ಅಂದು ಮಾಣಿಕ್ ಬಾಷಾ.. ಈಗ ಮೊಹಿದ್ದೀನ್ ಭಾಯ್: ತಲೈವಾ ಹೊಸ ಅವತಾರಕ್ಕೆ ಫ್ಯಾನ್ಸ್ ಬಹುಪರಾಕ್

ಸೂಪರ್ ಸ್ಟಾರ್ ರಜನಿಕಾಂತ್ 'ಜೈಲರ್' ಚಿತ್ರದಲ್ಲಿ ಹೀರೋ ಆಗಿ ನಟಿಸ್ತಿದ್ದಾರೆ. ಮತ್ತೊಂದು ಕಡೆ ಮಗಳು ಐಶ್ವರ್ಯ ನಿರ್ದೇಶನದ 'ಲಾಲ್ ಸಲಾಂ' ಚಿತ್ರದಲ್ಲಿ ಕೀ ರೋಲ್‌ ಒಂದನ್ನು ಪ್ಲೇ ಮಾಡ್ತಿದ್ದಾರೆ. ಲೈಕಾ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣದ ಈ ಚಿತ್ರದಲ್ಲಿ ರಜನಿಕಾಂತ್ ಲುಕ್ ಹೇಗಿರುತ್ತೆ? ಯಾವ ಪಾತ್ರದಲ್ಲಿ ನಟಿಸ್ತಿದ್ದಾರೆ? ಎನ್ನುವುದು ಈಗ ರಿವೀಲ್ ಆಗಿದೆ.

ತಲೈವಾ 'ಲಾಲ್ ಸಲಾಂ' ಕ್ಯಾರೆಕ್ಟರ್ ಪೋಸ್ಟರ್ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ಮಧ್ಯರಾತ್ರಿ ಪೋಸ್ಟರ್ ರಿವೀಲ್ ಮಾಡಿ ಚಿತ್ರತಂಡ ಗಮನ ಸೆಳೆದಿತ್ತು. ಚಿತ್ರದಲ್ಲಿ ಮೊಹಿದ್ದೀನ್ ಭಾಯ್ ಎನ್ನುವ ಪವರ್ ಫುಲ್‌ ರೋಲ್‌ನಲ್ಲಿ ತಲೈವಾ ಬಣ್ಣ ಹಚ್ಚಿದ್ದಾರೆ. ಸದ್ಯ ಸಿನಿಮಾ ಚಿತ್ರೀಕರಣ ಮುಂಬೈನಲ್ಲಿ ನಡೀತಿದೆ. ಗೇಟ್‌ ವೇ ಇಂಡಿಯಾ ಬಳಿ ನಡೆಯುತ್ತಿರುವ ಗಲಭೆಯ ಹಿನ್ನೆಲೆಯಲ್ಲಿ ಮೊಹಿದ್ದೀನ್ ಭಾಯ್ ಆಗಿ ಶೇರ್ವಾನಿಯಲ್ಲಿ ಸನ್‌ಗ್ಲಾಸ್ ತೊಟ್ಟು ರಜಿನಿಕಾಂತ್ ನಡೆದು ಬರುತ್ತಿರುವ ಪೋಸ್ಟರ್ ನೋಡಬಹುದು.

 Rajinikanth as Moideen Bhai, powerful character poster from lal salaam unveiled

1995ರಲ್ಲಿ ಬಂದಿದ್ದ 'ಬಾಷಾ' ಚಿತ್ರದಲ್ಲಿ ಜನಸ್ನೇಹಿ ಡಾನ್ ಆಗಿ ರಜನಿಕಾಂತ್ ಅಬ್ಬರಿಸಿದ್ದರು. ಅದೇ ಚಿತ್ರದ ಪಾತ್ರವನ್ನು 'ಲಾಲ್ ಸಲಾಂ' ಮೊಹಿದ್ದೀನ್ ಭಾಯ್ ನೆನಪಿಸುತ್ತಿರುವುದು ಸುಳ್ಳಲ್ಲ. 'ಲಾಲ್ ಸಲಾಂ' ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಆಗಿದ್ದು ಕ್ರಿಕೆಟ್ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ. ವಿಷ್ಣು ವಿಶಾಲ್ ಹಾಗೂ ವಿಕ್ರಾಂತ್ ಲೀಡ್ ರೋಲ್‌ಗಳಲ್ಲಿ ನಟಿಸುತ್ತಿದ್ದಾರೆ. ಜೀವಿತಾ ರಾಜಶೇಖರ್ ನಾಯಕಿಯಾಗಿ ಮಿಂಚಲಿದ್ದಾರೆ. ವಿಷ್ಣು ರಂಗಸ್ವಾಮಿ ಛಾಯಾಗ್ರಹಣ ಹಾಗೂ ಎ. ಆರ್ ರಹಮಾನ್ ಸಂಗೀತ ಈ ಚಿತ್ರಕ್ಕಿದೆ. ರಜನಿಕಾಂತ್ ಕಾರಣಕ್ಕೆ ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.

