twitter
    For Quick Alerts
    ALLOW NOTIFICATIONS  
    For Daily Alerts

    'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನು ಬಸ್ ಡ್ರೈವರ್‌ಗೆ ಅರ್ಪಿಸಿದ ರಜನೀಕಾಂತ್

    |

    ಸಿನಿಮಾ ರಂಗದಲ್ಲಿ ಸಲ್ಲಿಸಿದ ಬಹುಮೂಲ್ಯ ಸೇವೆ ಗುರುತಿಸಿ ಕೇಂದ್ರ ಸರ್ಕಾರ ನೀಡುವ ಗೌರವ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ. ಈ ವರೆಗೆ ಈ ಗೌರವವನ್ನು 51 ಮಂದಿಗೆ ನೀಡಲಾಗಿದೆ. 51ನೇ ನಟ ರಜನೀಕಾಂತ್.

    Recommended Video

    ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನು ಬಸ್ ಡ್ರೈವರ್‌ಗೆ ಅರ್ಪಿಸಿದ ರಜನೀಕಾಂತ್ | Filmibeat Kannada

    ಪೃಥ್ವಿರಾಜ್‌ಕುಮಾರ್, ರಾಜ್‌ ಕಪೂರ್, ಅಕ್ಕಿನೇನಿ ನಾಗೇಶ್ವರರಾವ್, ಡಾ.ರಾಜ್‌ಕುಮಾರ್, ಸತ್ಯಜಿತ್ ರೇ ಅಂಥ ಮಹಾನ್ ವ್ಯಕ್ತಿಗಳಿಗೆ ಈ ಗೌರವ ಸಂದಿದೆ. ಇದೀಗ ರಜನೀಕಾಂತ್ ಅವರಿಗೆ ಈ ಪರಮೋಚ್ಛ ಗೌರವ ನೀಡಲಾಗಿದೆ.

    ಪ್ರಧಾನಿ ಮೋದಿಗೆ ಹೃದಯಪೂರ್ವಕ ಧನ್ಯವಾದ ತಿಳಿಸಿದ ರಜನಿಕಾಂತ್ಪ್ರಧಾನಿ ಮೋದಿಗೆ ಹೃದಯಪೂರ್ವಕ ಧನ್ಯವಾದ ತಿಳಿಸಿದ ರಜನಿಕಾಂತ್

    ರಜನೀಕಾಂತ್ ಅವರಿಗೆ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನು ಘೋಷಿಸಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದರು. ನಂತರ ಪ್ರಧಾನಿ ಮೋದಿ ಸೇರಿದಂತೆ ಹಲವು ರಾಜಕೀಯ, ಸಿನಿಮಾ ದಿಗ್ಗಜರು ರಜನೀಕಾಂತ್ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

    ಇಂಥ ಗೌರವಾನ್ವಿತ ಪ್ರಶಸ್ತಿಗೆ ಭಾಜನವಾಗಿದ್ದಕ್ಕೆ ಧನ್ಯವಾದ ಅರ್ಪಿಸಿರುವ ನಟ ರಜನೀಕಾಂತ್, ಈ ಪ್ರತಿಷ್ಟಿತ ಪ್ರಶಸ್ತಿಯನ್ನು ತಮ್ಮ ಆತ್ಮೀಯ ಗೆಳೆಯ, ಬಸ್ ಡ್ರೈವರ್‌ ಆಗಿದ್ದ ರಾವ್ ಬಹದ್ದೂರ್‌ಗೆ ಅರ್ಪಿಸಿದ್ದಾರೆ.

    ಬೆಂಗಳೂರಿನಲ್ಲಿ ಬಸ್ ಡ್ರೈವರ್ ಆಗಿದ್ದ ರಾವ್ ಬಹದ್ದೂರ್

    ಬೆಂಗಳೂರಿನಲ್ಲಿ ಬಸ್ ಡ್ರೈವರ್ ಆಗಿದ್ದ ರಾವ್ ಬಹದ್ದೂರ್

    ಹೌದು, ರಜನೀಕಾಂತ್ ಅವರು ಜೀವಮಾನ ಸಾಧನೆಗೆ ಪಡೆದ 'ದಾದಾ ಸಾಹೇಬ್ ಫಾಲ್ಕೆ' ಗೌರವವನ್ನು ಬಸ್ ಡ್ರೈವರ್ ಹಾಗೂ ಜೀವದ ಗೆಳೆಯ ರಾವ್ ಬಹದ್ದೂರ್ ಅವರಿಗೆ ಅರ್ಪಿಸಿದ್ದಾರೆ. ರಜನೀಕಾಂತ್ ಅವರು ಬೆಂಗಳೂರಿನ ಬಿಟಿಎಸ್‌ (ಈಗಿನ ಬಿಎಂಟಿಸಿ) ಬಸ್ ಕಂಡಕ್ಟರ್ ಆಗಿದ್ದಾಗ ಆ ಬಸ್‌ನ ಚಾಲಕ ಆಗಿದ್ದಿದ್ದು ರಾವ್ ಬಹದ್ದೂರ್. ಆಗ ಶಿವಾಜಿ ರಾವ್ ಗಾಯಕ್‌ವಾಡ್ ಆಗಿದ್ದ ರಜನೀಕಾಂತ್‌ರ ಪ್ರತಿಭೆಯನ್ನು ಮೊದಲು ಗುರುತಿಸಿ ನಟನಾಗುವಂತೆ ಪ್ರೇರೇಪಿಸಿ ಸಹಾಯ ಮಾಡಿದ್ದು ಇದೇ ರಾವ್ ಬಹದ್ದೂರ್.

