For Quick Alerts
  ALLOW NOTIFICATIONS  
  For Daily Alerts

  ಚಿತ್ರೀಕರಣಕ್ಕೆ ಹೊರಟ ಸೂಪರ್ ಸ್ಟಾರ್; ವಿಮಾನದಲ್ಲಿ ಕೇಕ್ ಕತ್ತರಿಸಿ ಸಂಭ್ರಮ

  |

  ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ರಾಜಕೀಯ ಪಕ್ಷ ಘೋಷಣೆ ಮತ್ತು ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಡಿಸೆಂಬರ್ 31ರಂದು ಪಕ್ಷ ಘೋಷಣೆ ಮಾಡುವುದಾಗಿ ಸೂಪರ್ ಸ್ಟಾರ್ ಹೇಳಿದ್ದಾರೆ.

  ಪಕ್ಷ ಘೋಷಣೆಯ ಮುಂಚೆಯೇ ರಜನಿಕಾಂತ್ ಸಿನಿಮಾದ ಚಿತ್ರೀಕರಣ ಮುಗಿಸುವ ನಿರ್ಧಾರ ಮಾಡಿದ್ದಾರೆ. ಸೂಪರ್ ಸ್ಟಾರ್ ಸದ್ಯ ಅಣ್ಣಾತೆ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಲಾಕ್ ಡೌನ್ ಬಳಿಕ ರಜನಿಕಾಂತ್ ಮೊದಲ ಬಾರಿಗೆ ಚಿತ್ರೀಕರಣಕ್ಕೆ ಹೊರಡುತ್ತಿದ್ದಾರೆ. ಅವರಿಗಾಗಿ ವಿಶೇಷ ವಿಮಾನ ವ್ಯವಸ್ಥೆ ಸಹ ಮಾಡಿಸಲಾಗಿದೆ. ರಜನಿಕಾಂತ್ ಸಂಪೂರ್ಣವಾಗಿ ರಾಜಕೀಯದಲ್ಲಿ ಬ್ಯುಸಿಯಾಗುವ ಮೊದಲು ಅಣ್ಣಾತೆ ಚಿತ್ರೀಕರಣ ಮುಗಿಸುವ ಸಲುವಾಗಿ ಈಗಾಗಲೇ ಚಿತ್ರೀಕರಣಕ್ಕೆ ಹೊರಟಿದ್ದಾರೆ. ಮುಂದೆ ಓದಿ..

  ಸೂಪರ್ ಸ್ಟಾರ್ ಜೊತೆ ಹೈದರಾಬಾದ್ ಗೆ ತೆರಳಿದ ನಯನತಾರಾ

  ಸೂಪರ್ ಸ್ಟಾರ್ ಜೊತೆ ಹೈದರಾಬಾದ್ ಗೆ ತೆರಳಿದ ನಯನತಾರಾ

  ಅಣ್ಣಾತೆ ಚಿತ್ರೀಕರಣಕ್ಕಾಗಿ ಸೂಪರ್ ಸ್ಟಾರ್ ವಿಶೇಷ ವಿಮಾನದಲ್ಲಿ ಹೈದರಾಬಾದ್ ಗೆ ತೆರಳಿದ್ದಾರೆ. ಡಿಸೆಂಬರ್ 12ರಂದು ತಮ್ಮ ಜನ್ಮದಿನವನ್ನು ಆಚರಿಸಿಕೊಂಡ ಬೆನ್ನಲ್ಲೇ, ಭಾನುವಾರ ಹೈದರಾಬಾದ್ ಫ್ಲೈಟ್ ಹತ್ತಿದ್ದಾರೆ. ಮಗಳು ಐಶ್ವರ್ಯ ರಜನಿಕಾಂತ್, ನಯನತಾರಾ ಮತ್ತು ತಂಡದೊಂದಿಗೆ ಸೂಪರ್ ಸ್ಟಾರ್ ಸದ್ಯ ಹೈದರಾಬಾದ್ ನಲ್ಲಿ ಬೀಡುಬಿಟ್ಟಿದ್ದಾರೆ.

  ವಿಮಾನದಲ್ಲಿ ಕೇಕ್ ಕತ್ತರಿಸಿದ ರಜನಿಕಾಂತ್

  ವಿಮಾನದಲ್ಲಿ ಕೇಕ್ ಕತ್ತರಿಸಿದ ರಜನಿಕಾಂತ್

  ವಿಶೇಷ ಎಂದರೆ ರಜನಿಕಾಂತ್ ವಿಮಾನ ಹತ್ತುತ್ತಿದ್ದಂತೆ ಸರ್ಪ್ರೈಸ್ ಕಾದಿತ್ತು. ವಿಮಾನ ಸಿಬ್ಬಂದಿ ರಜನಿಕಾಂತ್ ಹುಟ್ಟುಹಬ್ಬದ ವಿಶೇಷವಾಗಿ ಕೇಕ್ ಕತ್ತರಿಸಿ ವಿಮಾನದಲ್ಲೇ ಹುಟ್ಟುಹಬ್ಬ ಸಂಭ್ರಮಿಸಿದ್ದಾರೆ. ನಯನತಾರಾ ಮತ್ತು ಪುತ್ರಿ ಐಶ್ವರ್ಯ ಸೇರಿದಂತೆ ವಿಮಾನ ಸಿಬ್ಬಂದಿ ವಿಶ್ ಮಾಡಿ ಸಂತಸ ಪಟ್ಟಿದ್ದಾರೆ.

  ಹೈದರಾಬಾದ್ ನಲ್ಲಿ ಚಿತ್ರೀಕರಣ

  ಸೂಪರ್ ಸ್ಟಾರ್ ವಿಮಾನದಲ್ಲಿ ಕೇಕ್ ಕತ್ತರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಹುನಿರೀಕ್ಷೆಯ ಅಣ್ಣಾತೆ ಸಿನಿಮಾದ ಚಿತ್ರೀಕರಣ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪ್ರಾರಂಭವಾಗಿದೆ. ಚಿತ್ರಕ್ಕೆ ಶಿವ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಉಹಾಪೋಹಗಳಿಗೆ ತೆರೆ ಎಳೆದ ಮಾಧವನ್ | Madhavan | Filmibeat Kannada
  ಚಿತ್ರದಲ್ಲಿ ನಯನತಾರಾ, ಖುಷ್ಬೂ, ಮೀನಾ, ಕೀರ್ತಿ ಸುರೇಶ್ ನಟನೆ

  ಚಿತ್ರದಲ್ಲಿ ನಯನತಾರಾ, ಖುಷ್ಬೂ, ಮೀನಾ, ಕೀರ್ತಿ ಸುರೇಶ್ ನಟನೆ

  ನಿರ್ದೇಶಕ ಶಿವ ಈ ಮೊದಲು ವಿಸ್ವಾಸಂ, ವೇದಾಲಂ, ವೀರ, ವಿವೇಗಂ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಸೂಪರ್ ಸ್ಟಾರ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಸೂಪರ್ ಸ್ಟಾರ್ ಜೊತೆ ನಯನತಾರಾ, ಖುಷ್ಬೂ, ಮೀನಾ, ಕೀರ್ತಿ ಸುರೇಶ್ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಸೂಪರ್ ಸ್ಟಾರ್ ರಾಜಕೀಯದಲ್ಲಿ ಬ್ಯುಸಿಯಾಗುವ ಮೊದಲೇ ಚಿತ್ರೀಕರಣ ಮುಗಿಸುವ ಪ್ಲಾನ್ ಮಾಡಿದೆ.

  English summary
  Super star Rajanikanth cuts birthday cake in Flight.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X