For Quick Alerts
  ALLOW NOTIFICATIONS  
  For Daily Alerts

  ಶೀಘ್ರದಲ್ಲೇ ಅಭಿಮಾನಿಗಳನ್ನು ಭೇಟಿ ಮಾಡಲಿರೋ ರಜನಿಕಾಂತ್: ಸಹೋದರ ಕೊಟ್ಟ ಸುಳಿವು ಏನು?

  |

  ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಅವರ ಅಭಿಮಾನಿಗಳ ನಡುವೆ ವಿಚಿತ್ರವಾದ ಸಂಬಂಧವಿದೆ. ರಜನಿ ಏನಾದರೂ ಹೊಸ ನಿರ್ಧಾರ ತೆಗೆದುಕೊಳ್ಳುವ ಮುನ್ನ ತಮ್ಮ ಅಭಿಮಾನಿಗಳ ಮುಂದೆ ಪ್ರತ್ಯಕ್ಷ ಆಗುತ್ತಾರೆ. ಅವರೊಂದಿಗೆ ಸಮಾಲೋಚನೆ ನಡೆಸಿ, ಬಳಿಕ ಒಂದು ನಿರ್ಧಾರಕ್ಕೆ ಬರುತ್ತಾರೆ.

  ಸದ್ಯ ಸೂಪರ್‌ಸ್ಟಾರ್ ರಜನಿಕಾಂತ್ ಮತ್ತೆ ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ. ರಾಜಕೀಯ ಪಕ್ಷ ಕಟ್ಟುವ ಸಲುವಾಗಿ ರಜನಿಕಾಂತ್ ತಮ್ಮ ಅಭಿಮಾನಿಗಳನ್ನು ಹಲವು ಬಾರಿ ಭೇಟಿಯಾಗಿದ್ದರು. ಈ ಅವರ ಸಹೋದರ ನೀಡಿದ ಮಾಹಿತಿ ರಜನಿ ಬಗ್ಗೆ ಮತ್ತಷ್ಟು ಕುತೂಹಲ ಕೆರಳಿಸುತ್ತಿದೆ.

  ರಜನಿಕಾಂತ್ ಸದ್ಯಕ್ಕೆ 'ಜೈಲರ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸನ್ ಪಿಕ್ಚರ್ಸ್ ಈ ಸಿನಿಮಾವನ್ನು ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಮಾಡುತ್ತಿದೆ. ತಲೈವಾ ಜೊತೆ ಕಾಲಿವುಡ್‌ನ ದಿಗ್ಗಜರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗ ಮತ್ತೆ ರಜನಿಕಾಂತ್ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ ಎಂದು ಸಹೋದರ ಹೇಳಿದ್ದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

  'ಜೈಲರ್' ಸಿನಿಮಾದಲ್ಲಿ ಬ್ಯುಸಿ

  'ಜೈಲರ್' ಸಿನಿಮಾದಲ್ಲಿ ಬ್ಯುಸಿ

  'ಕೋಲಮಾವು ಕೋಕಿಲ', 'ಡಾಕ್ಟರ್' ಅಂತಹ ಸಿನಿಮಾಗಳನ್ನು ನಿರ್ದೇಶಿಸಿರೋ ನೆಲ್ಸನ್ ದಿಲೀಪ್ ಕುಮಾರ್ ಸೂಪರ್‌ಸ್ಟಾರ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಶೂಟಿಂಗ್ ಆರಂಭ ಆಗಿದೆ. ರಮ್ಯಾ ಕೃಷ್ಣನ್, ತಮನ್ನಾ ಸೇರಿದಂತೆ ಹಲವು ಗಣ್ಯರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ರಜನಿಕಾಂತ್ ಅಭಿಮಾನಿಗಳ ಕಣ್ಣು ಈ ಸಿನಿಮಾ ಮೇಲೆ ಬಿದ್ದಿದೆ. ಈ ಮಧ್ಯೆನೇ ರಜನಿ ಸಹೋದರ ಸತ್ಯನಾರಾಯಣ ರಾವ್ ಹೊಸ ಮಾಹಿತಿಯೊಂದನ್ನು ರವಾನೆ ಮಾಡಿದ್ದಾರೆ.

