For Quick Alerts
  ALLOW NOTIFICATIONS  
  For Daily Alerts

  ಕಲೆಕ್ಷನ್ ನಲ್ಲಿ ಹಿಂದೆ ಬಿದ್ದಿಲ್ಲ ರಜನಿಕಾಂತ್ 'ದರ್ಬಾರ್': 4ನೇ ದಿನದ ಗಳಿಕೆ ಎಷ್ಟು?

  |

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ದರ್ಬಾರ್ ಸಿನಿಮಾ ರಿಲೀಸ್ ಆಗಿ ನಾಲ್ಕು ದಿನಗಳಾಗಿದೆ. ಜನವರಿ 9ರಂದು ದರ್ಬಾರ್ ದೇಶ ವಿದೇಶಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿತ್ತು. ನಾಲ್ಕನೆ ದಿನವು ದರ್ಬಾರ್ ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ.

  ದರ್ಬಾರ್ 'ನಿಜವಾದ ಕಲೆಕ್ಷನ್' ಬಹಿರಂಗ: ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?ದರ್ಬಾರ್ 'ನಿಜವಾದ ಕಲೆಕ್ಷನ್' ಬಹಿರಂಗ: ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?

  ಕೋಟಿ ಕೋಟಿ ಬಾಚಿಕೊಳ್ಳುತ್ತಿರುವ ದರ್ಬಾರ್ ವಿಜಯ್ ಅಭಿನಯದ ಬಿಗಿಲ್ ಸಿನಿಮಾ ದಾಖಲೆ ಬ್ರೇಕ್ ಮಾಡಲು ಸಾಧ್ಯವಾಗಿಲ್ಲ. ಆದರೂ ಈ ವೀಕೆಂಡ್ ನಲ್ಲಿ ದರ್ಬಾರ್ ಅತ್ಯುತ್ತಮ ಕಲೆಕ್ಷನ್ ಮಾಡಿದೆ. ಇನ್ನು ಸಂಕ್ರಾಂತಿ ರಜೆ ಇರುವ ಕಾರಣ ಕಲೆಕ್ಷನ್ ವಿಚಾರದಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ತೆಲುಗಿನ ಬಹುನಿರೀಕ್ಷೆಯ ಸರಿಲೇರು ನೀಕೆವ್ವರು ಮತ್ತು ಅಲಾ ವೈಕುಂಠಪುರಂ ಲೋ ಸಿನಿಮಾ ಅಬ್ಬರದ ನಡುವೆಯೂ ದರ್ಬಾರ್ ಉತ್ತಮ ಕಲೆಕ್ಷನ್ ಮಾಡುತ್ತ ಮುನ್ನುಗ್ಗುತ್ತಿದೆ. ಅಂದ್ಹಾಗೆ ದರ್ಬಾರ್ ನಾಲ್ಕನೆ ದಿನದ ಕಲೆಕ್ಷನ್ ಎಷ್ಟು? ಮುಂದೆ ಓದಿ..

  ನಾಲ್ಕನೆ ದಿನ ಚೆನ್ನೈ ಕಲೆಕ್ಷನ್

  ನಾಲ್ಕನೆ ದಿನ ಚೆನ್ನೈ ಕಲೆಕ್ಷನ್

  ದರ್ಬಾರ್ ಮೊದಲ ದಿನವೆ ಚೆನ್ನೈನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ಯಶಸ್ವಿ ಪ್ರದರ್ಶನ ಕಾಣುತ್ತ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ನಾಲ್ಕನೆ ದಿನ ದರ್ಬಾರ್ 7.28 ಕೋಟಿ ಬಾಚಿಕೊಂಡಿದೆ. ಈ ಬಗ್ಗೆ ವಿಶ್ಲೇಶಕ ರಮೇಶ್ ಬಾಲ ಸಾಮಾಜಿಕ ಜಾಲತಾಣದಲ್ಲಿ ಅಪ್ ಡೇಟ್ ಮಾಡಿದ್ದಾರೆ.

  ದರ್ಬಾರ್ ಸಿನಿಮಾ ಈ ಪೊಲೀಸ್ ಅಧಿಕಾರಿಯ ಜೀವನಕಥೆ!ದರ್ಬಾರ್ ಸಿನಿಮಾ ಈ ಪೊಲೀಸ್ ಅಧಿಕಾರಿಯ ಜೀವನಕಥೆ!

