ಅಣ್ಣಾತ್ತೆ ಚಿತ್ರೀಕರಣ ಆರಂಭ: ರಜನಿಗೆ ಮಗಳು ಐಶ್ವರ್ಯ ಸಾಥ್
ಸೂಪರ್ ಸ್ಟಾರ್ ರಜನಿಕಾಂತ್ ನಟಿಸುತ್ತಿರುವ ಅಣ್ಣಾತ್ತೆ ಸಿನಿಮಾದ ಚಿತ್ರೀಕರಣ ಹೈದರಾಬಾದ್‌ನಲ್ಲಿ ಆರಂಭವಾಗಿದ್ದು, ಲಾಕ್‌ಡೌನ್ ಬಳಿಕ ತಲೈವಾ ಸಿನಿಮಾ ಕೆಲಸ ಪ್ರಾರಂಭಿಸಿದ್ದಾರೆ.
ಅಪ್ಪನ ಶೂಟಿಂಗ್‌ಗೆ ಮಗಳು ಐಶ್ವರ್ಯ ರಜನಿಕಾಂತ್ ಸಾಥ್ ನೀಡಿದ್ದಾರೆ. ಅಣ್ಣಾತ್ತೆ ಸಿನಿಮಾದ ಸೆಟ್‌ನಲ್ಲಿ ಅಪ್ಪ ಮತ್ತು ಮಗಳು ಒಟ್ಟಿಗೆ ಕುಳಿತುಕೊಂಡಿರುವ ಫೋಟೋವೊಂದು ವೈರಲ್ ಆಗಿದೆ. ಚೆನ್ನೈನಿಂದ ರಜನಿ ಜೊತೆಯಲ್ಲಿ ಐಶ್ವರ್ಯ ಸಹ ಹೋಗಿದ್ದು, ಶೂಟಿಂಗ್ ಸ್ಥಳದಲ್ಲಿ ಕಾಳಜಿ ವಹಿಸಿದ್ದಾರೆ.
ಬಿಳಿ ಪಂಚೆ ಮತ್ತು ಬಿಳಿ ಶರ್ಟ್ ಧರಿಸಿರುವ ರಜನಿಕಾಂತ್ ಹಾಗೂ ಜೀನ್ಸ್ ಪ್ಯಾಂಟ್ ಮತ್ತು ಜಾಕೆಟ್ ಧರಿಸಿರುವ ಐಶ್ವರ್ಯ ಅವರ ಈ ಜೋಡಿ ಮೆಚ್ಚುಗೆ ಗಳಿಸಿಕೊಂಡಿದೆ.

ರಜನಿಕಾಂತ್ ಡಿಸೆಂಬರ್ 12 ರಂದು ತಮ್ಮ 70ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಡಿಸೆಂಬರ್ 31ರಂದು ರಾಜಕೀಯ ಪಕ್ಷವನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದೇನೆ ಎಂದು ಪ್ರಕಟಣೆ ಮಾಡಿದ್ದಾರೆ.
ಈ ನಡುವೆ ರಜನಿಕಾಂತ್ ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗಿತ್ತು ಎಂಬ ವರದಿಗಳು ಆಗಿದ್ದವು. ಬಹುಶಃ ಆ ಕಾರಣದಿಂದಲೇ ಮಗಳು ಐಶ್ವರ್ಯ, ತಂದೆಯ ಜೊತೆಯಲ್ಲಿ ತೆರಳಿದ್ದಾರೆ ಎನ್ನಲಾಗಿದೆ.
ಇನ್ನು ಸಿರುತೈ ಶಿವ ಅಣ್ಣಾತ್ತೆ ಚಿತ್ರವನ್ನು ನಿರ್ದೇಶನ ಮಾಡಿದ್ದು, ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದ್ದಾರೆ. ರಜನಿಕಾಂತ್, ನಯನತಾರ, ಕೀರ್ತಿ ಸುರೇಶ್, ಖುಷ್ಬೂ, ಮೀನಾ, ಪ್ರಕಾಶ್ ರಾಜ್ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ. ಮುಂದಿನ ವರ್ಷದ ಬೇಸಿಗೆವೊತ್ತಿಗೆ ಸಿನಿಮಾ ತೆರೆಕಾಣಬಹುದು.


Click it and Unblock the Notifications