  ಸತ್ಯನಾರಾಯಣ ರಾವ್ ಹೇಳಿದ್ದೇನು?

  ಸತ್ಯನಾರಾಯಣ ರಾವ್ ಹೇಳಿದ್ದೇನು?

  ರಜನಿಕಾಂತ್ ಸಹೋದರ ಸತ್ಯನಾರಾಯಣ ರಾವ್ ಚೆನ್ನೈನ ವ್ಯಾಸರ್ಪಾಡಿಯಲ್ಲಿ ಬಂದಿದ್ದರು. ಇಲ್ಲಿ ಹೊಸ ಸಮುದಾಯ ಪ್ರತಿಷ್ಠಾನವನ್ನು ಪ್ರಾರಂಭಿಸಿದರು. ಈ ವೇಳೆ ರಜನಿಕಾಂತ್ ಹೆಸರಿನಲ್ಲಿ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ. ಈ ಪ್ರತಿಷ್ಠಾನದ ಸಂಸ್ಥಾಪಕರ ಬಗ್ಗೆ ಅಪಾರ ಗೌರವವಿದೆ. ಈ ಸಂಸ್ಥೆ ಉತ್ತಮವಾಗಿ ಬೆಳೆಯಲೆಂದು ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ." ಎಂದು ರಜನಿ ಸಹೋದರ ಸತ್ಯನಾರಾಯಣ ರಾವ್ ಹೇಳಿದ್ದಾರೆ.

  ರಾಜಕೀಯ ಸೇರುತ್ತಾರಾ ರಜನಿ?

  ರಾಜಕೀಯ ಸೇರುತ್ತಾರಾ ರಜನಿ?

  ಸೂಪರ್‌ಸ್ಟಾರ್ ರಜನಿಕಾಂತ್ ಸದ್ಯ 'ಜೈಲರ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾವನ್ನು ಮುಗಿಸಿ, ರಜನಿಕಾಂತ್ ಅಭಿಮಾನಿಗಳನ್ನು ಭೇಟಿ ಮಾಡಬಹುದು. ಏಪ್ರಿಲ್‌ ಬಳಿಕ ಫ್ಯಾನ್ಸ್ ಅನ್ನು ಭೇಟಿ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತೆ ಎಂದು ಮಾಹಿತಿ ನೀಡಿದ್ದಾರೆ. ಹಾಗೇ ರಜನಿ ರಾಜಕೀಯ ಬರೋದು ಬಿಡೋದು ದೇವರಿಗೆ ಬಿಟ್ಟಿದ್ದು ಎಂದಿದ್ದಾರೆ. ಪ್ರೀತಿ ಹಾಗೂ ವಾತ್ಸಲ್ಯದ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

  'ಅಣ್ಣಾತ್ತೆ ಸೂಪರ್ ಹಿಟ್

  'ಅಣ್ಣಾತ್ತೆ ಸೂಪರ್ ಹಿಟ್

  ಸಿರುತೈ ಶಿವ ನಿರ್ದೇಶನದ 'ಅಣ್ಣಾತ್ತೆ' ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿದ್ದರು. ಕಳೆದ ವರ್ಷ ಈ ಸಿನಿಮಾ ದೀಪಾವಳಿಗೆ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಕೀರ್ತಿ ಸುರೇಶ್, ನಯನತಾರಾ, ಖುಷ್ಬೂ, ಮೀನಾ, ಪಾಂಡಿಯರಾಜನ್ ಸೇರಿದಂತೆ ಹಲವು ದಿಗ್ಗಜರು ನಟಿಸಿದ್ದರು. ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದರೂ, ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಗಿತ್ತು.

  English summary
  Rajinikanth Brother Sathyanarayana Rao Says In An Interview That Super Star Will Meet His Fans Soon.Know More
  Sunday, September 4, 2022, 20:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X