For Quick Alerts
  ALLOW NOTIFICATIONS  
  For Daily Alerts

  10 ದಿನಗಳು ಮುಂಚಿತವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ರಜನಿಕಾಂತ್

  |

  ತಲೈವಾ, ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ಡಿಸೆಂಬರ್ ತಿಂಗಳು ಬಂದ್ರೆ ಸಾಕು ತಲೈವಾ ಅಭಿಮಾನಿಗಳು ಹಬ್ಬದಂತೆ ಆಚರಣೆ ಮಾಡುತ್ತ ಸಂಭ್ರಮ, ಸಡಗರ ಪಡುತ್ತಿರುತ್ತಾರೆ. ಡಿಸೆಂಬರ್ ತಿಂಗಳು ತಲೈವಾ ತಿಂಗಳು ಅಂದರೆ ತಪ್ಪಾಗಲ್ಲ. ಯಾಕಂದ್ರೆ ಡಿಸೆಂಬರ್ ಸೂಪರ್ ಸ್ಟಾರ್ ರಜನಿಕಾಂತ್ ಹುಟ್ಟಿದ ತಿಂಗಳು.

  ಡಿಸೆಂಬರ್ 12 ಸೂಪರ್ ಸ್ಟಾರ್ ರಜನಿಕಾಂತ್ ಗೆ ಹುಟ್ಟುಹಬ್ಬದ ಸಂಭ್ರಮ. ರಜನಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ತಿಂಗಳುಗಳಿಂದ ಮುಂಚಿತವಾಗಿಯೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ತಲೈವಾ ಹುಟ್ಟುಹಬ್ಬಕ್ಕೆ ಇನ್ನೇನು ದಿನಗಣನೆ ಪ್ರಾರಂಭವಾಗಿದೆ. ಆಗಲೆ ಅಭಿಮಾನಿಗಳ ಸಡಗರ ಜೋರಾಗಿದೆ.

  ಸೂಪರ್ ಸ್ಟಾರ್ ಸರಳತೆಗೆ ಅಭಿಮಾನಿಗಳ ಸಲಾಮ್ಸೂಪರ್ ಸ್ಟಾರ್ ಸರಳತೆಗೆ ಅಭಿಮಾನಿಗಳ ಸಲಾಮ್

  ಸೂಪರ್ ಸ್ಟಾರ್ ಮನೆಯಲ್ಲಿಯೂ ಪೂಜೆ ಜೋರಾಗಿ ನಡೆಯುತ್ತಿದೆ. ರಜನಿಕಾಂತ್ ಮನೆಯಲ್ಲಿ 69ನೇ ಹುಟ್ಟುಹಬ್ಬವನ್ನು ಡಿಸೆಂಬರ್ 2ರಂದು ಅದ್ದೂರಿಯಾಗಿ ಆಚರಿಸಿದ್ದಾರೆ. ಮನೆಯಲ್ಲಿ ವಿಶೇಷ ಪೂಜೆ ಕಾರ್ಯಗಳು ನೆರವೇರಿದೆ. ಪೂಜೆಯಲ್ಲಿ ರಜನಿಕಾಂತ್ ಮತ್ತು ಪತ್ನಿ ಲತಾ ಜೊತೆಗೆ ಮಗಳು ಸೌಂದರ್ಯ ರಜನಿಕಾಂತ್ ಸೇರಿದಂತೆ ಕುಟುಂಬದವರು ಮತ್ತು ತೀರಾ ಆತ್ಮೀಯರು ಭಾಗಿಯಾಗಿ ಶುಭಕೋರಿದ್ದಾರೆ.

  ಇನ್ನು ಡಿಸೆಂಬರ್ 12ರಂದು ಸೂಪರ್ ಸ್ಟಾರ್ ಬರ್ತಡೇಯನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಲು ಪ್ಲಾನ್ ಮಾಡಿಕೊಂಡಿದ್ದಾರೆ. ಹುಟ್ಟುಹಬ್ಬದ ದಿನವೆ ಸೂಪರ್ ಸ್ಟಾರ್ ಅಭಿನಯದ ಭಾಷಾ ಸಿನಿಮಾ ರೀ-ರಿಲೀಸ್ ಆಗುತ್ತಿದೆ. ಇನ್ನು ರಜಿನಿಕಾಂತ್ ಅಭಿನಯದ ದರ್ಬಾರ್ ಸಿನಿಮಾ ರಿಲೀಸ್ ಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಸೂಪರ್ ಸ್ಟಾರ್ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದಾರೆ. ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ.

  English summary
  Super star Thalaiva Rajinikanth celebrate his 69th birthday on December 2nd in advanced.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X