twitter
    For Quick Alerts
    ALLOW NOTIFICATIONS  
    For Daily Alerts

    ರಾಜಕೀಯಕ್ಕೆ ರಜನಿಕಾಂತ್ ಗುಡ್ ಬೈ: ವೈರಲ್ ಆಗಿರುವ ಪತ್ರದಲ್ಲಿ ಏನಿದೆ?

    |

    ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಪಕ್ಷ ಸ್ಪರ್ಧೆ ಮಾಡಲಿದೆ, ಅದಕ್ಕಾಗಿ ರಜನಿ ತಯಾರಿ ನಡೆಸುತ್ತಿದ್ದಾರೆ. ಮೂರು ವರ್ಷಗಳ ಹಿಂದೆಯೇ ಈ ಕುರಿತು ರಜನಿಕಾಂತ್ ಅಧಿಕೃತವಾಗಿ ಹೇಳಿದ್ದರು.

    ಇದೀಗ, ಇದ್ದಕ್ಕಿದ್ದಂತೆ ರಜನಿಕಾಂತ್ ರಾಜಕೀಯ ಪ್ರವೇಶ ಮಾಡುತ್ತಿಲ್ಲ. ಅವರ ಆರೋಗ್ಯ ಸ್ಥಿತಿ ಸರಿಯಿಲ್ಲದ ಕಾರಣ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಅದಕ್ಕೆ ಕಾರಣ, ಸ್ವತಃ ರಜನಿ ಅವರೇ ಅಭಿಮಾನಿಗಳಿಗೆ ಬರೆದಿದ್ದಾರೆ ಎನ್ನಲಾದ ಪತ್ರ. ಈ ಪತ್ರ ವೈರಲ್ ಆಗುತ್ತಿದ್ದಂತೆ ರಜನಿ ಅಧಿಕೃತವಾಗಿ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ರಜನಿ ಏನಂದ್ರು? ಮುಂದೆ ಓದಿ....

    ಆಸ್ತಿ ತೆರಿಗೆ ವಿವಾದ: ಮೌನ ಮುರಿದ ಸೂಪರ್ ಸ್ಟಾರ್ ರಜನಿಕಾಂತ್ಆಸ್ತಿ ತೆರಿಗೆ ವಿವಾದ: ಮೌನ ಮುರಿದ ಸೂಪರ್ ಸ್ಟಾರ್ ರಜನಿಕಾಂತ್

    ಈ ಪತ್ರ ನಿಜವಲ್ಲ ಎಂದ ರಜನಿ

    ಈ ಪತ್ರ ನಿಜವಲ್ಲ ಎಂದ ರಜನಿ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪತ್ರದ ಬಗ್ಗೆ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ರಜನಿಕಾಂತ್ ಸ್ಪಷ್ಟನೆ ನೀಡಿದ್ದಾರೆ. ''ಆ ಪತ್ರ ನಕಲಿ ಹಾಗೂ ಅದರಲ್ಲಿ ಹೇಳಲಾಗಿರುವ ಅಂಶಗಳು ಸತ್ಯವಲ್ಲ, ಆದರೆ, ಆರೋಗ್ಯ ಕುರಿತು ಮಾಹಿತಿ ಮಾತ್ರ ನಿಜ'' ಎಂದಿದ್ದಾರೆ.

    ರಜನಿಕಾಂತ್ ಸ್ಪಷ್ಟನೆಯ ಸಂಕ್ಷಿಪ್ತ ವಿವರ

    ರಜನಿಕಾಂತ್ ಸ್ಪಷ್ಟನೆಯ ಸಂಕ್ಷಿಪ್ತ ವಿವರ

    ''ನನ್ನ ಹೇಳಿಕೆಯಂತೆ ಕಂಡುಬರುವ ಪತ್ರವನ್ನು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅದು ನನ್ನ ಹೇಳಿಕೆಯಲ್ಲ ಎಂದು ಎಲ್ಲರಿಗೂ ತಿಳಿದಿದೆ. ಅದೇನೇ ಇದ್ದರೂ, ನನ್ನ ಆರೋಗ್ಯದ ಬಗ್ಗೆ ಮತ್ತು ನನ್ನ ವೈದ್ಯರ ಸಲಹೆಯೆಲ್ಲವೂ ನಿಜ. ನನ್ನ ರಜಿನಿ ಮಕ್ಕಳ್ ಮಂದಿರ ಸದಸ್ಯರೊಂದಿಗೆ ಸಮಾಲೋಚಿಸಿದ ನಂತರ ಸರಿಯಾದ ಸಮಯದಲ್ಲಿ ನನ್ನ ರಾಜಕೀಯ ನಿಲುವಿನ ಬಗ್ಗೆ ಪ್ರಕಟಣೆ ನೀಡುತ್ತೇನೆ'' ಎಂದು ಹೇಳಿದ್ದಾರೆ.

