ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ರೈಜಾ ಬಳಿ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  English summary
  Tamil Actress Raiza Wilson shares her Photo of damaged face after facial treatment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X