For Quick Alerts
  ALLOW NOTIFICATIONS  
  For Daily Alerts

  ಪಟಾಕಿ ಹೊಡೆದು ದೀಪಾವಳಿ ಹಬ್ಬ ಸಂಭ್ರಮಿಸಿದ ಸೂಪರ್ ಸ್ಟಾರ್ ರಜನಿಕಾಂತ್

  |

  ದೇಶದಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಸಿನಿಮಾ ಗಣ್ಯರ ಮನೆಯಲ್ಲೂ ದೀಪಾವಳಿ ಸಂಭ್ರಮ ಮುಗಿಲು ಮುಟ್ಟಿದೆ. ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸುವ ಜೊತೆಗೆ ಹಬ್ಬ ಆಚರಣೆಯ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

  ಸೂಪರ್ ಸ್ಟಾರ್ ರಜನಿಕಾಂತ್ ಮನೆಯಲ್ಲೂ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿದೆ. ಸೂಪರ್ ಸ್ಟಾರ್ ಕುಟುಂಬದ ಜೊತೆ ಹಬ್ಬ ಆಚರಣೆ ಮಾಡುತ್ತಿರುವ ಫೋಟೊವನ್ನು ಮಗಳು ಸೌಂದರ್ಯ ರಜನಿಕಾಂತ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಬಿಳಿ ಪಂಚೆ ಮತ್ತು ಬಿಳಿ ಶರ್ಟ್ ಧರಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುತ್ತಿರುವ ಸೂಪರ್ ಸ್ಟಾರ್ ಪತ್ನಿ, ಮಗಳು ಮತ್ತು ಮೊಮ್ಮಗಳ ಜೊತೆ ಹಬ್ಬ ಆಚರಣೆ ಮಾಡಿದ್ದಾರೆ.

  ಸೂಪರ್ ಸ್ಟಾರ್ ರಜನಿಕಾಂತ್ ಬಯೋಪಿಕ್ ನಲ್ಲಿ ತಮಿಳು ಸ್ಟಾರ್ ನಟಸೂಪರ್ ಸ್ಟಾರ್ ರಜನಿಕಾಂತ್ ಬಯೋಪಿಕ್ ನಲ್ಲಿ ತಮಿಳು ಸ್ಟಾರ್ ನಟ

  ದೀಪಾವಳಿ ಅಂದ್ಮೇಲೆ ಪಟಾಕಿ ಇಲ್ಲದೆ ಇದ್ದರೆ ಆಗುತ್ತಾ, ಸೂಪರ್ ಸ್ಟಾರ್ ಕುಟುಂಬದವರ ಜೊತೆ ಪಟಾಕಿ ಹಚ್ಚಿ ಸಂಭ್ರಮಿಸಿದ್ದಾರೆ. ಇದೇ ಸಮಯದಲ್ಲಿ ಸೂಪರ್ ಸ್ಟಾರ್ ನನ್ನು ನೋಡಲು ಅಭಿಮಾನಿಗಳು ಮನೆ ಮುಂದೆ ಬಂದು ಜಮಾಯಿಸಿದ್ದರು. ರಜನಿಕಾಂತ್ ಮನೆಯಿಂದ ಹೊರಬಂದು ಅಭಿಮಾನಿಗಳತ್ತ ಕೈ ಬೀಸಿ ಹಬ್ಬದ ಶುಭಾಶಯ ತಿಳಿದರು.

  ಪ್ರಿಯಾಂಕಾ ಉಪೇಂದ್ರ ಕಯ್ಯಲ್ಲಿ ಲಾಂಗ್ | Filmibeat Kannada

  ಸೂಪರ್ ಸ್ಟಾರ್ ಸದ್ಯ ಅಣ್ಣಾತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕೊರೊನಾ ಲಾಕ್ ಡೌನ್ ಬಳಿಕ ಸಿನಿಮಾದ ಚಿತ್ರೀಕರಣ ಮತ್ತೆ ಪ್ರಾರಂಭ ಮಾಡಿಲ್ಲ. ಅಣ್ಣಾತೆ ಸಿನಿಮಾದ ಚಿತ್ರೀಕರಣ ಮುಂದಿನ ವರ್ಷ ಪ್ರಾರಂಭವಾಗುವ ಸಾಧ್ಯತೆ ಇದೆ. ರಜನಿಕಾಂತ್ ಕೊನೆಯದಾಗಿ ದರ್ಬಾರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

  English summary
  Super star Rajanikanth celebarting deepavali with his family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X