  ವಿದೇಶದಲ್ಲಿ ರಜನಿ ದರ್ಬಾರ್

  ವಿದೇಶದಲ್ಲಿ ರಜನಿ ದರ್ಬಾರ್

  ಯು ಎಸ್ ಎ ನಲ್ಲಿ ದರ್ಬಾರ್ 1.7 ಕೋಟಿ ಬಾಚಿಕೊಂಡಿದೆ. ಇನ್ನು ಮಹೇಶ್ ಬಾಬು ಅಭಿನಯದ ಸರಿಲೇರು ನೀಕೆವ್ವರು ಸಿನಿಮಾ 83 ಲಕ್ಷ ಮತ್ತು ಅಲ ವೈಕುಂಠಪುರಂ ಲೋ 76 ಲಕ್ಷ ಬಾಚಿಕೊಂಡಿದೆ. ಯು.ಕೆಯಲ್ಲಿ ದರ್ಬಾರ್ 1.88 ಕೋಟಿ ಕಲೆಕ್ಷನ್ ಮಾಡಿದೆ. ದರ್ಬಾರ್ ಸಿನಿಮಾ ನಾಲ್ಕನೆ ದಿನವು ಉತ್ತಮ ಕಲಕ್ಷನ್ ಮಾಡಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

  ಬೇರೆ ರಾಜ್ಯಗಳಲ್ಲಿ ದರ್ಬಾರ್ ಗಳಿಕೆ

  ಬೇರೆ ರಾಜ್ಯಗಳಲ್ಲಿ ದರ್ಬಾರ್ ಗಳಿಕೆ

  ಎ.ಆರ್ ಮುರುಗದಾಸ್ ಸಾರಥ್ಯದಲ್ಲಿ ಮೂಡಿಬಂದ ದರ್ಬಾರ್ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಉತ್ತಮ ಗಳಿಕೆ ಮಾಡಿದೆ. ಈ ಎಲ್ಲಾ ರಾಜ್ಯಗಳಲ್ಲಿ ಒಟ್ಟಾರೆ 7 ಕೋಟಿ ಕಲೆಕ್ಷನ್ ಮಾಡಿರುವ ಸಾಧ್ಯತೆ ಇದೆ.

  'ದರ್ಬಾರ್' ಕಲೆಕ್ಷನ್: 'ಸರ್ಕಾರ್'-'2.0' ಸಿನಿಮಾ ರೆಕಾರ್ಡ್ ಬ್ರೇಕ್ ಮಾಡುವಲ್ಲಿ 'ದರ್ಬಾರ್' ವಿಫಲ'ದರ್ಬಾರ್' ಕಲೆಕ್ಷನ್: 'ಸರ್ಕಾರ್'-'2.0' ಸಿನಿಮಾ ರೆಕಾರ್ಡ್ ಬ್ರೇಕ್ ಮಾಡುವಲ್ಲಿ 'ದರ್ಬಾರ್' ವಿಫಲ

  ಒಟ್ಟಾರೆ ಕಲೆಕ್ಷನ್

  ಒಟ್ಟಾರೆ ಕಲೆಕ್ಷನ್

  ಒಟ್ಟಾರೆ ದರ್ಬಾರ್ ನಾಲ್ಕನೆ 30 ರಿಂದ 35 ಕೋಚಿ ಕಲೆಕ್ಷನ್ ಮಾಡಿರುವ ಸಾಧ್ಯತೆ ಇದೆ. ದರ್ಬಾರ್ ಒಟ್ಟಾರೆ ಇದುವರೆಗೂ 60 ಕೋಟಿ ಬಾಚಿಕೊಂಡಿರ ಬಹುದು ಎಂದು ಅಂದಾಜಿಸಲಾಗಿದೆ. ಸಧ್ಯದಲ್ಲೇ ದರ್ಬಾರ್ 100 ಕೋಟಿ ಕ್ಲಬ್ ಸೇರಲಿದೆ. ಇನ್ನು ಸಂಕ್ರಾಂತಿ ರಜೆ ಇರುವ ಕಾರಣ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

  English summary
  Super star Rajinikanth starrer Darbar Cinema has made a good collection on The 4th day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X