For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ 'ದರ್ಬಾರ್'ಗೆ ಅದೃಷ್ಟ ತಂದ ಎಸ್.ಪಿ ಬಾಲಸುಬ್ರಹ್ಮಣ್ಯಂ

  |
  Super star Rajinikanth starrer 'Darbar' movie title song released | FILMIBEAT KANNADA

  ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಮೊದಲಿನಿಂದಲೂ ಎಸ್ ಪಿ ಬಾಲಸುಬ್ರಹ್ಮಣ್ಯಂ ವಿಚಾರದಲ್ಲಿ ಒಂದು ನಂಬಿಕೆ ಇದೆ. ತಮ್ಮ ಚಿತ್ರಗಳಿಗೆ ಶೀರ್ಷಿಕೆ ಗೀತೆ ಇವರಿಂದಲೇ ಹಾಡಿಸಬೇಕು, ಇವರು ಹಾಡಿದ್ರೆ ಆ ಹಾಡು ಸೂಪರ್ ಡೂಪರ್ ಹಿಟ್ ಆಗುತ್ತೆ ಎಂಬ ವಾಡಿಕೆ.

  ಬಹುಶಃ ತಲೈವಾ ಅವರ ಈ ನಂಬಿಕೆ ನಿಜ ಎನ್ನುವಂತೆ ನಿರ್ದೇಶಕ, ನಿರ್ಮಾಪಕರು ಕೂಡ ನಡೆದುಕೊಂಡಿದ್ದಾರೆ. ರಜನಿಯ ಹಲವು ಚಿತ್ರಗಳ ಟೈಟಲ್ ಹಾಡು ಹಾಡಿರುವುದು ಇದೇ ಎಸ್.ಪಿ ಬಾಲಸುಬ್ರಹ್ಮಣ್ಯಂ. ಅವರು ಹಾಡಿರುವ ಅಷ್ಟು ಹಾಡುಗಳು ಇಂದಿಗೂ ದಿ ಬೆಸ್ಟ್.

  ಸೂಪರ್ ಸ್ಟಾರ್ ರಜನಿಕಾಂತ್ ಗೆ ನಾಯಕಿಯಾದ 'ರಣಧೀರ' ಬೆಡಗಿಸೂಪರ್ ಸ್ಟಾರ್ ರಜನಿಕಾಂತ್ ಗೆ ನಾಯಕಿಯಾದ 'ರಣಧೀರ' ಬೆಡಗಿ

  ಇದೀಗ, ರಜನಿಯ 'ದರ್ಬಾರ್' ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದ್ದು, ಯ್ಯೂಟ್ಯೂಬ್ನಲ್ಲಿ ಧೂಳೆಬ್ಬಿಸುತ್ತಿದೆ. ಈ ಹಾಡನ್ನು ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಿರುವುದು ಈಗ ಗಮನ ಸೆಳೆಯುತ್ತಿದೆ.

  24 ಗಂಟೆಯಲ್ಲಿ 8 ಮಿಲಿಯನ್

  24 ಗಂಟೆಯಲ್ಲಿ 8 ಮಿಲಿಯನ್

  ಅನಿರುದ್ಧ್ ರವಿಚಂದ್ರನ್ ಸಂಗೀತ, ವಿವೇಕ್ ಸಾಹಿತ್ಯ ರಚಿಸಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಿರುವ ದರ್ಬಾರ್ ಚಿತ್ರದ 'ಚುಮ್ಮ ಕಿಳಿ' ಹಾಡು ಈ ಹಿಂದಿನ ಎಲ್ಲ ದಾಖಲೆಗಳನ್ನು ಉಡೀಸ್ ಮಾಡಿದ. 24 ಗಂಟೆಯಲ್ಲಿ 8 ಮಿಲಿಯನ್ ವೀಕ್ಷಣೆ ಕಂಡಿರುವ ಲಿರಿಕಲ್ ವಿಡಿಯೋ ಸಾಂಗ್ ಎಂಬ ರೆಕಾರ್ಡ್ ಮಾಡಿದೆ.

