ಮಗನಿಗಾಗಿ ಒಂದಾದ್ರು ಧನುಷ್-ಐಶ್ವರ್ಯ; ಫೋಟೊ ಹಂಚಿಕೊಂಡ ರಜನಿಕಾಂತ್

ತಮಿಳು ನಟ ಧನುಷ್ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯ ಪ್ರೀತಿಸಿ ಮದುವೆ ಆಗಿದ್ದರು. 20 ವರ್ಷಗಳ ಬಳಿಕ ಜೋಡಿ ಡಿವೋರ್ಸ್ ಪಡೆದು ದೂರಾಗಿದ್ದರು. ಇವರಿಬ್ಬರು ದೂರಾದ ವಿಚಾರ ರಜನಿಕಾಂತ್ ಅಭಿಮಾನಿಗಳಿಗೂ ಬೇಸರ ತಂದಿತ್ತು. ತಲೈವಾ ಎಷ್ಟೇ ಪ್ರಯತ್ನಿಸಿದರೂ ಮಗಳ ಸಂಸಾರವನ್ನು ಉಳಿಸಲು ಸಾಧ್ಯವಾಗಲಿಲ್ಲ.

ಧನುಷ್ ಹಾಗೂ ಐಶ್ವರ್ಯ ಜೋಡಿಗೆ ಲಿಂಗ ಹಾಗೂ ಯಾತ್ರ ಎಂಬ ಇಬ್ಬರೂ ಗಂಡು ಮಕ್ಕಳು. ಪರಸ್ಪರ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರಾಗಿದ್ದರೂ ಮಕ್ಕಳಿಗಾಗಿ ಪಾಲಕರಾಗಿ ಮುಂದುವರೆಯುತ್ತಿದ್ದಾರೆ. ಐಶ್ವರ್ಯ ಮಕ್ಕಳ ಜವಾಬ್ದಾರಿ ವಹಿಸಿಕೊಂಡಿದ್ದರೂ ಕೂಡ ಧನುಷ್ ಸದಾ ಜೊತೆ ನಿಲ್ಲುತ್ತಾರೆ. ಶಾಲಾ ಕಾರ್ಯಕ್ರಮಗಳಲ್ಲಿ ಇಬ್ಬರೂ ಭಾಗಿ ಆಗುತ್ತಾರೆ.

Rajinikanth Celebrates Grandson Yatra s Graduation as Dhanush and Aishwarya Reunite for Special Moment

ಸದ್ಯ ಮಗ ಯಾತ್ರ ಹೈಸ್ಕೂಲ್ ಮುಗಿಸಿ ಕಾಲೇಜು ವಿದ್ಯಾಭ್ಯಾಸಕ್ಕೆ ಮುಂದಾಗಿದ್ದಾನೆ. ಯಾತ್ರ ಹೈಸ್ಕೂಲ್ ಗ್ರಾಜ್ಯುಯೇಷನ್ ಕಾರ್ಯಕ್ರಮದಲ್ಲಿ ಧನುಷ್ ಹಾಗೂ ಐಶ್ವರ್ಯ ಇಬ್ಬರೂ ಭಾಗಿ ಆಗಿದ್ದರು. ಮಗನನ್ನು ತಬ್ಬಿ ಸಂಭ್ರಮಿಸಿದ್ದಾರೆ. ಇದು ಅಭಿಮಾನಿಗಳಿಗೂ ಖುಷಿ ತಂದಿದ್ದು ಸ್ವತಃ ರಜನಿಕಾಂತ್ ಫೋಟೊವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ನಮ್ಮ ಮೊಮ್ಮಗ ಮೊದಲ ಮೈಲಿಗಲ್ಲು ದಾಟಿದ್ದಾನೆ. ಅಭಿನಂದನೆಗಳು ಯಾತ್ರ ಕಂದ" ಎಂದು ಬರೆದುಕೊಂಡಿದ್ದಾರೆ.

ಧನುಷ್ ಹಾಗೂ ಐಶ್ವರ್ಯ ದಂಪತಿ ಎರಡೂ ವರ್ಷಗಳ ಹಿಂದೆ ತಮ್ಮ ವಿಚ್ಛೇದನದ ಬಗ್ಗೆ ಮಾಹಿತಿ ನೀಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ ಈ ಬಗ್ಗೆ ಪೋಸ್ಟ್ ಮಾಡಿದ್ದರು. ಬಳಿಕ ಮತ್ತೆ ಒಂದಾಗುತ್ತಾರೆ ಎಂದೇ ಕೆಲವರು ಭಾವಿಸಿದ್ದರು. ಆದರೆ ಅದು ನಿಜವಾಗಲಿಲ್ಲ. ಇಬ್ಬರೂ ತಮ್ಮ ನಿರ್ಧಾರಗಳಿಂದ ಹಿಂದೆ ಸರಿಯಲಿಲ್ಲ.

