For Quick Alerts
  ALLOW NOTIFICATIONS  
  For Daily Alerts

  ರಜನಿ 169: ಸೂಪರ್ ಸ್ಟಾರ್ ಮುಂದಿನ ಸಿನಿಮಾದ ಅಪ್‌ಡೇಟ್

  |

  ಸೂಪರ್ ಸ್ಟಾರ್ ರಜನಿಕಾಂತ್ ಮುಂದಿನ ಸಿನಿಮಾ ಯಾವುದು ಎಂಬ ಚರ್ಚೆ ಶುರುವಾಗಿದೆ. ಸಿರುತೈ ಶಿವ ನಿರ್ದೇಶನದಲ್ಲಿ ಅಣ್ಣಾತ್ತೆ ಸಿನಿಮಾ ಮಾಡ್ತಿರುವ ರಜನಿಕಾಂತ್ ಈಗಾಗಲೇ ಚಿತ್ರೀಕರಣ ಮುಗಿಸಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸವೂ ವೇಗದಿಂದ ನಡೆಯುತ್ತಿದ್ದು, ದೀಪಾವಳಿಗೆ ಸಿನಿಮಾ ತೆರೆಮೇಲೆ ಬರಲಿದೆ.

  ಈ ಚಿತ್ರ ಬಿಡುಗಡೆಯಾಗುತ್ತಿದ್ದಂತೆ ರಜನಿಕಾಂತ್ ಮುಂದಿನ ಪ್ರಾಜೆಕ್ಟ್‌ ಆರಂಭಿಸಲಿದ್ದಾರೆ. ಆ ಸಿನಿಮಾ ಯಾವುದು, ಆ ಚಿತ್ರಕ್ಕೆ ನಿರ್ಮಾಪಕ ಯಾರು, ನಾಯಕಿ ಯಾರು ಎನ್ನುವ ವಿಷಯಗಳು ಚರ್ಚೆಯಲ್ಲಿದೆ. ಸದ್ಯದ ವರದಿ ಪ್ರಕಾರ ತಲೈವಾ 169ನೇ ಪ್ರಾಜೆಕ್ಟ್ ತಯಾರಿ ನಡೆದಿದೆ. ನಿರ್ದೇಶಕ, ನಿರ್ಮಾಪಕ ಹಾಗೂ ನಾಯಕಿ ಬಗ್ಗೆಯೂ ಅಂತಿಮ ಯೋಜನೆ ನಡೆದಿದ್ದು ಅಧಿಕೃತವಾಗಿ ಪ್ರಕಟವೊಂದೇ ಬಾಕಿ ಇದೆಯಂತೆ.

  ಗಣೇಶ ಹಬ್ಬದ ವಿಶೇಷ ರಜನಿಕಾಂತ್ ಅಭಿಮಾನಿಗಳಿಗೆ ಡಬಲ್ ಧಮಾಕಗಣೇಶ ಹಬ್ಬದ ವಿಶೇಷ ರಜನಿಕಾಂತ್ ಅಭಿಮಾನಿಗಳಿಗೆ ಡಬಲ್ ಧಮಾಕ

  ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ ಹಾಗೂ ವಿತರಣೆ ಸಂಸ್ಥೆ ಎಜಿಎಸ್ ಎಂಟರ್‌ಟೈನ್‌ಮೆಂಟ್ ಜೊತೆ ರಜನಿಕಾಂತ್ ತಮ್ಮ ಮುಂದಿನ ಚಿತ್ರ ಮಾಡಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ಮುಂದೆ ಓದಿ...

  ಎಜಿಎಸ್ ಜೊತೆ ರಜನಿ ಚಿತ್ರ

  ಎಜಿಎಸ್ ಜೊತೆ ರಜನಿ ಚಿತ್ರ

  ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ ಎಜಿಎಸ್ ಎಂಟರ್‌ಟೈನ್‌ಮೆಂಟ್‌ಗೆ ರಜನಿಕಾಂತ್ ಕಾಲ್‌ಶೀಟ್ ಕೊಟ್ಟಿರುವ ಬಗ್ಗೆ ಹಲವು ದಿನಗಳಿಂದಲೂ ಸುದ್ದಿ ಕೇಳಿ ಬರುತ್ತಿದೆ. ಈಗ ಈ ಪ್ರಾಜೆಕ್ಟ್‌ ಘೋಷಣೆಯಾಗುವ ಹಾದಿಯಲ್ಲಿದೆಯಂತೆ. ಚಿತ್ರದ ಪೂರ್ವ ತಯಾರಿ ನಡೆದಿದ್ದು, ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎನ್ನಲಾಗಿದೆ.

  'ಬಿಗಿಲ್' ನಿರ್ಮಾಪಕ

  'ಬಿಗಿಲ್' ನಿರ್ಮಾಪಕ

  ವಿಜಯ್ ನಟಿಸಿದ್ದ ಬಿಗಿಲ್ ಚಿತ್ರ ನಿರ್ಮಿಸಿದ್ದು ಇದೇ ಎಜಿಎಸ್ ಸಂಸ್ಥೆ. ಅದಕ್ಕೂ ಮುಂಚೆ ಕಾವನ್, ಥನಿ ಒರುವನ್, ವೇಯ್ ರಾಜ ವೇಯ್, ಅನೇಗನ್, ಇರುಂಬು ಕುತ್ತಿರೈ, ತೆನಾಲಿ ರಾಮ, ಮಾಸಿಲಾಮಣಿ, ಸಂತೋಷ್ ಸುಬ್ರಮಣ್ಯ, ತಿರುಟೈ ಪಾಯಲೇ 1 & 2 ಸೇರಿದಂತೆ ಹಲವು ಚಿತ್ರಗಳಲ್ಲಿ ಎಜಿಎಸ್ ನಿರ್ಮಿಸಿದೆ.