  ರಜನಿಕಾಂತ್ ರಾಜಕೀಯ ಎಂಟ್ರಿಗೆ ಎರಡು ವಿಘ್ನ!ರಜನಿಕಾಂತ್ ರಾಜಕೀಯ ಎಂಟ್ರಿಗೆ ಎರಡು ವಿಘ್ನ!

  ಎಸ್.ಪಿ.ಬಿ ಮತ್ತು ತಲೈವಾ ಜುಗಲ್ ಬಂದಿ

  ಎಸ್.ಪಿ.ಬಿ ಮತ್ತು ತಲೈವಾ ಜುಗಲ್ ಬಂದಿ

  ದರ್ಬಾರ್ ಹಾಡು ಬಹುದೊಡ್ಡ ಹಿಟ್ ಆಗಿದೆ. ಈ ಯಶಸ್ಸಿನಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಪಾಲು ದೊಡ್ಡದಿದೆ. ಈ ಹಿಂದೆ ಪೇಟಾ ಸಿನಿಮಾದಲ್ಲಿ ಎಸ್ ಪಿ ಬಿ ಹಾಡಿದ್ದ 'ಮರಣ ಮಾಸ್ ಮರಣ....' ಹಾಡು ಅಷ್ಟೇ ಎಲ್ಲ ದಾಖಲೆಗಳನ್ನು ಚಿಂದಿ ಮಾಡಿತ್ತು.

  ಎಸ್ ಪಿ ಬಿ ಮತ್ತು ರಜನಿ ಹಿಟ್ ಹಾಡುಗಳು

  ಎಸ್ ಪಿ ಬಿ ಮತ್ತು ರಜನಿ ಹಿಟ್ ಹಾಡುಗಳು

  ರಜನಿಕಾಂತ್ ಚಿತ್ರಗಳಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ಪ್ರಮುಖ ಹಾಡುಗಳನ್ನ ಪಟ್ಟಿ ಮಾಡುವುದಾದರೇ....ಪಡೆಯಪ್ಪಾ ಚಿತ್ರದಲ್ಲಿ ಯ ಪೇರು ಪಡೆಯಪ್ಪಾ....., ಅರುಣಾಚಲಂ ಚಿತ್ರದಲ್ಲಿ ಅದಂಡಾ ಇದಂಡಾ...., ಮುತ್ತು ಚಿತ್ರದಲ್ಲಿ ಒರುವನ್ ಒರುವನ್ ಮೊದಲಾಳಿ....., ಬಾಷಾ ಚಿತ್ರದಲ್ಲಿ ನಾನ್ ಆಟೋಕಾರನ್...., ಅಣ್ಣಾಮಲೈ ಚಿತ್ರದಲ್ಲಿ ವಂದಂಡಾ ಪಾಲಕಾರಾ.....ಹೀಗೆ ಹಲವು ಹಿಟ್ ಗೀತೆಗಳೇ ಇವೆ.

  ರಜನಿಕಾಂತ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ರೀ-ರಿಲೀಸ್ ಆಗುತ್ತಿದೆ 'ಬಾಷಾ'ರಜನಿಕಾಂತ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ರೀ-ರಿಲೀಸ್ ಆಗುತ್ತಿದೆ 'ಬಾಷಾ'

  25 ವರ್ಷದ ಬಳಿಕ ಪೊಲೀಸ್

  25 ವರ್ಷದ ಬಳಿಕ ಪೊಲೀಸ್

  ಎಆರ್ ಮುರುಗದಾಸ್ ನಿರ್ದೇಶನದ ದರ್ಬಾರ್ ಚಿತ್ರದಲ್ಲಿ ರಜನಿಕಾಂತ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಸುಮಾರು 25 ವರ್ಷಗಳ ಬಳಿಕ ರಜನಿ ಕಾಪ್ ಆಗಿ ಅಬ್ಬರಿಸುತ್ತಿದ್ದಾರೆ. ಈಗಾಗಲೇ ದರ್ಬಾರ್ ಶೂಟಿಂಗ್ ಮುಗಿದಿದ್ದು, ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬರಲಿದೆ.

  English summary
  Super star Rajinikanth starrer Darbar movie title song has released. the song sung by legendary SP Balasubrahmanyam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X