    ಸೂಪರ್ ಸ್ಟಾರ್ ರಜನಿಕಾಂತ್ ಕಂಡಕ್ಟರ್: ಹಳೇ ಫೋಟೋ ವೈರಲ್ಸೂಪರ್ ಸ್ಟಾರ್ ರಜನಿಕಾಂತ್ ಕಂಡಕ್ಟರ್: ಹಳೇ ಫೋಟೋ ವೈರಲ್

    ವೈರಲ್ ಆದ ಪತ್ರದಲ್ಲಿ ಏನಿತ್ತು?

    ವೈರಲ್ ಆದ ಪತ್ರದಲ್ಲಿ ಏನಿತ್ತು?

    ''ನಾನು ನನ್ನ ಜೀವನಕ್ಕೆ ಹೆದರುವುದಿಲ್ಲ. ಜನರ ಏಳಿಗೆ ಬಗ್ಗೆ ಹೆಚ್ಚು ಕಾಳಜಿ ಇದೆ. ನಾನು ಭರವಸೆ ನೀಡಿದಂತೆ ರಾಜಕೀಯ ಬದಲಾವಣೆಯನ್ನು ಸಾಧಿಸಲು, ಸಕ್ರಿಯವಾಗಿ ತೊಡಗಿಕೊಳ್ಳಬೇಕಾಗಿದೆ. ನನ್ನ ಆರೋಗ್ಯ ಹದಗೆಟ್ಟರೆ, ಅದು ನನಗೆ ಸವಾಲು ಆಗಬಹುದು. ಜನವರಿ 15ರೊಳಗೆ ನಾನು ಪಕ್ಷ ಪ್ರಾರಂಭಿಸಬೇಕು. ಅದಕ್ಕೆ ಡಿಸೆಂಬರ್‌ನಲ್ಲಿಯೇ ನನ್ನ ನಿರ್ಧಾರ ಘೋಷಿಸಬೇಕಿದೆ. ಆಗಿನ ಪರಿಸ್ಥಿತಿಯಲ್ಲಿ ನಾನು ಏನು ಮಾಡಬೇಕೆಂದು ನಿರ್ಧರಿಸಲು ನನ್ನ ಅಭಿಮಾನಿಗಳಿಗೆ ಮತ್ತು ಜನರಿಗೆ ಬಿಡುತ್ತೇನೆ. ಜನರ ತೀರ್ಪು ದೇವರ ತೀರ್ಪು, ಜೈ ಹಿಂದ್'' ಎಂದು ಆ ಪತ್ರದಲ್ಲಿ ಹೇಳಲಾಗಿದೆ.

    Recommended Video

    ಮತ್ತೆ ನಿಖಿಲ್ ಎದುರಾಗಿ ನಿಂತ ಡಿ ಬಾಸ್ ದರ್ಶನ್ | Filmibeat Kannada
    ಮೂರು ವರ್ಷ ಕಳೆದರೂ ಪಕ್ಷ ಘೋಷಣೆಯಾಗಿಲ್ಲ?

    ಮೂರು ವರ್ಷ ಕಳೆದರೂ ಪಕ್ಷ ಘೋಷಣೆಯಾಗಿಲ್ಲ?

    2017ರ ಡಿಸೆಂಬರ್‌ ತಿಂಗಳಿನಲ್ಲಿ ರಜನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಮಾಹಿತಿ ನೀಡಿದ್ದರು. ಅಧಿಕೃತವಾಗಿ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದರು. ಆದರೆ, ಮೂರು ವರ್ಷ ಕಳೆದರೂ ಆ ಬಗ್ಗೆ ಯಾವುದೇ ಬೆಳವಣಿಗೆ ಕಂಡು ಬಂದಿಲ್ಲ. ರಜನಿಯ ಅಭಿಮಾನಿ ಸಂಘ, ಸದ್ಯಕ್ಕೆ ರಾಜಕೀಯ ಸಂಘಟನೆಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ನಡುವೆ ರಜನಿ ರಾಜಕೀಯ ಪ್ರವೇಶ ಅನುಮಾನ ಎಂಬ ಮಾತು ಸಹ ಚರ್ಚೆಯಲ್ಲಿತ್ತು. ಈಗ ಸ್ವತಃ ರಜನಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    English summary
    Rajinikanth says viral note hinting at him quitting politics is fake but information about his health (mentioned in the letter) is true.
    Thursday, October 29, 2020, 16:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X