'ರಜನಿಕಾಂತ್ ಗೆ ಕೊರೊನಾ ಪಾಸಿಟಿವ್' ಎಂದ ಈ ನಟನ ವಿರುದ್ಧ ಮುಗಿಬಿದ್ದ ಅಭಿಮಾನಿಗಳು
ಕೊರೊನಾ ವಿಚಾರದಲ್ಲಿ ಖ್ಯಾತ ನಟ ರಜನಿಕಾಂತ್ ಗೆ ತಮಾಷೆ ಮಾಡಲು ಹೋಗಿ ನಟ ರೋಹಿತ್ ರಾಯ್ ಸಂಕಷ್ಟದಲ್ಲಿ ಸಿಲುಕ್ದಿದ್ದಾರೆ. ಎಲ್ಲಾ ವಿಚಾರದಲ್ಲೂ, ತೀರಾ ಗಂಭೀರ ಮತ್ತು ಸೂಕ್ಷ್ಮ ವಿಚಾರಗಳ ಬಗ್ಗೆ ತಮಾಷೆ ಮಾಡಲು ಹೋದರೆ ಪೇಚಿಗೆಸಿಲುಕಬೇಕಾಗುತ್ತೆ ಎನ್ನುವುದಕ್ಕೆ ನಟ ರೋಹಿತ್ ರಾಯ್ ಉದಾಹರಣೆ.
Recommended Video
ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರೋಹಿತ್ ರಾಯ್ ನಟ ರಜನಿಕಾಂತ್ ಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ ಎಂದು ಹೇಳಿ ಜೋಕ್ ಮಾಡಿದ್ದಾರೆ. ರೋಹಿತ್ ರಾಯ್ ಈ ಪೋಸ್ಟ್ ಅಭಿಮಾನಿಗಳನ್ನು ಸಿಟ್ಟಿಗೇಳಿಸಿದೆ. ನೆಟ್ಟಿಗರು ರೋಹಿತ್ ರಾಯ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮುಗಿಬಿದ್ದಿದ್ದಾರೆ. ಮುಂದೆ ಓದಿ..

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಕೊರೊನಾ ಸೋಂಕು
ಇಡೀ ವಿಶ್ವವನ್ನೆ ಆವರಿಸಿರುವ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಆತಂಕ ಹೆಚ್ಚಿಸುತ್ತಿದೆ. ಅದರಲ್ಲೂ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿ ಆಗುತ್ತಿದೆ. ಒಂದೆಡೆ ಲಾಕ್ ಡೌನ್ ಸಡಿಲಿಕೆ ಆಗುತ್ತಿದೆ. ಆದರೆ ಕೊರೊನಾ ಮಾತ್ರ ತನ್ನ ಕಬಂದಬಾಹು ಚಾಚುತ್ತ ಎಲ್ಲಾ ಕಡೆ ಕಡೆ ಹಬ್ಬುತ್ತಿದೆ.

ರಜನಿಕಾಂತ್ ಬಗ್ಗೆ ರೋಹಿತ್ ರಾಯ್ ಪೋಸ್ಟ್ ಹೀಗಿದೆ
ರೋಹಿತ್ ರಾಯ್ "ರಜನಿಕಾಂತ್ ಗೆ ಕೊರೊನಾ ಪಾಸಿಟಿವ್ ಬಂದಿದೆ. ಆದರೆ ಕೊರೊನಾನೆ ಈಗ ಕ್ವಾರಂಟೈನ್ ಆಗಿದೆ" ಎಂದು ರಜನಿಕಾಂತ್ ಅವರ ಪವರ್ ಹೊಗಳು ಹೋಗಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೊರೊನಾ ವಿಚಾರದಲ್ಲಿ ಈ ರೀತಿಯ ತಮಾಷೆ ಮಾಡುವುದು ಎಷ್ಟು ಸರಿ ಎಂದು ನೆಟ್ಟಿಗರು ಬಾಯಿಗೆ ಬಂದ ಹಾಗೆ ಕಾಮೆಂಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೊರೊನಾ ಬಗ್ಗೆ ರೋಹಿತ್ ಪೋಸ್ಟ್
ರಜನಿಕಾಂತ್ ಬಗ್ಗೆ ಪೋಸ್ಟ್ ಮಾಡಿ ರೋಹಿತ್ ರಾಯ್ ಸಾಮಾಜಿಕ ಜಾಲತಾಣದಲ್ಲಿ "ಕರೊನಾವನ್ನು ಸೋಲಿಸೋಣ. ನಾವು ಕೆಲಸಕ್ಕೆ ಮರಳಿದಾಗ ಸುರಕ್ಷಿತವಾಗಿರಿ. ಮಾಸ್ಕ್ ಅನ್ನು ಧರಿಸಿ. ಯಾವಾಗಲು ಕೈ ತೊಲೆಯುತ್ತೀರಿ, ಸ್ವಚ್ಛವಾಗಿರಿ" ಎಂದು ಬರೆದುಕೊಂಡಿದ್ದಾರೆ.

ಕ್ಷಮೆ ಕೇಳಿದ ನಟ
"ಇಷ್ಟು ಕೆಟ್ಟವರಾಗಬೇಡಿ. ಇದು ಜೋಕ್ ಅಷ್ಟೆ. ಕತ್ತಾದ ಅರ್ಥ ಬರುತ್ತೆ ಎಂದು ನಾನು ಭಾವಿಸಿರಲಿಲ್ಲ. ಇದು ಒಂದು ವಿಶಿಷ್ಟವಾದ ರಜನಿ ಸರ್ ಜೋಕ್. ಇದರ ಉದ್ದೇಶ ನಿಮ್ಮಲ್ಲಿ ನಗುತರಿಸುವುದಾಗಿತ್ತು ಅಷ್ಟೆ. ಕಾಮೆಂಟ್ ಮಾಡುವ ಮೊದಲು ಆಲೋಚನೆಯನ್ನು ಯೋಚಿಸಿ. ನಿಮ್ಮಲ್ಲರನ್ನು ನೋವಿಸುವ ಸಲುವಾಗಿ ನಾನು ತಮಾಷೆ ಮಾಡಲಿಲ್ಲ. ಈ ರೀತಿಯ ಕಾಮೆಂಟ್ ಗಳು ನನಗೆ ನೋವುಂಟು ಮಾಡಿದೆ." ಎಂದು ಕ್ಷಮೆ ಕೇಳಿ ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