    'ನನ್ನನ್ನು ನಟನನ್ನಾಗಿಸಲು ತ್ಯಾಗ ಮಾಡಿದ್ದ ನನ್ನ ಅಣ್ಣ '

    'ನನ್ನನ್ನು ನಟನನ್ನಾಗಿಸಲು ತ್ಯಾಗ ಮಾಡಿದ್ದ ನನ್ನ ಅಣ್ಣ '

    ರಾವ್ ಬಹದ್ದೂರ್ ಮಾತ್ರವೇ ಅಲ್ಲದೆ ಇನ್ನೂ ಕೆಲವರಿಗೆ ಈ ಪ್ರಶಸ್ತಿಯನ್ನು ಅರ್ಪಿಸಿದ್ದಾರೆ ರಜನೀಕಾಂತ್. 'ನನ್ನ ಸಹೋದರ ಸತ್ಯನಾರಾಯಣ ರಾವ್ ಗಾಯಕ್ವಾಡ್‌ಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತಿದ್ದೇನೆ. ನಾವು ಬಡತನದಲ್ಲಿದ್ದಾಗಲೂ ನನ್ನನ್ನು ನಟನನ್ನಾಗಿ ಮಾಡಲು ಅವರು ಬಹಳ ತ್ಯಾಗಗಳನ್ನು ಮಾಡಿದ್ದಾರೆ' ಎಂದಿದ್ದಾರೆ ರಜನೀಕಾಂತ್.

    ಸೂಪರ್ ಸ್ಟಾರ್ ರಜನಿಕಾಂತ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಸೂಪರ್ ಸ್ಟಾರ್ ರಜನಿಕಾಂತ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

    ಸಿನಿಮಾಕ್ಕೆ ಪರಿಚಯಿಸಿದ ಗುರುಗಳನ್ನು ನೆನೆದ ರಜನೀಕಾಂತ್

    ಸಿನಿಮಾಕ್ಕೆ ಪರಿಚಯಿಸಿದ ಗುರುಗಳನ್ನು ನೆನೆದ ರಜನೀಕಾಂತ್

    ''ನನ್ನನ್ನು ಸಿನಿಮಾಕ್ಕೆ ರಜನೀಕಾಂತ್ ಆಗಿ ಪರಿಚಯಿಸಿ ನನ್ನ ಗುರು ಕೆ.ಬಾಲಚಂದರ್ ಅವರಿಗೆ ಹಾಗೂ ಈ ಪ್ರಶಸ್ತಿಯನ್ನು ನನ್ನೆಲ್ಲಾ ನಿರ್ದೇಶಕರಿಗೆ, ನಿರ್ಮಾಪಕರಿಗೆ, ತಂತ್ರಜ್ಞರಿಗೆ, ಸಹ ನಟ-ನಟಿಯರಿಗೆ, ನನ್ನನ್ನು ಈ ಹಂತಕ್ಕೆ ತಂದ ಚಿನ್ನದಂಥ ತಮಿಳು ಜನಕ್ಕೆ ಹಾಗೂ ವಿಶ್ವದಾದ್ಯಂತ ಇರುವ ನನ್ನ ಅಭಿಮಾನಿಗಳಿಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತಿದ್ದೇನೆ'' ಎಂದಿದ್ದಾರೆ ರಜನೀಕಾಂತ್.

    ಕಮಲ್‌ ಹಾಸನ್ ಅನ್ನು ನೆನಪಿಸಿಕೊಂಡ ರಜನೀಕಾಂತ್

    ಕಮಲ್‌ ಹಾಸನ್ ಅನ್ನು ನೆನಪಿಸಿಕೊಂಡ ರಜನೀಕಾಂತ್

    ತಮಿಳುನಾಡಿನ ಸಿಎಂ ಪಳನಿಸ್ವಾಮಿ, ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಂ, ವಿರೋಧ ಪಕ್ಷದ ಮುಖಂಡ ಸ್ಟಾಲಿನ್, ಆತ್ಮೀಯ ಗೆಳೆಯ ಕಮಲ್‌ ಹಾಸನ್, ಇಡೀ ತಮಿಳು ಚಿತ್ರರಂಗ, ಎಲ್ಲ ಹಿತೈಶಿಗಳನ್ನೂ ಈ ಸಂತಸದ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ ರಜನೀಕಾಂತ್.

    English summary
    Rajinikanth dedicated Dada Saheb Phalke award to his bus driver friend Rao Bahaddur, his brother Sathyanarayn Rao Gaikwad and his guru K Balachandar.
    Friday, April 2, 2021, 9:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X