For Quick Alerts
  ALLOW NOTIFICATIONS  
  For Daily Alerts

  ಮತ್ತೆ ಅಜ್ಜನಾಗುತ್ತಿರುವ ನಟ ರಜನೀಕಾಂತ್

  |

  ನಟ ರಜನೀಕಾಂತ್ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಕಾರಣ ನಟ ರಜನೀಕಾಂತ್ ಮತ್ತೆ ತಾತನಾಗುತ್ತಿದ್ದಾರೆ.

  ರಜನೀಕಾಂತ್ ಎರಡನೇ ಪುತ್ರಿ, ನಿರ್ಮಾಪಕಿ ಸೌಂದರ್ಯ ಗರ್ಭಿಣಿ ಆಗಿದ್ದು, ಮಗುವಿನ ನಿರೀಕ್ಷೆಯಲ್ಲಿದದ್ದಾರೆ. ಹಾಗಾಗಿ ರಜನೀಕಾಂತ್ ಮನೆಯಲ್ಲಿ ಸಂಭ್ರಮದ ವಾತಾವರಣವಿದೆ.

  ನಿರ್ಮಾಪಕಿ, ನಿರ್ದೇಶಕಿಯೂ ಆಗಿರುವ ಸೌಂದರ್ಯ ರಜನೀಕಾಂತ್‌ಗೆ ಈಗಾಗಲೇ ಒಂದು ಮಗು ಇದೆ. 2010 ರಲ್ಲಿ ಉದ್ಯಮಿ ಅಶ್ವಿನ್ ರಾಮ್‌ಕುಮಾರ್ ಅನ್ನು ವಿವಾಹವಾಗಿದ್ದ ಸೌಂದರ್ಯ ಅವರಿಂದ ಒಂದು ಮಗುವನ್ನು ಪಡೆದಿದ್ದಾರೆ. ನಂತರ ಇವರಿಬ್ಬರು ವಿಚ್ಛೇಧನ ಪಡೆದು ಬೇರಾದರು. ನಂತರ 2019ರಲ್ಲಿ ಸೌಂದರ್ಯ ಮತ್ತೆ ಮದುವೆಯಾದರು. ಈಗ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

  2019ರಲ್ಲಿ ಸೌಂದರ್ಯ ರಜನೀಕಾಂತ್ ನಟ, ಫಾರ್ಮಾಸಿಟಿಕಲ್ ಉದ್ಯಮಿ ವಿಶಾಕನ್ ಅನ್ನು 2019ರಲ್ಲಿ ಲೀಲಾ ಪ್ಯಾಲೇಸ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮದುವೆಯಾದರು.

  ರಜನೀಕಾಂತ್‌ರ ಮೊದಲ ಮಗಳು ಐಶ್ವರ್ಯಾ, ನಟ ಧನುಶ್ ಅನ್ನು ವಿವಾಹವಾಗಿದ್ದು ಅವರಿಗೆ ಯಾತ್ರಾ ಮತ್ತು ಲಿಂಗ ಹೆಸರಿನ ಇಬ್ಬರು ಮಕ್ಕಳಿದ್ದಾರೆ.

  ಹೆಣ್ಣುಮಕ್ಕಳು ಬಂದ್ರೆ ಈ ತರ ಶರಣಾಗ್ತಾರೆ ಡಿ ಬಾಸ್

  ನಟ ರಜನೀಕಾಂತ್ ಕಳೆದ ತಿಂಗಳಷ್ಟೆ 'ಅಣ್ಣಾತೆ' ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. 'ಅಣ್ಣಾತೆ' ಚಿತ್ರೀಕರಣ ಸಂದರ್ಭದಲ್ಲಿಯೇ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ರಾಜಕೀಯಕ್ಕೆ ಪ್ರವೇಶಿಸುವ ನಿರ್ಧಾರದಕಿಂದ ಹಿಂದೆ ಸರಿದರು. ನಂತರ 'ಅಣ್ಣಾತೆ' ಚಿತ್ರೀಕರಣ ಮುಗಿಸಿದ ಬಳಿಕ ಅಮೆರಿಕಕ್ಕೆ ತೆರಳಿ ಚಿಕಿತ್ಸೆ ಪಡೆದು ಮರಳಿ ಪ್ರಸ್ತುತ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

  English summary
  Actor Rajinikanth becoming grand father again. Soundarya Rajinikanth expecting baby soon. She already have a son from her first marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X