ಗಲ್ಲಾ ಪೆಟ್ಟಿಗೆಯಲ್ಲಿ ರಜನಿಕಾಂತ್‌ "ಅಣ್ಣಾತೆ' ಸದ್ದು: ಮೊದಲ ದಿನದ ಗಳಿಕೆ ಎಷ್ಟು?

ನಟ ರಜನಿಕಾಂತ್‌ ಅಭಿನಯದ ಅಣ್ಣಾತೆ ಸಿನಿಮಾದ ಮೊದಲ ದಿನದ ಕಲೆಕ್ಷನ್‌ ಹೊರ ಬಂದಿದೆ. ಅಣ್ಣಾತೆ ಸಿನಿಮಾ ದೀಪಾವಳಿಯ ಪ್ರಯುಕ್ತ ನವೆಂಬರ್ 4ರಂದು ತೆರೆಕಂಡಿದೆ. ಭಾರಿ ನಿರೀಕ್ಷೆಯಿಂದಿಗೆ ಸಿನಿಮಾ ತೆರೆಗೆ ಬಂದಿದೆ. ಮೊದಲ ದಿನ ಸಿನಿಮಾ ನೋಡಿದವರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇದರ ಹೊರತಾಗಿ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು ಎನ್ನುವಂತಹ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಅಣ್ಣಾತೆ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಿದ್ದು, ಒಂದು ಸಾವಿರ ಸ್ಕ್ರೀನ್ ಗಳಲ್ಲಿ ಚಿತ್ರ ತೆರೆಕಂಡಿದೆ. ತಮಿಳು ಮತ್ತು ತೆಲುಗು ಎರಡೂ ಚಿತ್ರಗಳು ಸೇರಿ ಎರಡು ಸಾವಿರ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ. ಸಿನಿಮಾ ರಿಲೀಸ್ ಬಗ್ಗೆ ಇದ್ದಂತಹ ಕುತೂಹಲ ಸದ್ಯ ಚಿತ್ರದ ಫಸ್ಟ್ ಡೇ ಕಲೆಕ್ಷನ್ ಎಷ್ಟು ಎನ್ನುವ ಕಡೆಗೆ ತಿರುಗಿದೆ. ಇಲ್ಲಿ ಜನರ ಪ್ರತಿಕ್ರಿಯೆಗೂ ಸಿನಿಮಾ ಕಲೆಕ್ಷನ್‌ಗೂ ಸಂಬಂಧ ಇಲ್ಲ. ಯಾಕೆಂದರೆ ಸಿನಿಮಾ ಹೇಗಿದೆ, ಕಥೆ ಹೇಗಿದೆ ಎನ್ನುವುದು ಇಲ್ಲಿ ಮುಖ್ಯವಾಗುವುದಿಲ್ಲ.

ರಜನಿಕಾಂತ್ ಸಿನಿಮಾ ಎಂದರೆ ರಜನಿಯನ್ನು ತೆರೆ ಮೇಲೆ ನೋಡಬೇಕು ಎಂದೇ ಥಿಯೇಟರ್‌ಗೆ ಹೋಗುವವರೇ ಹೆಚ್ಚು. ಹಾಗಾಗಿ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಬಂದರೂ ಮೊದಲ ದಿನವೇ ಒಳ್ಳೆಯ ಓಪನಿಂಗ್‌ ಪಡೆದುಕೊಂಡಿದೆ. ಬಾಕ್ಸಾಫೀಸ್‌ನಲ್ಲಿ ಅಣ್ಣಾತೆ ಮೊದಲ ದಿನವೇ ಭಾರಿ ಸದ್ದು ಮಾಡಿದೆ. ಯುಕೆ ಮತ್ತು ಯುರೋಪ್‌ ಸೇರಿದಂತೆ 11.25 ಕೋಟಿ ಮೊತ್ತ ಕಲೆ ಹಾಕಿದೆ ಅಣ್ಣಾತೆ.

