ರಜನಿ ಅಥವಾ ವಿಜಯ್, ಹೆಚ್ಚು ದೇಣಿಗೆ ನೀಡಿದ್ಯಾರು? ಸಾವಿನಲ್ಲಿ ಅಂತ್ಯವಾಯ್ತು ಅಭಿಮಾನಿಗಳ ವಾರ್
ಚಿತ್ರರಂಗದಲ್ಲಿ ಸ್ಟಾರ್ ನಟರ ಅಭಿಮಾನಿಗಳ ವಾರ್ ಸರ್ವೇ ಸಾಮಾನ್ಯ. ಅಭಿಮಾನಿಗಳು ನಮ್ಮ ಸ್ಟಾರ್ ಹೆಚ್ಚು, ನಮ್ಮ ನಟನೆ ಉತ್ತಮ ಎಂದು ಕಿತ್ತಾಡಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಸಿನಿಮಾ ರಿಲೀಸ್ ಸಮಯದಲ್ಲಿ ಅಭಿಮಾನಿಗಳ ಜಗಳ ಜೋರಾಗಿರುತ್ತೆ.
Recommended Video
ಆದ್ರೀಗ ಕೊರೊನಾ ಲಾಕ್ ಡೌನ್ ಸಮಯದಲ್ಲಿ ತಮಿಳು ಸ್ಟಾರ್ ನಟರಾದ ರಜನಿಕಾಂತ್ ಮತ್ತು ವಿಜಯ್ ಅಭಿಮಾನಿಗಳ ನಡುವೆ ಮಾರಾಮಾರಿ ನಡೆದಿದ್ದು, ಸಾವಿನಲ್ಲಿ ಅಂತ್ಯವಾಗಿದೆ. ತಮಿಳು ನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕೊರೊನಾ ವಿರುದ್ಧ ಹೋರಾಟಕ್ಕೆ ಸ್ಟಾರ್ ನಟರಿಬ್ಬರು ನೀಡಿದ ದೇಣಿಗೆ ಈಗ ಅಭಿಮಾನಿಯ ಸಾವಿಗೆ ಕಾರಣವಾಗಿದೆ. ಮುಂದೆ ಓದಿ..

ವಿಜಯ್-ರಜನಿ ನೀಡಿದ ದೇಣಿಗೆಗೆ ಅಭಿಮಾನಿಗಳ ಕಿತ್ತಾಟ
ವಿಜಯ್ ದಳಪತಿ ಅಭಿಮಾನಿ ಮತ್ತು ರಜನಿಕಾಂತ್ ಅಭಿಮಾನಿಗಳ ಕಿತ್ತಾಟದಲ್ಲಿ ನಟ ವಿಜಯ್ ಅಭಿಮಾನಿ ಸಾವನಪ್ಪಿದ್ದಾರೆ. ಕೊರೊನಾ ವಿರುದ್ಧ ಹೋರಾಡಲು ಇಬ್ಬರು ನಟರು ಕೈಲಾದಷ್ಟು ದೇಣಿಗೆ ನೀಡಿದ್ದಾರೆ. ರಜನಿಕಾಂತ್ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಕೋಟಿ ಗಟ್ಟಲೆ ಪರಿಹಾರ ನೀಡಿದ್ದಾರೆ. ಇನ್ನೂ ನಟ ವಿಜಯ್ ಸಹ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಜೊತೆಗೆ ಬೇರೆ ಬೇರೆ ರಾಜ್ಯಗಳಿಗೂ ಪರಿಹಾರ ನೀಡಿದ್ದಾರೆ.

ಅಭಿಮಾನಿಗಳಾದ ಯುವರಾಜ್ ಮತ್ತು ದಿನಶ್ ಬಾಬು
ಅಕ್ಕಪಕ್ಕದ ಮನೆಯವರಾದ ದಿನೇಶ್ ಬಾಬು ಮತ್ತು ಯುವರಾಜ್ ಇಬ್ಬರು ಅಭಿಮಾನಿಗಳು ನಿಮ್ಮ ಹೀರೋ ಕಡಿಮೆ ದೇಣಿಗೆ ಕೊಟ್ಟಿದ್ದಾರೆ ಎಂದು ವಿಜಯ್ ಅಭಿಮಾನಿ ಯುವರಾಜ್ ನನ್ನು ಕೆಣಕಿದ್ದಾರೆ. ನಿಮ್ಮ ಹೀರೋನೆ ಕಡಿಮೆ ಹಣ ನೀಡಿದ್ದಾರೆ ಎಂದು ಇಬ್ಬರು ಅಭಿಮಾನಿಗಳ ನಡುವೆ ಮಾತಿಗೆ ಮಾತು ಬೆಳೆದು ಮಾರಾಮಾರಿ ನಡೆದಿದೆ.

ಲಾಕ್ ಡೌನ್ ನಡುವೆಯೂ ಮದ್ಯ ಸೇವಿಸಿದ್ದ ಅಭಿಮಾನಿಗಳು
ಲಾಕ್ ಡೌನ್ ನಲ್ಲಿ ಮಧ್ಯದ ಶಾಪ್ ಗಳು ಬಂದ್ ಆಗಿದೆ. ಆದರೂ ಇಬ್ಬರು ಮದ್ಯ ಸೇವಿಸಿದ್ದರು ಎಂದು ಹೇಳಲಾಗುತ್ತಿದೆ. ಕಂಠಪೂರ್ತಿ ಕುಡಿದು ಫುಲ್ ಟೈಟ್ ಆಗಿದ್ದ ಇಬ್ಬರು, ಸ್ಟಾರ್ ನಟರು ನೀಡಿದ ದೇಣಿಗೆ ವಿಚಾರವಾಗಿ ಜಗಳ ಪ್ರಾರಂಭಿಸಿದ್ದಾರೆ. ಕಿತ್ತಾಡುವಾಗ ರಜನಿಕಾಂತ್ ಅಭಿಮಾನಿ ದಿನೇಶ್ ಬಾಬು, ಯುವರಾಜ್ ನನ್ನು ಬಲವಾಗಿ ತಳ್ಳಿ ಬೀಳಿಸಿದ್ದಾರೆ. ತಲೆಗೆ ತೀವ್ರವಾಗಿ ಪೆಟ್ಟು ಬಿದ್ದ ಕಾರಣ 22 ವರ್ಷದ ಯುವರಾಜ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಲಿವುಡ್ ಅನ್ನು ಬೆಚ್ಚಿಬೀಳಿಸಿದೆ ಅಭಿಮಾನಿಯ ಸಾವು
ಇನ್ನೂ ಕೊಲೆ ಆರೋಪಿ ದಿನೇಶ್ ಬಾಬು ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದ ಪ್ರದೇಶದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಅನಗತ್ಯ ವಿಚಾರಕ್ಕೆ ಜಗಳವಾಡಿಕೊಂಡು ಸಾವಿನಲ್ಲಿ ಅಂತ್ಯವಾಗಿದ್ದು, ಕಾಲಿವುಡ್ ಪ್ರೇಕ್ಷಕರನ್ನು ಬೆಚ್ಚಿಬೀಳಿಸಿದೆ.


Click it and Unblock the Notifications











