For Quick Alerts
  ALLOW NOTIFICATIONS  
  For Daily Alerts

  ನಟನೆಯಿಂದ ನಿವೃತ್ತಿ ಪಡೆಯುತ್ತಾರಾ ರಜನಿಕಾಂತ್? ಭಾವುಕರಾಗಿದ್ದೇಕೆ ಸೂಪರ್ ಸ್ಟಾರ್?

  |

  ಭಾರತೀಯ ಸಿನಿಮಾರಂಗದ ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ಅಣ್ಣಾತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಹೈದರಾಬಾದ್ ನಲ್ಲಿ ಚಿತ್ರೀಕರಣ ಮುಗಿಸಿ ಚೆನ್ನೈಗೆ ವಾಪಸ್ ಆಗಿರುವ ರಜನಿಕಾಂತ್ ಸದ್ಯ ಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ.

  160ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಸೂಪರ್ ಸ್ಟಾರ್ 70ನೇ ವಯಸ್ಸಿನಲ್ಲೂ ಬಾಕ್ಸ್ ಆಫೀಸ್ ಕಿಂಗ್ ಆಗಿ ಮೆರೆಯುತ್ತಿದ್ದಾರೆ. ಆಗಾಗ ಅನಾರೋಗ್ಯಕ್ಕೆ ತುತ್ತಾಗುವ ರಜನಿಕಾಂತ್ ಇತ್ತೀಚಿಗೆ ನಟನೆಯಿಂದ ನಿವೃತ್ತಿ ಪಡೆಯುವ ಬಗ್ಗೆ ಮಾತನಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

  ಅಣ್ಣಾತೆ ಚಿತ್ರೀಕರಣ ಸಮಯದಲ್ಲಿ ತಲೈವ ಚಿತ್ರತಂಡದ ಜೊತೆ ನಿವೃತ್ತಿ ಬಗ್ಗೆ ಮಾತನಾಡಿ, ಭಾವುಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ನಿವೃತ್ತಿ ಪಡೆಯುವ ಮೊದಲು ಸೂಪರ್ ಸ್ಟಾರ್ ಇನ್ನು ಕೆಲವು ಸಿನಿಮಾಗಳಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದಾರಂತೆ. ಸಿನಿಮಾಗಳಲ್ಲಿ ನಟಿಸಬೇಕೆಂದರೆ ಆರೋಗ್ಯ ಉತ್ತಮವಾಗಿರಬೇಕು ಎಂದಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  ಭಾರತೀಯ ಸಿನಿಮಾರಂಗದ ದೇವರೆಂದು ಕರೆಯಲ್ಪಡುವ ಸೂಪರ್ ಸ್ಟಾರ್ ಕೆಲಸ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಸಾಮಾನ್ಯ ಬಸ್ ಕಂಡಕ್ಟರ್ ಆಗಿದ್ದ ರಜನಿಕಾಂತ್ ಸೂಪರ್ ಸ್ಟಾರ್ ಪಟ್ಟಕ್ಕೆ ಏರುವವರೆಗಿನ ಪಯಣ ರೋಚಕವಾಗಿದೆ. ಅಭಿನಯದ ಜೊತೆಗೆ ಅವರ ಸರಳತೆ ಅಭಿಮಾನಿಗಳ ಹೃದಯ ಗೆದ್ದಿದೆ. ಇದೀಗ ನಿವೃತ್ತಿ ಪಡೆಯುತ್ತಾರಾ ಎನ್ನುವ ಮಾತು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

  ಈ ಬಾರಿ ತಮಿಳುನಾಡು ವಿಧಾನಸಭೆ ಚುನಾವಣೆ ಸ್ಪರ್ಧಿಸಲು ತಯಾರಿ ನಡೆಸಿದ್ದ ರಜನಿಕಾಂತ್ ಅವರಿಗೆ ಆನಾರೋಗ್ಯ ಬಿಡಲಿಲ್ಲ. ಬಳಿಕ ರಾಜಕೀಯದಿಂದ ಹಿಂದೆ ಸರಿದ ತಲೈವ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಶಿವಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅಣ್ಣಾತೆ ಚಿತ್ರದಲ್ಲಿ ಸೂಪರ್ ನಟಿಸುತ್ತಿದ್ದಾರೆ.

  ಇನ್ಯಾವತ್ತೂ Salman Khan ಸಿನಿಮಾ ವಿಮರ್ಶೆ ಮಾಡೋದಿಲ್ಲ ಎಂದ‌ KRK | Filmibeat Kannada

  ಅಣ್ಣಾತೆ ಚಿತ್ರದಲ್ಲಿ ನಯನತಾರಾ, ಮೀನಾ, ಖುಷ್ಬೂ, ಕೀರ್ತಿ ಸುರೇಶ್, ಜಾಕಿ ಶ್ರಾಫ್, ಜಗಪತಿ ಬಾಬು ಪ್ರಕಾಶ್ ರಾಜ್ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ. ಸೂಪರ್ ವೈದ್ಯಕೀಯ ತಪಾಸಣೆಗಾಗಿ ಸದ್ಯದಲ್ಲೇ ಅಮೆರಿಕಗೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ.

  English summary
  Superstar Rajinikanth apparently told Annaatthe team that he wants to do few more film before his retirement.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X