ಯುಕೆ ಮತ್ತು ಯುರೋಪ್‌ನಲ್ಲಿ ಉತ್ತಮ ರೆಸ್ಪಾನ್ಸ್‌

ಯುಕೆ ಮತ್ತು ಯುರೋಪ್‌ನಲ್ಲಿ ಉತ್ತಮ ರೆಸ್ಪಾನ್ಸ್‌

ವಿಶ್ವದಾದ್ಯಂತ ರಿಲೀಸ್‌ ಆಗಿರೋ ಅಣ್ಣಾತೆ ಚಿತ್ರಕ್ಕೆ ಯುಕೆ ಮತ್ತು ಯುರೋಪ್‌ನಲ್ಲಿ ಉತ್ತಮ ರೆಸ್ಪಾನ್ಸ್‌ ಸಿಗುತ್ತಿದೆ. ಬಾಕ್ಸಾಫೀಸ್‌ನಲ್ಲೂ ಅಣ್ಣಾತೆ ದಾಖಲೆ ಬರೆಯುವ ಸೂಚನೆ ಕೊಟ್ಟಿದೆ. ಇದು ವಿದೇಶಿ ಕಲೆಕ್ಷನ್‌ ವಿಚಾರ. ಇನ್ನೂ ಭಾರತದಲ್ಲಿ ಮೊದಲ ದಿನದ ಕಲೆಕ್ಷನ್ ಬಗ್ಗೆ ಚಿತ್ರತಂಡ ಮಾಹಿತಿ ಬಿಟ್ಟು ಕೊಟ್ಟಿಲ್ಲ. ಅಂದಾಜಿನ ಪ್ರಕಾರ ತಮಿಳುನಾಡಿನಲ್ಲಿ ಏನಿಲ್ಲ ಅಂದರೂ ಮೊದಲ ದಿನ 10 ಕೋಟಿಗೂ ಅಧಿಕ ಕಲೆಕ್ಷನ್ ಆಗಲಿದೆ ಎಂದು ಮೂಲಗಳು ತಿಳಿಸಿವೆ. ಒಂದು ದಿನದ ಕಲೆಕ್ಷನ್‌ ಇಷ್ಟಾದರೆ ವಾರಾಂತ್ಯಕ್ಕೆ ಅಣ್ಣಾತೆ ದಾಖಲೆಯ ಮೊತ್ತ ಕಲೆ ಹಾಕೋದು ಖಚಿತ. ಕೊರೊನಾ ಬಳಿಕ ತೆರೆಗೆ ಬಂದಿರೋ ಈ ಚಿತ್ರ ಮೊದಲ ದಿನ ಈ ಮಟ್ಟಿಗಿನ ಕಲೆಕ್ಷನ್ ಇರುತ್ತೆ ಅಂದರೆ ಅದು ದಾಖಲೆಯೇ ಸರಿ.

ಅಣ್ಣಾತೆ ರಜನಿಕಾಂತ್ ಅಭಿನಯದ 168ನೇ ಸಿನಿಮಾ

ಅಣ್ಣಾತೆ ರಜನಿಕಾಂತ್ ಅಭಿನಯದ 168ನೇ ಸಿನಿಮಾ

ಅಣ್ಣಾತೆ ರಜನಿಕಾಂತ್ ಅಭಿನಯದ 168ನೇ ಸಿನಿಮಾ. ಚಿತ್ರವನ್ನು ಸನ್‌ ಪಿಚ್ಚರ್ಸ್ ನಿರ್ಮಾಣ ಮಾಡಿದೆ. ರಜನಿಕಾಂತ್ ಜೊತೆಗೆ ಕೀರ್ತಿ ಸುರೇಶ್, ಮೀನಾ, ಖುಷ್ಬು ಪ್ರಕಾಶ್‌ ರಾಜ್, ಜಗಪತಿಬಾಬು, ಕೀರ್ತಿ ಸುರೇಶ್, ನಯನತಾರಾ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಶಿವ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆ ದೊರೆತಿದ್ದು, ಅಂದುಕೊಂಡ ಮಟ್ಟಿಗೆ ಸಿನಿಮಾ ಮೂಡಿ ಬಂದಿಲ್ಲ ಎಂಬ ಅಭಿಪ್ರಾಯಗಳೂ ಕೇಳಿ ಬರುತ್ತಿವೆ. ಆದರೆ ಸಿನಿಮಾ ಕಲೆಕ್ಷನ್‌ ಮಾತ್ರ ನಿರೀಕ್ಷೆಗೂ ಮೀರಿದ್ದಾಗಿದೆ.