ಸುರೇಶ್ ಕೃಷ್ಣ ನಿರ್ದೇಶನದ 'ಬಾಷಾ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಎರಡು ಶೇಡ್‌ಗಳಿರುವ ಪಾತ್ರದಲ್ಲಿ ಸೂಪರ್ ಸ್ಟಾರ್ ಆರ್ಭಟವನ್ನು ಅಭಿಮಾನಿಗಳು ಇಂದಿಗೂ ಮರೆತ್ತಿಲ್ಲ. 25 ವರ್ಷಗಳ ಹಿಂದೆ ದೇಶ ವಿದೇಶಗಳಲ್ಲಿ ಸಿನಿಮಾ ತೆರೆಗಪ್ಪಳಿಸಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. 'ಬಾಷಾ' ಆಗಿ ರಜನಿಕಾಂತ್ ಮಾಡಿದ್ದ ಮೋಡಿ ಅಷ್ಟಿಷ್ಟಲ್ಲ. ಇಂತದ್ದೇ ಪ್ರಯತ್ನವನ್ನು 'ಕಬಾಲಿ' ಚಿತ್ರದಲ್ಲೂ ಮಾಡಲಾಗಿತ್ತು. ಆದರೆ ಸಂಪೂರ್ಣ ಯಶಸ್ಸು ಸಿಕ್ಕಿರಲಿಲ್ಲ.

 Rajinikanth as Moideen Bhai, powerful character poster from lal salaam unveiled

'ಲಾಲ್ ಸಲಾಂ' ಸಿನಿಮಾ ಚಿತ್ರೀಕರಣಕ್ಕಾಗಿ ಮುಂಬೈನಲ್ಲಿ ತಲೈವಾ ಬೀಡು ಬಿಟ್ಟಿದ್ದಾರೆ. ಇತ್ತೀಚೆಗೆ ರಜನಿಕಾಂತ್ ಮುಂಬೈ ಏರ್‌ಪೋರ್ಟ್‌ನಲ್ಲಿ ಬಹಳ ಸಿಂಪಲ್ ಆಗಿ ಕಾಣಿಸಿಕೊಂಡು ಗಮನ ಸೆಳೆದರು. ಸೂಪರ್ ಸ್ಟಾರ್ ಆದ್ರು ಸರಳ ಉಡುಗೆಯಲ್ಲಿ ಏರ್‌ಪೋರ್ಟ್‌ನಿಂದ ಹೊರ ಬಂದಿದ್ದಾರೆ. ಐಷಾರಾಮಿ ಕಾರುಗಳು ಇದ್ರು ಇನ್ನೋವಾ ಕಾರ್‌ ಏರಿ ಅಭಿಮಾನಿಗಳತ್ತ ಕೈ ಬೀಸಿ ಹೊರಟಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ತಲೈವಾ ಸಿಂಪ್ಲಿಸಿಟಿಗೆ ಉತ್ತರಭಾರತ ಮಂದಿ ಕೂಡ ಫಿದಾ ಆಗಿದ್ದಾರೆ.

ಪಾಲಿಟಿಕ್ಸ್‌ಗೆ ಎಂಟ್ರಿ ಕೊಡಲ್ಲ ಎಂದ ಮೇಲೆ ರಜನಿಕಾಂತ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ನೆಲ್ಸನ್ ನಿರ್ದೇಶನದ 'ಜೈಲರ್' ಸಿನಿಮಾ ರಿಲೀಸ್‌ಗೆ ರೆಡಿ ಆಗ್ತಿದೆ. ಈ ಚಿತ್ರದಲ್ಲಿ ಮೋಹನ್‌ ಲಾಲ್, ಶಿವರಾಜ್‌ಕುಮಾರ್, ಜಾಕಿಶ್ರಾಫ್, ತಮನ್ನಾ, ರಮ್ಯಾಕೃಷ್ಣ ಸೇರಿದಂತೆ ದೊಡ್ಡ ತಾರಾಗಣ ಇದೆ. ಆಗಸ್ಟ್‌ 10ಕ್ಕೆ 'ಜೈಲರ್' ಆರ್ಭಟ ಶುರುವಾಗಲಿದೆ. ಈ ಸಿನಿಮಾ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಕನ್ನಡಕ್ಕೂ ಡಬ್ ಆಗಿ ಬರಲಿದೆ.

 Rajinikanth as Moideen Bhai, powerful character poster from lal salaam unveiled

ಲೈಕಾ ಪ್ರೊಡಕ್ಷನ್ಸ್ ಜೊತೆ ರಜನಿಕಾಂತ್ 2 ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಎರಡಕ್ಕೂ ಸೇರಿ ಭಾರೀ ಮೊತ್ತದ ಸಂಭಾವನೆಯನ್ನು ಪಡೆದುಕೊಂಡಿರುವುದಾಗಿ ವರದಿಯಾಗಿದೆ. 'ಲಾಲ್‌ ಸಲಾಂ' ನಂತರ ಮತ್ತೊಂದು ಚಿತ್ರಕ್ಕೆ ಜ್ಞಾನವೇಲ್ ಆಕ್ಷನ್ ಕಟ್ ಹೇಳಲಿದ್ದಾರೆ. ಇದು ತಲೈವಾ 170ನೇ ಸಿನಿಮಾ ಆಗಿದ್ದು ಶೀಘ್ರದಲ್ಲೇ ಚಿತ್ರೀಕರಣ ಕೂಡ ಆರಂಭವಾಗಲಿದೆ.

More from Filmibeat

English summary
Rajinikanth as Moideen Bhai, powerful character poster from lal salaam unveiled. Directed by Aishwarya Rajinikanth, Lyca Productions is the banner that's bankrolling the film. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X