For Quick Alerts
  ALLOW NOTIFICATIONS  
  For Daily Alerts

  ಅಮೆರಿಕಾದಿಂದ ವೈರಮುತ್ತುಗೆ ರಜನಿ ಕರೆ: ಆರೋಗ್ಯ ವರದಿ ನೀಡಿದ ತಲೈವಾ

  |

  ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯ ತಪಾಸಣೆಗಾಗಿ ಅಮೆರಿಕಾ ತೆರಳಿರುವ ವಿಚಾರ ತಿಳಿದಿದೆ. ರಜನಿ ಜೊತೆ ಪತ್ನಿ ಲತಾ, ಮಗಳು ಐಶ್ವರ್ಯ ಧನುಶ್ ಯುಎಸ್‌ನಲ್ಲಿದ್ದಾರೆ. ಯುಎಸ್‌ನಿಂದ ಸ್ನೇಹಿತ, ಗೀತೆರಚನೆಕಾರ ವೈರಮುತ್ತು ಅವರಿಗೆ ದೂರವಾಣಿ ಕರೆ ಮಾಡಿದ ರಜನಿಕಾಂತ್ ಆರೋಗ್ಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

  ತಲೈವಾ ಫೋನ್ ಮಾಡಿದ ವಿಚಾರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ವೈರಮುತ್ತು, ''ರಜನಿ ಆರೋಗ್ಯವಾಗಿದ್ದಾರೆ, ತಪಾಸಣೆ ಚೆನ್ನಾಗಿದೆ ನಡೆದಿದೆ'' ಎಂದು ತಿಳಿಸಿದ್ದಾರೆ. ರಜನಿಕಾಂತ್ ಜೊತೆ ಮಾತನಾಡಿದ ಬಳಿಕ ಅವರ ಧ್ವನಿಯಲ್ಲಿ ವಿಶ್ವಾಸ ಕಾಣ್ತಿತ್ತು ಎಂದು ವೈರಮುತ್ತು ಟ್ವೀಟ್ ಮಾಡಿದ್ದಾರೆ.

  ರಜನಿಕಾಂತ್ ಆರೋಗ್ಯ ರಹಸ್ಯ: ಚರ್ಚೆ ಹುಟ್ಟುಹಾಕಿದ ಕಸ್ತೂರಿ ಶಂಕರ್ ಪೋಸ್ಟ್ರಜನಿಕಾಂತ್ ಆರೋಗ್ಯ ರಹಸ್ಯ: ಚರ್ಚೆ ಹುಟ್ಟುಹಾಕಿದ ಕಸ್ತೂರಿ ಶಂಕರ್ ಪೋಸ್ಟ್

  ''ಯುಎಸ್‌ನಿಂದ ರಜನಿ ಫೋನ್ ಮಾಡಿದ್ರು. ಆರೋಗ್ಯ ತಪಾಸಣೆ ಚೆನ್ನಾಗಿ ಸಾಗಿದೆ ಎಂದು ಹೇಳಿದರು. ಅದನ್ನು ಕೇಳಿ ಬಹಳಷ್ಟು ಖುಷಿ ಕೊಟ್ಟಿದೆ. ಅವರ ಧ್ವನಿಯಲ್ಲಿ ವಿಶ್ವಾಸ ಮತ್ತು ಆರೋಗ್ಯವಾಗಿದ್ದಾರೆ ಎನ್ನುವುದು ಕಾಣ್ತಿತ್ತು. ಅಭಿಮಾನಿಗಳಿಗಾಗಿ ಇದನ್ನು ಟ್ವೀಟ್ ಮಾಡಿ ತಿಳಿಸುತ್ತಿದ್ದೇನೆ'' ಎಂದು ಪೋಸ್ಟ್ ಹಾಕಿದ್ದಾರೆ.

  ಅಂದ್ಹಾಗೆ, ಜೂನ್ 19 ರಂದು ಚೆನ್ನೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪತ್ನಿ ಲತಾ ಜೊತೆ ರಜನಿಕಾಂತ್ ಅಮೆರಿಕಾ ತೆರಳಿದ್ದರು.

  ಇತ್ತೀಚಿಗಷ್ಟೆ ಯುಎಸ್‌ನ ಮೆಯೊ ಕ್ಲಿನಿಕ್‌ ಎದುರು ಮಗಳು ಐಶ್ವರ್ಯ ಜೊತೆ ರಜನಿಕಾಂತ್ ಕಾಣಿಸಿಕೊಂಡಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

  2016ರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್‌ಗೆ ಕಿಡ್ನಿ ಸಂಬಂಧಿತ ಶಸ್ತ್ರ ಚಿಕಿತ್ಸೆ ಆಗಿದೆ ಎಂದು ಹೇಳಲಾಗಿದೆ. ಆರೋಗ್ಯದ ಕಡೆ ಹೆಚ್ಚು ಗಮನ ಕೊಡುವ ಕಾರಣಕ್ಕಾಗಿಯೇ ರಜನಿಕಾಂತ್ ರಾಜಕೀಯಿಂದ ಹಿಂದೆ ಸರಿದರು.

  ಅಣ್ಣಾತ್ತೆ ಚಿತ್ರದಲ್ಲಿ ರಜನಿಕಾಂತ್

  ಸಿರುತೈ ಶಿವ ನಿರ್ದೇಶನದ 'ಅಣ್ಣಾತ್ತೆ' ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ ರಜನಿಕಾಂತ್. ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಕೀರ್ತಿ ಸುರೇಶ್, ನಯನತಾರ, ಖುಷ್ಬೂ, ಮೀನಾ, ಪ್ರಕಾಶ್ ರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ.

  ನಯನತಾರ ಮದುವೆ ವಿಳಂಬಕ್ಕೆ ಕಾರಣ ಕೊಟ್ಟ ಬಾಯ್ ಫ್ರೆಂಡ್ | Filmibeat Kannada
  English summary
  Tamil Superstar Rajinikanth calls to lyricist Vairamuthu and he says check-up went well.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X