ದೀಪಾವಳಿ ಹಬ್ಬದ ಸಂಭ್ರಮವನ್ನು ಅಣ್ಣಾತೆ ಹೆಚ್ಚು ಮಾಡಿದೆ

ದೀಪಾವಳಿ ಹಬ್ಬದ ಸಂಭ್ರಮವನ್ನು ಅಣ್ಣಾತೆ ಹೆಚ್ಚು ಮಾಡಿದೆ

ರಜನಿಕಾಂತ್‌ ಅಭಿಮಾನಿಗಳ ದೀಪಾವಳಿ ಹಬ್ಬದ ಸಂಭ್ರಮವನ್ನು ಅಣ್ಣಾತೆ ಹೆಚ್ಚು ಮಾಡಿದೆ. ಚಿತ್ರ ಮಂದಿರಗಳಲ್ಲಿಯೆ ಪಟಾಕಿ ಸಿಡಿಸಿ ರಜನಿಯನ್ನ ಬಿಗ್‌ ಸ್ಕ್ರೀನ್‌ ಮೇಲೆ ಅಭಿಮಾನಿಗಳು ಬರ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ. ಚಿತ್ರ ರಿಲೀಸ್‌ ದಿನ ಬೆಳಗಿನ ಜಾವದಿಂದಲೇ ರಜನಿಕಾಂತ್‌ ಅಣ್ಣಾತೆ ಚಿತ್ರದ ಸಂಭ್ರಮ ಶುರುವಾಗಿತ್ತು. ಸೂರ್ಯ ಹುಟ್ಟುವುದಕ್ಕೂ ಮುಂಚೆಯೇ ಅಭಿಮಾನಿಗಳು ಥಿಯೇಟರ್ ಕಡೆಗೆ ಹೋಗಿ ಅಣ್ಣಾತೆ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಮುಗಿ ಬಿದ್ದಿದ್ದರು.

ರಜನಿಕಾಂತ್‌ ಬಗ್ಗೆ ಹೆಚ್ಚಿನ ಕ್ರೇಜ್‌ ಇದೆ

ಸಿನಿಮಾ ಹೇಗಿದೆ ಅನ್ನುವುದಕ್ಕಿಂತಲೂ ಹೆಚ್ಚಾಗಿ ರಜನಿಕಾಂತ್‌ ಬಗ್ಗೆ ಹೆಚ್ಚಿನ ಕ್ರೇಜ್‌ ಇದೆ. ಕೊರೊನಾದಿಂದ ರಜನಿ ಸಿನಿಮಾಗಳನ್ನು ಮಿಸ್‌ ಮಾಡಿಕೊಳ್ಳುತ್ತಿದ್ದ ಅಭಿಮಾನಿಗಳು ಅಣ್ಣಾತೆ ಸಿನಿಮಾದ ಮೂಲಕ ರಜನಿಯನ್ನು ಬಿಗ್‌ ಸ್ಕ್ರೀನ್‌ ಮೇಲೆ ಕಣ್ತುಂಬಿ ಕೊಳ್ಳುತ್ತಿದ್ದಾರೆ. ಅಂದರೆ ಇಲ್ಲಿ ಸಿನಿಮಾ ಬಗೆಗಿನ ಅಭಿಪ್ರಾಯಕ್ಕಿಂತ ರಜನಿಯನ್ನು ತೆರೆ ಮೇಲೆ ನೋಡುವುದೇ ಅಭಿಮಾನಿಗಳಿಗೆ ಖುಷಿ. ಹಾಗಾಗಿ ಬಾಕ್ಸಾಪೀಸ್‌ನಲ್ಲಿ ರಜನಿ ದಾಖಲೆ ಮೇಲೆ ದಾಖಲೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.

More from Filmibeat

English summary
Good Start For Rajinikanth Movie Annaathe. First Day Collection Out
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X