ರಜನೀಕಾಂತ್ ರಾಜಕೀಯ ಪ್ರವೇಶ ಅವರ ಕುಟುಂಬದವರಿಗೆ ಇಷ್ಟವಿರಲಿಲ್ಲ!
ರಾಜಕೀಯ ಪ್ರವೇಶ ಮಾಡುತ್ತೇನೆ, ಸ್ವಂತದ ಪಕ್ಷ ಕಟ್ಟಿ, ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದ ರಜನೀಕಾಂತ್, ತಾವು ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಹೇಳಿದ್ದಾರೆ.
Recommended Video
ಒಂದು ತಿಂಗಳ ಹಿಂದಷ್ಟೆ, ರಾಜಕೀಯ ಪ್ರವೇಶಿಸುವುದಾಗಿ ಹೇಳಿದ್ದ ರಜನೀಕಾಂತ್, ಆರೋಗ್ಯದ ಕಾರಣ ನೀಡಿ ರಾಜಕೀಯದಿಂದ ದೂರ ಸರಿದಿದ್ದಾರೆ. ರಾಜಕೀಯ ಪ್ರವೇಶಿಸದಿರಲು ತಾವು ಮಾಡಿದ ನಿರ್ಧಾರಕ್ಕೆ ಆರೋಗ್ಯ ಕಾರಣ ಎಂದು ರಜನೀಕಾಂತ್ ಹೇಳಿದ್ದಾರೆ. ಆದರೆ ರಜನೀಕಾಂತ್ ರಾಜಕೀಯ ಪ್ರವೇಶ ಅವರ ಕುಟುಂಬದವರಿಗೂ ಇಷ್ಟವಿರಲಿಲ್ಲವಂತೆ.
'ನಟ ರಜನೀಕಾಂತ್ ರಾಜಕೀಯ ಪ್ರವೇಶಿಸುವುದು ಸ್ವತಃ ಅವರ ಕುಟುಂಬದವರಿಗೆ ಇಷ್ಟವಿರಲಿಲ್ಲ. ರಜನೀಕಾಂತ್ ರಾಜಕೀಯ ಪಕ್ಷ ಘೋಷಿಸುವುದು ಸಹ ಅವರಿಗೆ ಇಷ್ಟವಿರಲಿಲ್ಲ, ಕುಟುಂಬ ಸದಸ್ಯರಿಗೆ ರಜನೀಕಾಂತ್ ಆರೋಗ್ಯದ್ದೇ ದೊಡ್ಡ ಚಿಂತೆಯಾಗಿತ್ತು' ಎಂದು ರಜನೀಕಾಂತ್ ಕುಟುಂಬಕ್ಕೆ ಆಪ್ತವಾಗಿರುವ ನಟರೊಬ್ಬರು ಹೇಳಿದ್ದಾಗಿ ತಮಿಳು ಆನ್‌ಲೈನ್ ಪತ್ರಿಕೆಯೊಂದು ವರದಿ ಮಾಡಿದೆ.

'ರಾಜಕೀಯದಲ್ಲಿ ಸಾಕಷ್ಟು ಮೋಸ, ಕಪಟ, ಮೂದಲಿಕೆಗಳು, ಸುಳ್ಳು ಹೇಳಿಕೆಗಳು, ಚಾರಿತ್ರ್ಯ ವಧಾ ಪ್ರಯತ್ನಗಳು ಇರುತ್ತವೆ. ಆದರೆ ರಜನೀಕಾಂತ್ ಸೌಮ್ಯ ಹೃದಯದವರು ಅವರಿಗೆ ಇದನ್ನೆಲ್ಲಾ ಸಹಿಸಿಕೊಳ್ಳುವ ಶಕ್ತಿ ಇಲ್ಲ ಹಾಗಾಗಿ ಅವರು ರಾಜಕೀಯಕ್ಕೆ ಹೋಗದಿರುವುದು ಒಳ್ಳೆಯದು ಎಂಬುದು ಕುಟುಂಬದವರ ಅಭಿಪ್ರಾಯವಾಗಿತ್ತಂತೆ.
ಡಿಸೆಂಬರ್ 31 ರಂದು ರಾಜಕೀಯ ಪಕ್ಷ ಘೋಷಿಸುವುದಾಗಿ ಹೇಳಿದ್ದ ರಜನೀಕಾಂತ್ ಅವರಿಗೆ ಕೆಲವು ದಿನಗಳ ಹಿಂದೆ ಅನಾರೋಗ್ಯ ಉಂಟಾಗಿತ್ತು. ಅವರು ಹೈದರಾಬಾದ್‌ನ ಅಪೊಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರ ರಕ್ತದೊತ್ತಡದಲ್ಲಿ ಏರಿಳಿತವಾಗಿದ್ದು, ಎರಡು ದಿನಗಳ ನಂತರ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಆದರೆ ಈ ಅನಾರೋಗ್ಯ ರಜನಿಕಾಂತ್ ಅವರ ರಾಜಕೀಯ ಪ್ರವೇಶ ನಿರ್ಧಾರವನ್ನು ಹಿಂತೆಗೆದುಕೊಳ್ಳಲು ಕಾರಣವಾಯಿತು.


Click it and Unblock the Notifications











