ವಿಶ್ವದ ಅತಿ ವೇಗದ ಎಸ್‌ಯುವಿ ಕಾರು ಖರೀದಿಸಿದ ರಜನೀಕಾಂತ್

ಸೂಪರ್ ಸ್ಟಾರ್, ನಟ ರಜನೀಕಾಂತ್ ಅವರಿಗೆ ಕಾರುಗಳ ಮೇಲೆ ವಿಶೇಷ ಆಸಕ್ತಿ ಮತ್ತು ಪ್ರೀತಿ. ಹಲವು ಐಶಾರಾಮಿ ಕಾರುಗಳು ಅವರ ಸಂಗ್ರಹದಲ್ಲಿವೆ.

Recommended Video

Jogi Prem : ಅಮ್ಮನನ್ನು ನೆನೆದು ಭಾವುಕರಾದ ಪ್ರೇಮ್ | Filmibeat Kannada

ಸಿನಿಮಾ ಜೀವನದಲ್ಲಿ ಯಶಸ್ಸು ಗಳಿಸಲು ಆರಂಭಿಸಿದಾಗಿನಿಂದಲೂ ರಜನೀಕಾಂತ್ ಗೆ ಕಾರುಗಳ ಮೇಲೆ ವಿಶೇಷ ಆಸ್ಥೆ. 70-80 ರ ದಶಕದಲ್ಲೇ ವಿದೇಶಿ ಕಾರುಗಳನ್ನು ಕೊಂಡು ಓಡಿಸಿ ಅನುಭವಿಸಿದ್ದರು ನಟ ರಜನೀಕಾಂತ್.

ಇದೀಗ ರಜನೀಕಾಂತ್ ಅವರು ಭಾರಿ ಐಶಾರಾಮಿ ಕಾರೊಂದನ್ನು ಚಲಾಯಿಸುತ್ತಿರುವ ವಿಡಿಯೋ ಭಾರಿ ವೈರಲ್ ಆಗಿದ್ದು, ರಜನೀಕಾಂತ್ ಮತ್ತೊಂದು ಕಾರನ್ನು ಕೊಂಡುಕೊಂಡಿದ್ದಾರೆ ಎಂಬ ಸುದ್ದಿ ಇದೆ. ಕಾರಿನೊಂದಿಗೆ ರಜನೀಕಾಂತ್ ಮತ್ತು ಕುಟುಂಬ ಫೋಸು ನೀಡಿರುವ ಚಿತ್ರವೂ ವೈರಲ್ ಆಗಿದೆ.

ವಿಶ್ವದ ವೇಗದ ಎಸ್‌ಯುವಿ ಕಾರು

ವಿಶ್ವದ ವೇಗದ ಎಸ್‌ಯುವಿ ಕಾರು

ಲಾಂಬೊರ್ಗಿನಿ ಯುರಸ್ ಕಾರು ಎಸ್‌ಯುವಿ ಮಾದರಿಯ ಕಾರಾಗಿದ್ದು, ನವದೆಹಲಿಯಲ್ಲಿ ಈ ಕಾರಿನ ಎಕ್ಸ್‌ ಶೋರೂಂ ಬೆಲೆಯೇ 3 ಕೋಟಿಗೂ ಹೆಚ್ಚಿದೆ. ಈ ಕಾರಿನ ಆನ್‌ರೋಡ್ ಬೆಲೆ ನಾಲ್ಕು ಕೋಟಿ ಮುಟ್ಟುತ್ತದೆ. ವಿಶ್ವದ ಅತ್ಯಂತ ವೇಗದ ಎಸ್‌ಯುವಿ ಕಾರು ಇದು ಎನ್ನಲಾಗುತ್ತದೆ.

ರಜನೀಕಾಂತ್ ಮಗಳದ್ದಾ ಅಥವಾ ರಜನೀಕಾಂತ್ ಅವರದ್ದಾ?

ರಜನೀಕಾಂತ್ ಮಗಳದ್ದಾ ಅಥವಾ ರಜನೀಕಾಂತ್ ಅವರದ್ದಾ?

ಮತ್ತೊಂದು ಚಿತ್ರದಲ್ಲಿ ರಜನೀಕಾಂತ್ ಮಗಳು ಐಶ್ವರ್ಯಾ ಮತ್ತು ಅಳಿಯ ರಜನೀಕಾಂತ್ ಜೊತೆ ಫೋಟೊಕ್ಕೆ ಫೋಸು ನೀಡಿದ್ದಾರೆ. ಫೋಟೊದಲ್ಲಿ ಇದೇ ಲಾಂಬೋರ್ಗಿನಿ ಯುರಸ್ ಕಾರಿದೆ. ಈ ಕಾರು ರಜನೀಕಾಂತ್ ಅವರದ್ದಾ ಅಥವಾ ರಜನಿ ಮಗಳು ಸೌಂದರ್ಯ ಅವರದ್ದಾ ಎಂಬ ಅನುಮಾನವಿದೆ.

ಸೆಟ್‌ನಿಂದ ಹೊರಹಾಕಿದ್ದರಂತೆ ನಿರ್ಮಾಪಕರು

ಸೆಟ್‌ನಿಂದ ಹೊರಹಾಕಿದ್ದರಂತೆ ನಿರ್ಮಾಪಕರು

ರಜನೀಕಾಂತ್ ಸಿನಿಮಾ ಜೀವನದ ಆರಂಭದಲ್ಲಿ ನಿರ್ಮಾಪಕರೊಬ್ಬರು ಸೆಟ್‌ನಿಂದ ಹೊರಗೆ ದಬ್ಬಿದ್ದರಂತೆ ಮನೆಗೆ ಹೋಗಲು ಕಾರು ಸಹ ಕೊಡದೇ ನಡೆದೇ ಹೋಗಿದ್ದರಂತೆ. ನಂತರ ಕೆಲವೇ ತಿಂಗಳಲ್ಲಿ ಅವರು ವಿದೇಶಿ ಕಾರು ಖರೀದಿಸಿ ಅದೇ ರಸ್ತೆಯಲ್ಲಿ ಹೋಗಿದ್ದರಂತೆ. ಇದನ್ನು ಅವರು ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಹೇಳಿಕೊಂಡಿದ್ದರು.

More from Filmibeat

English summary
Super Star Rajinikant purchased world fastest SUV car. He seen driving Lamborgini Uras car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X