  ಇನ್ಮುಂದೆ ಸಿನಿಮಾಗಳೇ ಮಾಡೋದಿಲ್ಲ ಎಂದು ನಿರ್ಧರಿಸಿಬಿಟ್ಟಿದ್ದರು ರಜನಿಕಾಂತ್!ಇನ್ಮುಂದೆ ಸಿನಿಮಾಗಳೇ ಮಾಡೋದಿಲ್ಲ ಎಂದು ನಿರ್ಧರಿಸಿಬಿಟ್ಟಿದ್ದರು ರಜನಿಕಾಂತ್!

  ದೇಸಿಂಗ್ ಪೆರಿಯಸ್ವಾಮಿ ಆಕ್ಷನ್ ಕಟ್

  ದೇಸಿಂಗ್ ಪೆರಿಯಸ್ವಾಮಿ ಆಕ್ಷನ್ ಕಟ್

  ರಜನಿಕಾಂತ್ ಮತ್ತೊಮ್ಮೆ ಯುವ ನಿರ್ದೇಶಕನಿಗೆ ಕಾಲ್‌ಶೀಟ್ ಕೊಟ್ಟಿದ್ದಾರೆ. ದುಲ್ಕಾರ್ ಸಲ್ಮಾನ್ ಮತ್ತು ರಿತು ಶರ್ಮಾ ನಟಿಸಿದ್ದ ಹಿಟ್ ಆಗಿದ್ದ 'ಕಣ್ಣುಂ ಕಣ್ಣುಂ ಕೊಲ್ಲೈಯಡಿತಾಳ್' ಚಿತ್ರ ನಿರ್ದೇಶಿಸಿದ್ದ ದೇಸಿಂಗ್ ಪೆರಿಯಸ್ವಾಮಿ ತಲೈವಾ 169ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎಂಬ ಸುದ್ದಿ ವರದಿಯಾಗಿದೆ.

  ದೀಪಿಕಾ ಪಡುಕೋಣೆ ನಾಯಕಿ?

  ದೀಪಿಕಾ ಪಡುಕೋಣೆ ನಾಯಕಿ?

  ಸದ್ಯದ ವರದಿ ಪ್ರಕಾರ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುವ ಸಾಧ್ಯತೆ ಇದೆಯಂತೆ. ಈ ಹಿಂದೆ ರಜನಿಕಾಂತ್ ಜೊತೆ ಕೊಚಾಡಿಯನ್ ಆನಿಮೇಷನ್ ಸಿನಿಮಾದಲ್ಲಿ ದೀಪಕಾ ಕಾಣಿಸಿಕೊಂಡಿದ್ದರು. ಇದೀಗ, ಮೊಟ್ಟ ಮೊದಲ ಸಲ ಕಮರ್ಷಿಯಲ್ ಫೀಚರ್ ಚಿತ್ರದಲ್ಲಿ ದೀಪಿಕಾ ಮತ್ತು ರಜನಿ ತೆರೆಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ.

  ನವೆಂಬರ್ 4ಕ್ಕೆ ಅಣ್ಣಾತ್ತೆ

  ನವೆಂಬರ್ 4ಕ್ಕೆ ಅಣ್ಣಾತ್ತೆ

  ಸಿರುತೈ ಶಿವ ನಿರ್ದೇಶನ ಮಾಡಿದ್ದು, ಸ್ಟಾರ್ ಕಲಾವಿದರು ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಜೊತೆ ನಯನತಾರ, ಕೀರ್ತಿ ಸುರೇಶ್, ಹಿರಿಯ ನಟ ಮೀನಾ, ಖುಷ್ಬೂ, ಪ್ರಕಾಶ್ ರಾಜ್, ಸೂರಿ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸನ್ ಪಿಕ್ಚರ್ಸ್ ಈ ಸಿನಿಮಾ ನಿರ್ಮಿಸುತ್ತಿದ್ದು, ಡಿ ಇಮ್ಮನ್ ಸಂಗೀತ ಇದೆ. ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 4 ರಂದು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಅಣ್ಣಾತ್ತೆ ಚಿತ್ರಮಂದಿರಕ್ಕೆ ಬರಲಿದೆ.

  ಒಂದು ಹಂತದಲ್ಲಿ ರಜನಿಕಾಂತ್ ಸಿನಿಮಾರಂಗದಿಂದ ದೂರವಾಗಲಿದ್ದಾರೆ. ರಾಜಕೀಯದ ಕಡೆ ಆಸಕ್ತಿ ತೋರಿದ್ದು, ಚಿತ್ರರಂಗಕ್ಕೆ ಗುಡ್ ಬೈ ಹೇಳಲಿದ್ದಾರೆ ಎನ್ನಲಾಗಿತ್ತು. ಆಮೇಲೆ ಅನಾರೋಗ್ಯ ಕಾರಣದಿಂದ ರಾಜಕೀಯದಿಂದಲೂ ಹಿಂದೆ ಸರಿದರು. ಈಗ ಮತ್ತಷ್ಟು ಸಿನಿಮಾಗಳನ್ನು ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ.

  English summary
  Superstar Rajinikanth 169th Film With Ags Entertainment. the movie will direct Desingh Periyasamy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X