twitter
    For Quick Alerts
    ALLOW NOTIFICATIONS  
    For Daily Alerts

    ರಜನೀಕಾಂತ್ ರಾಜಕೀಯ ಪ್ರವೇಶ ಅವರ ಕುಟುಂಬದವರಿಗೆ ಇಷ್ಟವಿರಲಿಲ್ಲ!

    |

    ರಾಜಕೀಯ ಪ್ರವೇಶ ಮಾಡುತ್ತೇನೆ, ಸ್ವಂತದ ಪಕ್ಷ ಕಟ್ಟಿ, ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದ ರಜನೀಕಾಂತ್, ತಾವು ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಹೇಳಿದ್ದಾರೆ.

    Recommended Video

    ಉಲ್ಟಾ ಹೊಡೆದ Rajni ರಾಜಕೀಯ ಜೀವನ | Filmibeat Kannada

    ಒಂದು ತಿಂಗಳ ಹಿಂದಷ್ಟೆ, ರಾಜಕೀಯ ಪ್ರವೇಶಿಸುವುದಾಗಿ ಹೇಳಿದ್ದ ರಜನೀಕಾಂತ್, ಆರೋಗ್ಯದ ಕಾರಣ ನೀಡಿ ರಾಜಕೀಯದಿಂದ ದೂರ ಸರಿದಿದ್ದಾರೆ. ರಾಜಕೀಯ ಪ್ರವೇಶಿಸದಿರಲು ತಾವು ಮಾಡಿದ ನಿರ್ಧಾರಕ್ಕೆ ಆರೋಗ್ಯ ಕಾರಣ ಎಂದು ರಜನೀಕಾಂತ್ ಹೇಳಿದ್ದಾರೆ. ಆದರೆ ರಜನೀಕಾಂತ್ ರಾಜಕೀಯ ಪ್ರವೇಶ ಅವರ ಕುಟುಂಬದವರಿಗೂ ಇಷ್ಟವಿರಲಿಲ್ಲವಂತೆ.

    ರಾಜಕೀಯ ಪ್ರವೇಶ ನಿರ್ಧಾರ ಹಿಂಪಡೆದ ರಜನೀಕಾಂತ್: ಕಾರಣವೇನು?ರಾಜಕೀಯ ಪ್ರವೇಶ ನಿರ್ಧಾರ ಹಿಂಪಡೆದ ರಜನೀಕಾಂತ್: ಕಾರಣವೇನು?

    'ನಟ ರಜನೀಕಾಂತ್ ರಾಜಕೀಯ ಪ್ರವೇಶಿಸುವುದು ಸ್ವತಃ ಅವರ ಕುಟುಂಬದವರಿಗೆ ಇಷ್ಟವಿರಲಿಲ್ಲ. ರಜನೀಕಾಂತ್ ರಾಜಕೀಯ ಪಕ್ಷ ಘೋಷಿಸುವುದು ಸಹ ಅವರಿಗೆ ಇಷ್ಟವಿರಲಿಲ್ಲ, ಕುಟುಂಬ ಸದಸ್ಯರಿಗೆ ರಜನೀಕಾಂತ್ ಆರೋಗ್ಯದ್ದೇ ದೊಡ್ಡ ಚಿಂತೆಯಾಗಿತ್ತು' ಎಂದು ರಜನೀಕಾಂತ್ ಕುಟುಂಬಕ್ಕೆ ಆಪ್ತವಾಗಿರುವ ನಟರೊಬ್ಬರು ಹೇಳಿದ್ದಾಗಿ ತಮಿಳು ಆನ್‌ಲೈನ್ ಪತ್ರಿಕೆಯೊಂದು ವರದಿ ಮಾಡಿದೆ.

    Rajinikanth Family Did Not Wanted Him To Enter Politics

    'ರಾಜಕೀಯದಲ್ಲಿ ಸಾಕಷ್ಟು ಮೋಸ, ಕಪಟ, ಮೂದಲಿಕೆಗಳು, ಸುಳ್ಳು ಹೇಳಿಕೆಗಳು, ಚಾರಿತ್ರ್ಯ ವಧಾ ಪ್ರಯತ್ನಗಳು ಇರುತ್ತವೆ. ಆದರೆ ರಜನೀಕಾಂತ್ ಸೌಮ್ಯ ಹೃದಯದವರು ಅವರಿಗೆ ಇದನ್ನೆಲ್ಲಾ ಸಹಿಸಿಕೊಳ್ಳುವ ಶಕ್ತಿ ಇಲ್ಲ ಹಾಗಾಗಿ ಅವರು ರಾಜಕೀಯಕ್ಕೆ ಹೋಗದಿರುವುದು ಒಳ್ಳೆಯದು ಎಂಬುದು ಕುಟುಂಬದವರ ಅಭಿಪ್ರಾಯವಾಗಿತ್ತಂತೆ.

    ರಾಜಕೀಯದಿಂದ ಹಿಂದೆ ಸರಿದ ರಜನಿ: 'ನಿಮ್ಮ ನಿರ್ಧಾರದ ಪರ ನಿಲ್ಲುವೆ' ಎಂದ ಖುಷ್ಬೂ ರಾಜಕೀಯದಿಂದ ಹಿಂದೆ ಸರಿದ ರಜನಿ: 'ನಿಮ್ಮ ನಿರ್ಧಾರದ ಪರ ನಿಲ್ಲುವೆ' ಎಂದ ಖುಷ್ಬೂ

    ಡಿಸೆಂಬರ್ 31 ರಂದು ರಾಜಕೀಯ ಪಕ್ಷ ಘೋಷಿಸುವುದಾಗಿ ಹೇಳಿದ್ದ ರಜನೀಕಾಂತ್ ಅವರಿಗೆ ಕೆಲವು ದಿನಗಳ ಹಿಂದೆ ಅನಾರೋಗ್ಯ ಉಂಟಾಗಿತ್ತು. ಅವರು ಹೈದರಾಬಾದ್‌ನ ಅಪೊಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರ ರಕ್ತದೊತ್ತಡದಲ್ಲಿ ಏರಿಳಿತವಾಗಿದ್ದು, ಎರಡು ದಿನಗಳ ನಂತರ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಆದರೆ ಈ ಅನಾರೋಗ್ಯ ರಜನಿಕಾಂತ್ ಅವರ ರಾಜಕೀಯ ಪ್ರವೇಶ ನಿರ್ಧಾರವನ್ನು ಹಿಂತೆಗೆದುಕೊಳ್ಳಲು ಕಾರಣವಾಯಿತು.

    English summary
    Rajinikanth family did not wanted him to enter politics. Rajinikanth announced he is not entering politics.
    Wednesday, December 30, 2020, 17:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X