ಸೂಪರ್ ಸ್ಟಾರ್ ರಜನಿಕಾಂತ್ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್
ಸೂಪರ್ ಸ್ಟಾರ್ ರಜನಿಕಾಂತ್ ಹೊಸ ಸಿನಿಮಾ ಈಗಾಗಲೇ ದೊಡ್ಡ ಸುದ್ದಿ ಮಾಡಿದೆ. ಆದರೆ, ಈವರೆಗೆ ಸಿನಿಮಾ ಟೈಟಲ್ ನಿಗದಿ ಆಗಿರಲಿಲ್ಲ. ಈಗ ರಜನಿ ಸಿನಿಮಾಗೆ ಟೈಟಲ್ ಸಿಕ್ಕಿದೆ.
'ಅನ್ನಾತೇ' ರಜನಿಕಾಂತ್ ಹೊಸ ಸಿನಿಮಾದ ಟೈಟಲ್ ಆಗಿದೆ. 'ಅನ್ನಾತೇ' ಎಂದರೆ ಅಣ್ಣ ಎಂಬ ಅರ್ಥ ಬರುತ್ತದೆ. ಅಭಿಮಾನಿಗಳಿಗೆ ರಜನಿಕಾಂತ್ ಅಣ್ಣನಂತೆ ಇದ್ದು, ಅದೇ ಹೆಸರನ್ನು ಸಿನಿಮಾಗೆ ಇಡಲಾಗಿದೆ. ಇದು ರಜನಿಕಾಂತ್ ನಟನೆಯ 168ನೇ ಸಿನಿಮಾವಾಗಿದೆ.
ಕಾಲಿವುಡ್ ನಲ್ಲಿ ಬ್ಲಾಕ್ ಬಾಸ್ಟರ್ ಹಿಟ್ ಸಿನಿಮಾಗಳನ್ನು ನೀಡಿರುವ ಶಿವ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. 'ವೀರಂ', 'ವಿವೇಗಂ', 'ವೇದಾಲಂ', 'ವಿಶ್ವಾಸಂ' ಸಿನಿಮಾಗಳ ಬಳಿಕ ಈ ಚಿತ್ರಕ್ಕೆ ಶಿವ ಕೈ ಹಾಕಿದ್ದಾರೆ.

ಇದೊಂದು ಬಹುತಾರಗಣದ ಸಿನಿಮಾವಾಗಿದೆ. ಮೀನಾ, ಖುಷ್ಬು, ಕೀರ್ತಿ ಸುರೇಶ್, ಪ್ರಕಾಶ್ ರಾಜ್ ಸೇರಿದಂತೆ ಅನೇಕರು ಸಿನಿಮಾದಲ್ಲಿ ನಟಿಸಿದ್ದಾರೆ. ಕೀರ್ತಿ ಸುರೇಶ್ ಮೊದಲ ಬಾರಿಗೆ ರಜನಿಕಾಂತ್ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಸನ್ ಪಿಚ್ಚರ್ ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. 'ಪೇಟಾ' ನಂತರ ಮತ್ತೆ ಈ ನಿರ್ಮಾಣ ಸಂಸ್ಥೆ ತಲೈವಾ ಜೊತೆ ಸಿನಿಮಾ ಮಾಡುತ್ತಿದೆ. ಡಿ ಇಮಾನ್ ಸಂಗೀತ ನೀಡಿದ್ದಾರೆ.


Click it and Unblock the Notifications