ಧನುಷ್ ನಟನೆಯ 'ಕಾದಲ್ ಕೊಂಡೇನ್' ಸಿನಿಮಾ ನೋಡಿ ಐಶ್ವರ್ಯ ಮೆಚ್ಚಿದ್ದರು. ಚಿತ್ರದ ಸ್ಪೆಷಲ್ ಶೋಗೆ ಆಕೆಯನ್ನು ಆಹ್ವಾನಿಸಲಾಗಿತ್ತು. ಅದೇ ಸಮಯದಲ್ಲಿ ಪರಿಚಯವಾಗಿತ್ತು. ಬಳಿಕ ಧನುಷ್‌ಗೆ ಅಭಿನಂದನೆ ತಿಳಿಸಿ ಐಶ್ವರ್ಯ ಹೂವಿನ ಬೊಕ್ಕೆ ಕಳುಹಿಸಿದ್ದರು. ನಂತರ ಇಬ್ಬರ ಫೋನ್ ನಂಬರ್ ಶೇರ್ ಆಗಿತ್ತು. ಹೀಗೆ ಸ್ನೇಹ ಶುರುವಾಗಿತ್ತು. ಬಳಿಕ ಅದು ಪ್ರೀತಿಗೆ ತಿರುಗಿತ್ತು.

ಇಬ್ಬರೂ ಪೋಷಕರ ಒಪ್ಪಿಗೆ ಪಡೆದು ಹಸೆಮಣೆ ಏರಿದ್ದರು. ಬಹಳ ಅದ್ಧೂರಿಯಾಗಿಯೇ ತಲೈವಾ ಮಗಳ ಮದುವೆ ಮಾಡಿದ್ದರು. ಬಳಿಕ ಧನುಷ್ ಹೀರೋ ಆಗಿ ಸಕ್ಸಸ್ ಕಂಡರು. ಮುಂದೆ ಡೈರೆಕ್ಟರ್ ಕ್ಯಾಪ್ ತೊಟ್ಟರು. ಚಿತ್ರ ನಿರ್ಮಾಪಕರು ಆಗಿ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದರು. ಐಶ್ವರ್ಯ ಕೂಡ ತಂದೆ ಹಾಗೂ ಪತಿಯ ಹಾದಿಯಲ್ಲಿ ಚಿತ್ರರಂಗ ಪ್ರವೇಶಿಸಿದರು. ನಿರ್ದೇಶಕಿಯಾಗಿ ಅದೃಷ್ಟ ಪರೀಕ್ಷಿಸಿಕೊಂಡರು.

ಐಶ್ವರ್ಯ ನಿರ್ದೇಶನದ '3' ಚಿತ್ರದಲ್ಲಿ ಧನುಷ್ ಹೀರೊ ಆಗಿ ನಟಿಸಿದ್ದರು. ಚಿತ್ರದ 'ಕೊಲವೆರಿ ಡಿ' ಸಾಂಗ್ ಯಾವ ರೀತಿ ಸದ್ದು ಮಾಡ್ತು ಎನ್ನುವುದು ಗೊತ್ತೇಯಿದೆ. ಇಬ್ಬರೂ ಗಂಡುಮಕ್ಕಳ ಜೊತೆ ಸುಖೀ ಕುಟುಂಬ ಎನ್ನುವಂತಿದ್ದರು. ಆದರೆ 20 ವರ್ಷಗಳ ಬಳಿಕ ಭಿನ್ನಾಭಿಪ್ರಾಯ ಮೂಡಿ ವಿಚ್ಛೇದನ ಪಡೆಯುವ ನಿರ್ಣಯಕ್ಕೆ ಬಂದಿದ್ದರು. ಇದು ಅಭಿಮಾನಿಗಳಿಗೂ ಶಾಕ್ ತಂದಿತ್ತು. ಇಬ್ಬರೂ ದೂರಾಗಲು ಕಾರಣ ಏನು ಎನ್ನುವುದು ಸ್ಪಷ್ಟವಾಗಿಲ್ಲ.

More from Filmibeat

English summary
Superstar Rajinikanth happy for grandson Yatra graduates from high school.
Read more about: kollywood rajinikanth dhanush
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X