ರಜನಿಕಾಂತ್ 168ನೇ ಚಿತ್ರದ ಟೈಟಲ್ ಬಹಿರಂಗ
ದರ್ಬಾರ್ ಚಿತ್ರದ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ನಿರ್ದೇಶಕ ಶಿವ ಜೊತೆ ಸಿನಿಮಾ ಮಾಡುತ್ತಿದ್ದಾರೆ. 168ನೇ ಚಿತ್ರ ಇದಾಗಿದ್ದು, ಈಗಾಗಲೇ ಸಿನಿಮಾದ ಶೂಟಿಂಗ್ ಆರಂಭವಾಗಿದೆ.
ರಜನಿ ಮತ್ತಿ ಶಿವ ಕಾಂಬಿನೇಷನ್ ನ ಈ ಚಿತ್ರಕ್ಕೆ ಟೈಟಲ್ ಏನಿಡಬಹುದು ಎಂಬ ಕುತೂಹಲ ಕಾಡುತ್ತಿತ್ತು. ಇದೀಗ, ಅಂತಿಮವಾಗಿ ತಲೈವಾ ನಟನೆಯ ಹೊಸ ಚಿತ್ರಕ್ಕೆ ಶೀರ್ಷಿಕೆ ಪಕ್ಕಾ ಆಗಿದೆ.
'ಮಾನವನ್' ಎಂದು ಈ ಚಿತ್ರಕ್ಕೆ ಹೆಸರಿಟ್ಟಿದ್ದು, ಟೈಟಲ್ ಡಿಸೈನ್ ಆಗಿರುವ ಪೋಸ್ಟರ್ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆಯಂತೆ. ಆದರೆ, ಇದೇನಾ ಚಿತ್ರದ ಟೈಟಲ್ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಯಾಕಂದ್ರೆ, ಚಿತ್ರದ ಆಪ್ತರು ಬಿಟ್ಟುಕೊಟ್ಟಿರುವ ಪ್ರಕಾರ, 168ನೇ ಚಿತ್ರಕ್ಕೆ 'ಅನ್ನಾತ' ಎಂದು ಹೆಸರಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಅನ್ನಾತ ಅಂದರೆ ಅಣ್ಣಾ ಎಂಬ ಅರ್ಥವಿದೆ. ಆದರೆ, ಇದು ಎಷ್ಟರ ಮಟ್ಟಿಗೆ ನಿಜಾ ಎಂಬುದು ಸದ್ಯಕ್ಕೆ ಕುತೂಹಲ ಮೂಡಿಸಿದೆ. ಇನ್ನುಳಿದಂತೆ ಸ್ಟಾರ್ ಕಲಾವಿದರನ್ನು ಹೊಂದಿರುವ ಈ ಸಿನಿಮಾ ಸಖತ್ ಸದ್ದು ಮಾಡ್ತಿದೆ.
ರಜನಿಕಾಂತ್ ಜೊತೆ ಖುಷ್ಬೂ, ಮೀನಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ರಜನಿ ಪುತ್ರಿಯಾಗಿ ಕೀರ್ತಿ ಸುರೇಶ್ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಪಾತ್ರದಲ್ಲಿ ಸಿದ್ಧಾರ್ಥ್ ಕೂಡ ಇರಲಿದ್ದಾರೆ ಎನ್ನಲಾಗಿದೆ.


Click it and Unblock the Notifications











